ಸೋಮವಾರಪೇಟೆ, ಜ. ೪: ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದಲ್ಲಿರುವ ಕೊತ್ನಳ್ಳಿ, ಕುಡಿಗಾಣ, ಕುಮಾರಳ್ಳಿ ಗ್ರಾಮಕ್ಕೆ ಸಂಬAಧಿಸಿದ ಜನವಸತಿ ಹಾಗೂ ಕೃಷಿ ಪ್ರದೇಶವನ್ನು ಒಳಗೊಂಡAತೆ ಪುಷ್ಪಗಿರಿ ವನ್ಯಜೀವಿ ವಿಭಾಗದಿಂದ ಗಡಿ ಗುರುತು ಮಾಡಿದ್ದು, ಇದರಿಂದ ಉದ್ಭವವಾಗಿರುವ ಗೊಂದಲವನ್ನು ಬಗೆಹರಿಸುವಲ್ಲಿ ಮತ್ತೆ ಅಧಿಕಾರಿಗಳು ವಿಫಲರಾಗಿದ್ದಾರೆ. ಇದು ಗ್ರಾಮಸ್ಥರು ಹಾಗೂ ಸರ್ಕಾರಿ ಇಲಾಖೆಯ ನಡುವೆ ಸಂಘರ್ಷದ ವಾತಾವರಣ ಸೃಷ್ಟಿಸಲು ಕಾರಣವಾಗಿದೆ.
ನಿನ್ನೆ ರಾತ್ರಿ ೧೦.೩೦ರವರೆಗೂ ತಾಲೂಕು ದಂಡಾಧಿಕಾರಿಗಳು ಕೊತ್ನಳ್ಳಿ ಗ್ರಾಮಸ್ಥರೊಂದಿಗೆ ಅರಣ್ಯದಲ್ಲೇ ಉಳಿದಿದ್ದು, ನಂತರ ಮನೆಗೆ ವಾಪಸ್ ಆಗಿದ್ದಾರೆ. ಗಡಿ ಗುರುತು ಗೊಂದಲ ಬಗೆಹರಿಸಲು ಜಿಲ್ಲಾಧಿಕಾರಿಗಳೇ ಮಧ್ಯೆ ಪ್ರವೇಶ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಒಟ್ಟಾರೆ ಈ ಗಡಿ ಸಂಘರ್ಷ ಶೀಘ್ರ ಇತ್ಯರ್ಥವಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆ-ಗ್ರಾಮಸ್ಥರ ನಡುವೆ ಸಂಘರ್ಷಕ್ಕೆ ವೇದಿಕೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕೊತ್ನಳ್ಳಿ, ಕುಮಾರಳ್ಳಿ, ಕುಡಿಗಾಣ ಗ್ರಾಮ ವ್ಯಾಪ್ತಿಯು ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶಕ್ಕೆ ಒತ್ತಿಕೊಂಡAತೆ ಇದ್ದು, ಈ ಹಿಂದೆ ಇದ್ದ ಅರಣ್ಯ ಪ್ರದೇಶದ ಗಡಿಯಿಂದ ದೂರವೇ ಇದೆ. ಆದರೆ ಇತ್ತೀಚೆಗಷ್ಟೇ ವನ್ಯಜೀವಿ ವಿಭಾಗದ ಅಧಿಕಾರಿಗಳು ಸರ್ವೆ ನಡೆಸಿ ಗ್ರಾಮಕ್ಕೆ ಸಮೀಪವೇ ಗಡಿ ಗುರುತು ಮಾಡಿ ಗಡಿ ಕಲ್ಲುಗಳನ್ನು ನೆಟ್ಟಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಈ ಬಗ್ಗೆ ಹಲವು ಸುತ್ತಿನ ಮಾತುಕತೆ ನಡೆದರೂ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿಲ್ಲ.
ಈ ಹಿನ್ನೆಲೆ ಕಳೆದ ತಿಂಗಳು ಪುಷ್ಪಗಿರಿ ವನ್ಯಜೀವಿ ವಲಯದ ಎಸಿಎಫ್ ಶ್ರೀನಿವಾಸ್ ನಾಯಕ್, ಆರ್ಎಫ್ಓ ವಿಮಲ್ಬಾಬು ಸೇರಿದಂತೆ
(ಮೊದಲ ಪುಟದಿಂದ) ಇಲಾಖೆಯ ಇತರ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊAದಿಗೆ ಗ್ರಾಮಸ್ಥರು ಸಭೆ ಆಯೋಜಿಸಿದ್ದರು. ನಂತರ ನೂರಾರು ಮಂದಿ ಗ್ರಾಮಸ್ಥರೊಂದಿಗೆ ಗಡಿ ಕಲ್ಲುಗಳನ್ನು ನೆಟ್ಟಿರುವ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಲಾಯಿತು. ಈ ಸಂದರ್ಭ ಹೊಸದಾಗಿ ಕಲ್ಲುಗಳನ್ನು ನೆಟ್ಟಿರುವ ಸ್ಥಳದಿಂದಲೇ ಸರ್ವೆ ಮಾಡಲು ಅಧಿಕಾರಿಗಳು ಮುಂದಾಗಿದ್ದರಿAದ ಆಕ್ರೋಶಗೊಂಡ ಗ್ರಾಮಸ್ಥರು, ಇಲಾಖೆಯ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಈ ಹಿಂದೆ ೮ ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವಿದ್ದುದು ಇದೀಗ ೧೧ ಸಾವಿರಕ್ಕೆ ಏರಿಕೆಯಾಗಿದೆ. ಇಡೀ ಗ್ರಾಮಗಳನ್ನು ಅರಣ್ಯಕ್ಕೆ ಸೇರ್ಪಡೆಗೊಳಿಸುವ ಹುನ್ನಾರ ನಡೆಸಲಾಗಿದೆ. ಹೀಗಾದರೆ ನಾವುಗಳು ಬದುಕುವುದಾದರೂ ಹೇಗೆ? ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಸಂದರ್ಭ ಎಸಿಎಫ್ ಶ್ರೀನಿವಾಸ್ ನಾಯಕ್ ಅವರು, ಹಳೆಯ ಗಡಿಕಲ್ಲು ಇರುವ ಪ್ರದೇಶಕ್ಕೂ ಈಗಿನ ಕಲ್ಲುಗಳಿರುವ ಸ್ಥಳಕ್ಕೂ ಜಿಪಿಎಸ್ನಲ್ಲಿ ವ್ಯತ್ಯಾಸವಿದ್ದು, ಮೂಲ ಗಡಿ ಕಲ್ಲುಗಳನ್ನೇ ಅಭಯಾರಣ್ಯದ ಗಡಿ ಎಂದು ಗುರುತಿಸಿ ಕಲ್ಲುಗಳನ್ನು ಅಳವಡಿಸಲಾಗುವುದು. ಕುಮಾರಳ್ಳಿ ಗ್ರಾಮದ ಸ.ನಂ. ೧/೯ಪಿ೯೯ರಲ್ಲಿ ಗೊಂದಲವಿದ್ದು, ಅಭಯಾರಣ್ಯಕ್ಕೆ ಹೆಚ್ಚಿನ ಪ್ರದೇಶ ದಾಖಲಾಗಿದೆ. ಈ ಬಗ್ಗೆ ತಹಶಿಲ್ದಾರ್ರಿಗೆ ಪತ್ರ ಬರೆದಿದ್ದು, ಅಭಯಾರಣ್ಯ ಪ್ರದೇಶವನ್ನು ಮ್ಯೂಟೇಷನ್ ಮಾಡಲು ಮನವಿ ಮಾಡಲಾಗಿದೆ. ಜನವರಿ ೩ ರಂದು ಸರ್ವೆ, ಕಂದಾಯ ಇಲಾಖೆ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಗಡಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದರು.
ಅದರಂತೆ ನಿನ್ನೆ ಬೆಳಿಗ್ಗೆ ೧೧ ಗಂಟೆಗೆ ಗ್ರಾಮಸ್ಥರು ಹಾಗೂ ವಿವಿಧ ಇಲಾಖಾಧಿಕಾರಿಗಳನ್ನು ಒಳಗೊಂಡ ತಂಡ ಗಡಿ ಗುರುತು ಮಾಡಿರುವ ಅರಣ್ಯ ಪ್ರದೇಶಕ್ಕೆ ತೆರಳಿದ್ದು, ಅಂತಿಮ ಕ್ಷಣದವರೆಗೂ ಸಮಸ್ಯೆ ಇತ್ಯರ್ಥವಾಗದೇ ಮತ್ತೆ ಸಭೆಯನ್ನು ತಾ. ೯ಕ್ಕೆ ನಿಗದಿ ಮಾಡುವಂತಾಗಿದೆ.
ತಹಶೀಲ್ದಾರ್ ಎಸ್.ಎನ್. ನರಗುಂದ್, ಎಡಿಎಲ್ಆರ್ ವಿರೂಪಾಕ್ಷ, ಪುಷ್ಪಗಿರಿ ವನ್ಯ ಜೀವಿ ವಿಭಾಗದ ಆರ್ಎಫ್ಓ ವಿಮಲ್ ಬಾಬು, ಎಸಿಎಫ್ ಶ್ರೀನಿವಾಸ್ ನಾಯಕ್ ಸೇರಿದಂತೆ ಸ್ಥಳೀಯ ಅರಣ್ಯಾಧಿಕಾರಿಗಳು, ಮಡಿಕೇರಿಯಿಂದ ಆಗಮಿಸಿದ್ದ ಫಾರೆಸ್ಟ್ ಸರ್ವೆ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿದ್ದರು.
ಈ ಸಂದರ್ಭ ಎಸಿಎಫ್, ಎಡಿಎಲ್ಆರ್, ತಹಶೀಲ್ದಾರ್ ಅವರುಗಳು ಜೀಪಿನಲ್ಲಿ ಭಕ್ತಿ ಕ್ಯಾಂಪ್ಗೆ ತೆರಳಿದ್ದು, ಉಳಿದವರು ಬೀದಳ್ಳಿ ಕ್ಯಾಂಪ್ನಿAದ ಕಾಲ್ನಡಿಗೆಯಲ್ಲಿ ಅರಣ್ಯ ಗಡಿ ಪ್ರದೇಶಕ್ಕೆ ತೆರಳಿದರು. ಗಡಿ ಗುರುತಿಸುವ ಬಗ್ಗೆ ಜಿಪಿಎಸ್ ಸರ್ವೆ ಮಾಡಲು ಮುಂದಾದ ಸಂದರ್ಭ, ಹೊಸದಾಗಿ ಅಳವಡಿಸಿರುವ ಸ್ಥಳಕ್ಕೆ ಜಿಪಿಎಸ್ ಪಾಯಿಂಟ್ ಸಿಗುತ್ತಿದ್ದರಿಂದ ಮತ್ತೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಜಿಪಿಎಸ್ ಪಾಯಿಂಟ್ ಹಳೆಯ ಗಡಿ ಪ್ರದೇಶಕ್ಕೆ ಸಿಗುತ್ತಿತ್ತು. ಇದೀಗ ಹೊಸದಾಗಿ ನಿಲ್ಲಿಸಿರುವ ಕಲ್ಲುಗಳಿಗೆ ಜಿಪಿಎಸ್ ಪಾಯಿಂಟ್ ಸಿಗುತ್ತಿರುವುದು ಅನುಮಾನ ಮೂಡಿಸಿದೆ. ಇಷ್ಟೇ ಅಲ್ಲದೆ ಮೊನ್ನೆ ದಿನ ರಾತ್ರಿ ವೇಳೆ ಸಿಸಿಎಫ್, ಡಿಎಫ್ಓ, ಎಸಿಎಫ್, ಆರ್ಎಫ್ಓ ಅವರುಗಳು ಭಕ್ತಿ ಕ್ಯಾಂಪ್ನಿAದ ಬೀದಳ್ಳಿ ಕ್ಯಾಂಪ್ಗೆ ಕಾಲ್ನಡಿಗೆಯಲ್ಲಿ ತೆರಳಿದ್ದಾರೆ. ಇದು ಜನರನ್ನು ಮೋಸಗೊಳಿಸುವ ತಂತ್ರವಾಗಿದೆ. ರಾತ್ರೋರಾತ್ರಿ ಅಧಿಕಾರಿಗಳು ಬಂದು ಸರ್ವೆ ಮಾಡಲು ಕಾರಣವೇನು? ಎಂದು ಗ್ರಾಮಸ್ಥರು ಪ್ರಶ್ನೆಗಳ ಸುರಿಮಳೆಗೈದರು.
ನಮ್ಮನ್ನು ಇಲ್ಲಿಂದ ಒಕ್ಕಲೆಬ್ಬಿಸಲು ಬಂದಿದ್ದೀರಾ? ತಲೆತಲಾಂತರದಿAದ ಬದುಕು ಕಟ್ಟಿಕೊಂಡಿರುವ ಮೂಲ ನಿವಾಸಿಗಳ ಬದುಕು ಮೂರಾಬಟ್ಟೆ ಮಾಡುವ ಹುನ್ನಾರವನ್ನು ಅರಣ್ಯ ಇಲಾಖೆ ನಡೆಸುತ್ತಿದೆ ಎಂದು ಆಕ್ರೋಶಿತರಾದರು.
ಇದರೊಂದಿಗೆ ಸಮಸ್ಯೆ ಇಷ್ಟೊಂದು ಗಂಭೀರವಾಗಿದ್ದರೂ ಸರ್ವೆ ಹಾಗೂ ಕಂದಾಯ ಇಲಾಖೆಯಿಂದ ಯಾವುದೇ ದಾಖಲೆಗಳನ್ನು ತಂದಿಲ್ಲ. ಇದೀಗ ಜಿಪಿಎಸ್ ಪಾಯಿಂಟ್ ಮೂಲ ಗಡಿ ಬಿಟ್ಟು ಹೊಸದಾಗಿ ಮಾಡಿದ ಗಡಿಗೆ ಹೋಗುತ್ತಿದೆ. ಇದು ಜನತೆಗೆ ಮಾಡುತ್ತಿರುವ ಮೋಸ. ಸ್ಥಳಕ್ಕೆ ಜಿಲ್ಲಾಧಿಕಾರಿಗಳೇ ಬರಬೇಕೆಂದು ಮೂಲ ಗಡಿಯ ಸ್ಥಳದಲ್ಲೇ ಕುಳಿತು ಕೆಲ ಕಾಲ ಒತ್ತಾಯಿಸಿದರು.
ನಂತರ ತಹಶೀಲ್ದಾರ್ ಇದ್ದ ಭಕ್ತಿ ಕ್ಯಾಂಪ್ಗೆ ತೆರಳಿದ ಗ್ರಾಮಸ್ಥರು, ಕಂದಾಯ ಹಾಗೂ ಸರ್ವೆ ಇಲಾಖೆಯ ವಿರುದ್ಧ ಆಕ್ರೋಶ ಹೊರಹಾಕಿದರು. ಈ ಹಿಂದೆ ನಡೆದ ಸಭೆಯಲ್ಲಿ ಗ್ರಾಮಸ್ಥರಿಗೆ ನೀಡಿದ ಒಂದೂ ಭರವಸೆಯನ್ನು ಈಡೇರಿಸಿಲ್ಲ. ೧೧ ಸಾವಿರ ಏಕರೆ ಅರಣ್ಯ ಪ್ರದೇಶದ ಬದಲಿಗೆ ೮ ಸಾವಿರಕ್ಕೆ ಗಡಿ ಗುರುತು ಮಾಡುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರಲ್ಲದೆ, ಜಿಲ್ಲಾಧಿಕಾರಿಗಳನ್ನು ಕರೆಸಿ ಎಂದು ಒತ್ತಾಯಿಸಿದರು.
ಡಿ.ಸಿ. ಬರುವವರೆಗೂ ತಮ್ಮನ್ನು ಇಲ್ಲಿಂದ ತೆರಳಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟುಹಿಡಿದರು. ಈ ಸಂದರ್ಭ ಎಡಿಎಲ್ಆರ್ ವಿರೂಪಾಕ್ಷ ಅವರು ಗ್ರಾಮಸ್ಥರನ್ನು ಉದ್ದೇಶಿಸಿ ‘ನೀವ್ ಏನ್ ಮಾಡ್ಕೋತೀರೋ ಮಾಡ್ಕೊಳ್ಳಿ’ ಎಂದರು. ಈ ಮಾತಿಗೆ ಮತ್ತೆ ಆಕ್ರೋಶ ಹೊರಹಾಕಿದ ಗ್ರಾಮಸ್ಥರು, ಹೆಗ್ಗಡಮನೆ ಗ್ರಾಮದಲ್ಲಿ ಸಾವಿದ್ದರೂ ಸಹ ನಾವೆಲ್ಲರೂ ಕೆಲಸ ಕಾರ್ಯ ಬಿಟ್ಟು ಬಂದಿದ್ದೇವೆ. ಗ್ರಾಮಸ್ಥರ ಭವಿಷ್ಯದ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದು ಸಿಡಿಮಿಡಿಗೊಂಡರು.
ಈಗಿರುವ ೧೧ ಸಾವಿರ ಏಕರೆ ಅರಣ್ಯ ಪ್ರದೇಶದ ದಾಖಲೆಯನ್ನು ೮ ಸಾವಿರಕ್ಕೆ ಇಳಿಸುವ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಅರಣ್ಯ ಇಲಾಖೆಗೆ ಸೇರಿದ ಭಕ್ತಿ ಹಾಗೂ ಬೀದಳ್ಳಿ ಕ್ಯಾಂಪ್ಗೆ ಬೀಗ ಜಡಿದು ಅಲ್ಲೇ ಧರಣಿ ಕೂರುತ್ತೀವಿ ಎಂದು ಗ್ರಾಮಸ್ಥರು ಎಚ್ಚರಿಸಿದರು.
ಅಂತಿಮವಾಗಿ ರಾತ್ರಿ ೧೦.೩೦ಕ್ಕೆ ತಹಶೀಲ್ದಾರ್ ನರಗುಂದ್ ಅವರು, ತಾ. ೯ರಂದು ತಾಲೂಕು ಕಚೇರಿಯಲ್ಲಿ ಗ್ರಾಮಸ್ಥರನ್ನು ಒಳಗೊಂಡAತೆ ಸಂಬAಧಿಸಿದ ಎಲ್ಲಾ ಇಲಾಖಾಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಇತ್ಯರ್ಥ ಪಡಿಸಲಾಗುವುದು ಎಂದು ಬರವಣಿಗೆ ಮೂಲಕ ಭರವಸೆ ನೀಡಿದ ನಂತರ ಎಲ್ಲರೂ ಅರಣ್ಯದಿಂದ ಹೊರ ಬಂದರು.
ಈ ಸಂದರ್ಭ ಕುಮಾರಳ್ಳಿ ಗ್ರಾಮದ ಅಧ್ಯಕ್ಷ ಉದಯ್, ಕೊತ್ನಳ್ಳಿ ಗ್ರಾಮಾಧ್ಯಕ್ಷ ರಾಮಚಂದ್ರ, ಕುಡಿಗಾಣದ ಅಧ್ಯಕ್ಷ ಎಂ.ಟಿ. ದಿನೇಶ್, ಪ್ರಮುಖರಾದ ಅರುಣ್ ಕೊತ್ನಳ್ಳಿ, ಬೀದಳ್ಳಿ ಗಿರೀಶ್, ಕುಡಿಗಾಣ ಈಶ್ವರ್, ಬೀದಳ್ಳಿ ತಮ್ಮಯ್ಯ, ಕೊತ್ನಳ್ಳಿ ರಾಜೇಶ್, ದೇಶ್ರಾಜ್, ಚಿಣ್ಣಪ್ಪ ಕುಮಾರಳ್ಳಿ, ಚಂದ್ರ ಸೇರಿದಂತೆ ನೂರಾರು ಮಂದಿ ಗ್ರಾಮಸ್ಥರು ಉಪಸ್ಥಿತರಿದ್ದರು.