ಮಡಿಕೇರಿ, ಜ. ೪: ವಿಶೇಷಚೇತನರ ರಿಯಾಯಿತಿ ದರದ ಬಸ್‌ಪಾಸ್‌ಗಳನ್ನು ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸಿ, ನವೀಕರಿಸಿಕೊಳ್ಳಲು ಅನುಕೂಲವಾಗುವಂತೆ ಸಾಕಷ್ಟು ಕಾಲಾವಕಾಶ ನೀಡುವ ಉದ್ದೇಶದಿಂದ, ೨೦೨೨ನೇ ಸಾಲಿನಲ್ಲಿ ವಿತರಿಸಲಾಗಿರುವ ಮತ್ತು ೨೦೨೨ ರ ಡಿಸೆಂಬರ್ ೩೧ ರವರೆಗೆ ಮಾನ್ಯತೆ ಇರುವ, ವಿಶೇಷಚೇತನರ ಪಾಸ್‌ಗಳನ್ನು ೨೦೨೩ ರ ಫೆಬ್ರವರಿ, ೨೮ ರವರೆಗೆ ಮಾನ್ಯ ಮಾಡಲಾಗಿದೆ.
೨೦೨೨ನೇ ಸಾಲಿನ ಪಾಸುಗಳ ನವೀಕರಣ ಮತ್ತು ನೂತನ ಪಾಸುಗಳನ್ನು ೨೦೨೨ ರ ಡಿಸೆಂಬರ್, ೨೬ ರಿಂದ ವಿತರಿಸಲು ಅವಕಾಶ ಕಲ್ಪಿಸಿದ್ದು ಆನ್‌ಲೈನ್‌ನಲ್ಲಿ ಸರ್ಕಾರ ನಿಗದಿಪಡಿಸಿರುವ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
೨೦೨೩ ನೇ ಸಾಲಿನ ಪಾಸುಗಳ ನವೀಕರಣ ಮತ್ತು ನೂತನ ಪಾಸುಗಳಿಗೆ ರೂ.೬೬೦ ಶುಲ್ಕ ನಿಗದಿಪಡಿಸಲಾಗಿದೆ. ಇದನ್ನು ನಗದಾಗಿ ಅಥವಾ ಡಿ.ಡಿ. ರೂಪದಲ್ಲಿ ಪಾವತಿಸಿ ವಿಶೇಷಚೇತನರ ರಿಯಾಯಿತಿ ದರದ ಬಸ್‌ಪಾಸ್ ಗಳನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಕಚೇರಿ ದೂ.ಸಂ. ೦೮೨೭೨-೨೯೫೮೨೯ರಲ್ಲಿ ಮಾಹಿತಿಯನ್ನು ಪಡೆದು ಕೊಳ್ಳಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.