ಮಡಿಕೇರಿ, ಜ. ೨: ಕೊಡಗು ಜಿಲ್ಲೆಯ ಹೆಚ್ಚುವರಿ ಎಸ್.ಪಿ. ಆಗಿ ಕೆ.ಎಸ್. ಸುಂದರರಾಜ್ ನೇಮಕಗೊಂಡಿದ್ದಾರೆ. ಚಾಮರಾಜ ನಗರದ ಎ.ಎಸ್.ಪಿ. ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸುಂದರರಾಜ್ ಅವರು ಈ ಹಿಂದೆ ಕೊಡಗು ಜಿಲ್ಲೆಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಆಗಿ, ಡಿ.ವೈ.ಎಸ್.ಪಿ. ಆಗಿ ಕಾರ್ಯ ನಿರ್ವಹಿಸಿದ್ದರು. ರಾಷ್ಟçಪತಿ ಪದಕ ಪಡೆದ ಅಧಿಕಾರಿಯಾಗಿರುವ ಇವರನ್ನು ಕೊಡಗು ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ ಮಾಡಿ ಸರ್ಕಾರ ಇಂದು ಆದೇಶ ಹೊರಡಿಸಿದೆ.