ಮಡಿಕೇರಿ, ಜ. ೩: ಕೊಡಗು ರೆಡ್‌ಕ್ರಾಸ್ ಸಂಸ್ಥೆಗೆ ರಾಜ್ಯ ರೆಡ್‌ಕ್ರಾಸ್ ಸಂಸ್ಥೆ ಮತ್ತು ಎನ್‌ಹೆಚ್‌ಕ್ಯೂ ವತಿಯಿಂದ ತುರ್ತು ಚಿಕಿತ್ಸಾ ವಾಹನವನ್ನು ನೀಡಲಾಗಿದೆ. ಈ ವಾಹನವನ್ನು ದೆಹಲಿಯಿಂದ ಮಡಿಕೇರಿಗೆ ಚಾಲಿಸಿ ತಂದು ರೆಡ್‌ಕ್ರಾಸ್ ಸಂಸ್ಥೆಗೆ ಒಪ್ಪಿಸಿದ ಯೂತ್ ರೆಡ್‌ಕ್ರಾಸ್‌ನ ಅಧ್ಯಕ್ಷ ಧನಂಜಯ ಅವರನ್ನು ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯಿAದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ರೆಡ್‌ಕ್ರಾಸ್ ಜಿಲ್ಲಾ ಸಭಾಪತಿ ಬಿ.ಕೆ. ರವೀಂದ್ರ ರೈ, ಕಾರ್ಯದರ್ಶಿ ಮುರಳೀಧರ್, ಸದಸ್ಯರುಗಳಾದ ಬಿ.ಜಿ. ಅನಂತಶಯನ, ಸತೀಶ್ ರೈ, ವಿಜಯ ಶೆಟ್ಟಿ, ಶರತ್ ಶೆಟ್ಟಿ, ಉತ್ತಯ್ಯ, ಕೌಸರ್ ಮತ್ತು ಸಿಬ್ಬಂದಿ ಮಿಲನ ಹಾಜರಿದ್ದರು.