ಮಡಿಕೇರಿ, ಜ. ೨: ವೀರಾಜಪೇಟೆಯ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಕಾವೇರಿ ಆಶ್ರಮದಲ್ಲಿ ತಾ. ೧೨ರಂದು ಶ್ರೀ ವಿವೇಕಾನಂದ ಶರಣ ಸ್ವಾಮೀಜಿ ಅವರು ೧೦೦ ಸಂವತ್ಸರ ಪೂರೈಸುತ್ತಿರುವ ಹಿನ್ನೆಲೆ ಜನ್ಮಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.

ಬೆಳಿಗ್ಗೆ ಧಾರ್ಮಿಕ ಕಾರ್ಯಗಳೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಭಕ್ತ ವೃಂದದಿAದ ಗುರುವಂದನೆ, ಬೆಂಗಳೂರು ಓಂಕಾರಾಶ್ರಮದ ಪೀಠಾಧಿಪತಿಗಳಾದ ಶ್ರೀ ಡಾ. ಆಚಾರ್ಯ ಮಹಾಮಂಡಲೇಶ್ವರ ಮಧುಸೂದನಾನಂದ ಪೂರಿ ಸ್ವಾಮೀಜಿ ಪ್ರವಚನ ನೀಡಲಿದ್ದಾರೆ ಎಂದು ಆಶ್ರಮದ ಪ್ರಕಟಣೆ ತಿಳಿಸಿದೆ.