ಮಡಿಕೇರಿ, ಜ. ೨: ಮಡಿಕೇರಿ ನಗರದ ದೇಚೂರು, ಚೈನ್‌ಗೇಟ್, ಗೌಡ ಸಮಾಜದ ಕೆಳಭಾಗ, ಖಾಸಗಿ ಬಸ್ ನಿಲ್ದಾಣ, ಜ.ತಿಮ್ಮಯ್ಯ ಮತ್ತು ಸುದರ್ಶನ ವೃತ್ತವನ್ನೊಳಗೊಂಡ ಸುದರ್ಶನ ಗೌಡ ಕೂಟದ ೧೪ನೇ ವರ್ಷದ ವಾರ್ಷಿಕ ಸಭೆ ಹಾಗೂ ಸಾಂಸ್ಕೃತಿಕ ಸಂತೋಷ ಕೂಟ ತಾ.೮ರಂದು ಪೂರ್ವಾಹ್ನ ೯.೩೦ ಗಂಟೆಗೆ ಕೊಡಗು ಗೌಡ ವಿದ್ಯಾ ಸಂಘದ ಸಭಾಂಗಣದಲ್ಲಿ ನಡೆಯಲಿದೆ.
ಕೂಟದ ಅಧ್ಯಕ್ಷ ಬಳಪದ ಮಂದಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಕೊಂಬಾರನ ಜಿ.ಬೋಪಯ್ಯ, ಅತಿಥಿಗಳಾಗಿ ಮಕ್ಕಳ ತಜ್ಞ ಹಾಗೂ ಸಾಹಿತಿ ಮೇ.ಡಾ. ಕುಶ್ವಂತ್ ಕೋಳಿಬೈಲು, ಮಕ್ಕಳ ತಜ್ಞೆ ನಂಗಾರು ಡಾ. ರೇಣುಕಾ ಸುಧಾಕರ್ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಕೂಟದ ಸದಸ್ಯರು ಹಾಗೂ ಕುಟುಂಬದವರಿಗಾಗಿ ಕ್ರೀಡಾಕೂಟ ಏರ್ಪಡಿಸಲಾಗಿದ್ದು, ಬೆಳಿಗ್ಗೆ ೯.೩೦ಕ್ಕೆ ಆರಂಭಗೊಳ್ಳಲಿದೆ ಎಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.