ಗೋಣಿಕೊಪ್ಪ ವರದಿ, ಜ. ೨: ಸ್ವಾಮಿ ವಿವೇಕಾನಂದ ಯೂತ್‌ಮೂವ್‌ಮೆಂಟ್, ಮಾಯಮುಡಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಮಹಿಳಾ ಸಮಾಜ ಸಭಾಂಗಣದಲ್ಲಿ ಗಿರಿಜನ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ನಡೆಯಿತು.

ಹಣ್ಣು, ಬಳೆ, ಕುಂಕುಮ ಮಡಿಲಿಗೆ ಒಪ್ಪಿಸುವ ಮೂಲಕ ಆಶೀರ್ವದಿಸಲಾಯಿತು. ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಶೋಕ್‌ಕುಮಾರ್ ತಾಯಿ, ಮಗುವಿನ ಆರೋಗ್ಯ ರಕ್ಷಣೆ ಬಗ್ಗೆ ಸಲಹೆ ನೀಡಿದರು. ಕ್‌ಗ್ಗಟ್ಟ್ನಾಡ್ ನಾಗರಿಕ ವೇದಿಕೆ ಅಧ್ಯಕ್ಷ ಕಾಟಿಮಡ ಜಿಮ್ಮಿ ಅಣ್ಣಯ್ಯ ಉದ್ಘಾಟಿಸಿದರು.

ವಿವೇಕಾನಂದ ಯೂತ್‌ಮೂವ್‌ಮೆಂಟ್ ಖಜಾಂಜಿ ಡಾ. ಕೆ.ಎನ್. ಚಂದ್ರಶೇಖರ್, ಮಾಯಮುಡಿ ಗ್ರಾ.ಪಂ. ಅಧ್ಯಕ್ಷೆ ಎಂ.ಪಿ. ಮೀನಾ, ಉಪಾಧ್ಯಕ್ಷೆ ಕೆ.ವಿ. ಸುಮಿತ್ರ, ಪಿಡಿಒ ಎಸ್.ಪಿ. ಗಿರೀಶ್‌ಕುಮಾರ್, ವಿವೇಕಾನಂದ ಯೂತ್‌ಮೂವ್‌ಮೆಂಟ್ ಕಾರ್ಯಕರ್ತೆ ಕುಸುಮ ಇದ್ದರು.