ಕೂಡಿಗೆ, ಜ. ೩: ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಸೀಗೆಹೊಸೂರು ಗ್ರಾಮ ಸೇರಿದಂತೆ ಉಪ ಗ್ರಾಮಗಳ ರೈತರು ತಮ್ಮ ಸ್ವಾಧೀನದಲ್ಲಿರುವ ಜಮೀನಿನ ಹಕ್ಕುಪತ್ರವನ್ನು ಪಡೆಯಲು ಈಗಾಗಲೇ ನಮೂನೆ ೫೭ ಅರ್ಜಿಗಳನ್ನು ಕಂದಾಯ ಇಲಾಖೆಗೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ತಂಡ ಆಯಾ ರೈತರ ಜಮೀನಿಗೆ ತೆರಳಿ ಜಮೀನಿನ ಸಮೀಕ್ಷೆ ಸೇರಿದಂತೆ ದಾಖಲೆಗಳ ಪರಿಶೀಲನೆ ನಡೆಸಿತು.
ಈ ಸಂದರ್ಭ ಕಂದಾಯ ಇಲಾಖೆಯ ಉಪ ತಹಶೀಲ್ದಾರ್ ಮಧುಸೂದನ್, ಕಂದಾಯ ನಿರೀಕ್ಷಕ ಸಂತೋಷ್, ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್, ಸಹಾಯಕ ಲೋಕೇಶ್ ಸೇರಿದಂತೆ ರೈತರು ಹಾಜರಿದ್ದರು.