ಮಡಿಕೇರಿ, ಜ. ೩: ಬಲ್ಲಮಾವಟಿ ಗ್ರಾಮ ಪಂಚಾಯಿತಿಯ ಪೇರೂರು ಇಗ್ಗುತಪ್ಪ ದೇವಸ್ಥಾನ ಬಳಿಯ ಪೈಸಾರಿ ಕೆರೆಯನ್ನು ಅಮೃತ ಸರೋವರ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದ್ದು, ಉದ್ಘಾಟನೆಯನ್ನು ಮಾಜಿ ಮಂಡಲ ಪ್ರಧಾನರಾದ ಮೂವೇರ ನಾಣಪ್ಪ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಒಂದೂವರೆ ಎಕರೆ ಕೆರೆ ವ್ಯಾಪ್ತಿಯ ಜಾಗವನ್ನು ಮಹಾತ್ಮ ಗಾಂಧಿ ರಾಷ್ಟಿçÃಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಅಂದಾಜು ರೂ. ೭ ಲಕ್ಷ ವೆಚ್ಚದಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಕೆರೆಯ ಹೂಳು ತೆಗೆದು, ಕಳೆ ಗಿಡಗಳನ್ನು ತೆರವುಗೊಳಿಸಲಾಗಿದೆ. ನೀರು ಹರಿದು ಬರುವ ಕಾಲುವೆಗಳ ಪುನಶ್ಚೇತನ, ಕೆರೆ ಏರಿ ದುರಸ್ತಿಯನ್ನು ಕೆಲಸವನ್ನು ಮಾಡಲಾಗಿದೆ. ಕೆರೆಯ ಅಂಚಿನ ಖಾಲಿ ಪ್ರದೇಶದಲ್ಲಿ ಅಲಂಕಾರಿಕ ಗಿಡ - ೧೫೦, ಹೂವಿನ ಗಿಡ ೧೫೦ ಹಾಗೂ ವಿರಳವಾಗಿರುವ ಅಪರೂಪದ ಹಣ್ಣಿನ ಗಿಡಗಳಾದ ಪಾಲೆ ಹಣ್ಣು, ಆಮೆ ಹಣ್ಣು, ರಂಜಳ ಹಣ್ಣು, ಕರ್ಮಾಜ ಹಣ್ಣು ಸೇರಿದಂತೆ ವಿವಿಧ ರೀತಿಯ ೧೫೦ ಹಣ್ಣಿನ ಗಿಡಗಳನ್ನು ನೆಡಲಾಗಿದೆ. ವೀಕ್ಷಿಸಲು ವ್ಯೂ ಪಾಯಿಂಟ್ ಅನ್ನು ನಿರ್ಮಿಸಲಾಗಿರುತ್ತದೆ ಎಂದರು.
ಮಿಷನ್ ಅಮೃತ ಸರೋವರದ ಉದ್ದೇಶ: ಜಲಮೂಲಗಳನ್ನು ಸಂರಕ್ಷಣೆ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶ. ಗ್ರಾಮೀಣ ಭಾಗದಲ್ಲಿ ಜಲ ಭದ್ರತೆ ಕಾಪಾಡುವುದರ ಜೊತೆಗೆ ಜನರ ನೀರಿನ ಬವಣೆ ನೀಗಿಸುವುದು, ಕೃಷಿ ಚಟುವಟಿಕೆ, ಅರಣ್ಯೀಕರಣ ಹಾಗೂ ಪರಿಸರ ಸಮತೋಲನ ಕಾಪಾಡುವುದು, ಗ್ರಾಮೀಣ ಜನತೆಗೆ ಉದ್ಯೋಗಾವಕಾಶವನ್ನು ಕಲ್ಪಿಸಿ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗುವAತೆ ಮಾಡುವ ಆಶಯಗಳನ್ನೂ ಈ ಯೋಜನೆ ಹೊಂದಿದೆ.