ವೀರಾಜಪೇಟೆ, ಜ. ೨: ಇತಿಹಾಸ ಪ್ರಸಿದ್ಧ ವೀರಾಜಪೇಟೆಯ ಸಿದ್ದಾಪುರ ರಸ್ತೆಯಲ್ಲಿನ ಮಲೆತಿರಿಕೆ ಬೆಟ್ಟದಲ್ಲಿರುವ ಅಯ್ಯಪ್ಪ ದೇವಾಲಯದ ಉತ್ಸವ ಮೂರ್ತಿಯ ಮೆರವಣಿಗೆ ಭಾನುವಾರ ರಾತ್ರಿ ಅತ್ಯಂತ ವಿಜೃಂಭಣೆಯಿAದ, ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ವ್ಯವಸ್ಥಿತವಾಗಿ ಐದು ದಶಕಗಳಿಂದಲೂ ಇಲ್ಲಿನ ಮಲೆತಿರಿಕೆ ಬೆಟ್ಟದ ಅಯ್ಯಪ್ಪ ಸೇವಾ ಸಮಿತಿ ಯಿಂದ ಆಚರಿಸಿಕೊಂಡು ಬರುತ್ತಿ ರುವ ಅಯ್ಯಪ್ಪನ ವಾರ್ಷಿಕ ಉತ್ಸವವು ಡಿ.೨೫ ರಿಂದ ಆರಂಭಗೊAಡು ಜ. ೧ರಂದು ಪ್ರಾತÀ:ಕಾಲ ೫.೩೦ಕ್ಕೆ ಗಣಪತಿ ಹೋಮ, ಲಕ್ಷಿ÷್ಮÃ ಪೂಜೆ, ಸರಸ್ವತಿ ಪೂಜೆ, ತುಲಭಾರ, ೧೦ ಗಂಟೆಗೆ ಲಕ್ಷಾರ್ಚನೆ, ೧೨.೩೦ ಕ್ಕೆ ಶ್ರೀ ಸ್ವಾಮಿಗೆ ಮಾಹಾಪೂಜೆ, ಅಯ್ಯಪ್ಪ ದೇವಾಲಯದಲ್ಲಿ ಸುಬ್ರಹ್ಮಣ್ಯನಿಗೆ ವಿದ್ಯುಕ್ತವಾಗಿ ಪೂಜೆ ಸಲ್ಲಿಸುವುದ ರೊಂದಿಗೆ ಉತ್ಸವ ತೆರೆ ಕಂಡಿತು. ಉತ್ಸವಕ್ಕೆ ಧಾರ್ಮಿಕ ವಿಧಿವಿಧಾನಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳು ವಿಶೇಷ ಮೆರುಗನ್ನು ನೀಡಿದವು.
ಸಂಜೆ ಬೃಹತ್ ಶೋಭಾಯಾತ್ರೆ ಯಲ್ಲಿ ದೀಪಾರತಿ, ವಿದ್ಯುತ್ ಅಲಂಕೃತ ಮಂಟಪದಲ್ಲಿ ಶ್ರೀ ಮಣಿಕಂಠನ ಕಥಾ ಸಾರಾಂಶವನ್ನು ಸಾರುವ ಚಲನವಲನಗಳಿಂದ ಕೂಡಿದ ಸ್ತಬ್ಧ ಚಿತ್ರ, ಕೇರಳ ಚಂಡೆ, ಮಂಗಳೂರಿನ ಚಿಲಿ-ಪಿಲಿ ಬೊಂಬೆ, ಮಾಲಾಧಾರಿಗಳೊಂದಿಗೆ ವಿಶೇಷ ಭಜನಾ ತಂಡಗಳು ಮೆರವಣಿಗೆಗೆ ಸಾಥ್ ನೀಡಿತು. ಉತ್ಸವ ಮೂರ್ತಿ ಯನ್ನು ಹೊತ್ತ ಮೆರವಣಿಗೆಯ ಮುಂಭಾಗದಲ್ಲಿ ದೀಪದ ಆರತಿ ತಟ್ಟೆಯನ್ನು ಹಿಡಿದ ಬಾಲಕಿಯರು ಹಾಗೂ ಹೆಂಗಳೆಯರು ಸಾಗುತ್ತಿದ್ದರೆ, ಅವರ ಹಿಂದೆ ಕೇರಳದ ಚಂಡೆ ವಾದ್ಯ ಹಾಗೂ ಮನೋರಂಜನಾ ತಂಡ ಗಳು, ದೀಪಾರತಿ, ವಿದ್ಯುತ್ ಅಲಂಕೃತ ಮಂಟಪದಲ್ಲಿ ಅಯ್ಯಪ್ಪನ ಚಲನ ವಲನಗಳಿರುವ ವಿಗ್ರಹ, ಮೈಸೂರು ಬ್ಯಾಂಡ್ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ಶಿಲ್ಪಾ ಗೊಂಬೆ ಬಳಗ ಹಾಗೂ ಇತರ ಆಕರ್ಷಕ ಮನರಂಜನಾ ತಂಡಗಳು ಸಾಗಿದವು. ಮೆರವಣಿಗೆಯು ಮಲೆತಿರಿಕೆ ಬೆಟ್ಟದ ಅಯ್ಯಪ್ಪ ದೇವಾಲಯದಿಂದ ಹೊರಟು ತೆಲುಗರ ಬೀದಿ, ಜೈನರಬೀದಿ, ಪಿ. ಮಾ. ಕಾರ್ಯಪ್ಪ ರಸ್ತೆ, ಮುಖ್ಯ ರಸ್ತೆಯ ಮಾರ್ಗವಾಗಿ ಮಲಬಾರ್ ರಸ್ತೆಯಲ್ಲಿರುವ ಮುತ್ತಪ್ಪ ದೇವಾಲಯ ವನ್ನು ತಲುಪಿತು. ಮೆರವಣಿಗೆ ತಂಡವನ್ನು ಮುತ್ತಪ್ಪ ದೇವಾಲಯ ಸಮಿತಿ ವತಿಯಿಂದ ಸ್ವಾಗತಿಸ ಲಾಯಿತು.
ಮೆರವಣಿಗೆಯ ಉತ್ಸವ ಮೂರ್ತಿಗೆ ಹಾದಿ ಉದ್ದಕ್ಕೂ ಭಕ್ತಾದಿಗಳು ಈಡುಗಾಯಿ ಹಾಕಿದರೆ ಮುತ್ತೆöÊದೆಯರು ಪೂಜೆ ಸಲ್ಲಿಸಿ ಶ್ರದ್ಧಾ ಭಕ್ತಿಯನ್ನು ಮೆರೆದರು. ಭಕ್ತರು ದಾರಿಯುದ್ದಕ್ಕೂ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುತ್ತಾ ಅಯ್ಯಪ್ಪನ ನಾಮಸ್ಮರಣೆ ಮಾಡುತ್ತಾ ಸಾಗುತ್ತಿ ದ್ದಂತೆ ಅಯ್ಯಪ್ಪ ಉತ್ಸವದ ಮೆರವಣಿಗೆಯನ್ನು ವೀಕ್ಷಿಸಲು ಮುಖ್ಯ ರಸ್ತೆಗಳ ಇಕ್ಕೆಲಗಳಲ್ಲಿ ಜನರು ಕಿಕ್ಕಿರಿದು ನೆರೆದಿದ್ದರು. ಮುತ್ತಪ್ಪ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಅದೇ ಮಾರ್ಗವಾಗಿ ದೇವಾಲಯಕ್ಕೆ ಹಿಂತಿರುಗಿ ಸುಬ್ರಮಣ್ಯ ದೇವರಿಗೆ ಪೂಜೆ ಸಲ್ಲಿಸುವುದರ ಮುಖಾಂತರ ಉತ್ಸವಕ್ಕೆ ತೆರೆ ಎಳೆಯಲಾಯಿತು. ವೀರಾಜಪೇಟೆ ಡಿವೈಎಸ್ಪಿ ನಿರಂಜನ್ ರಾಜ್ ಅರಸ್ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಶಿವರುದ್ರ ಅವರ ನೇತೃತ್ವದಲ್ಲಿ ಸಬ್‌ಇನ್ಸ್ಪೆಕ್ಟರ್ ಶ್ರೀಧರ್ ಹಾಗೂ ಪೊಲೀಸ್ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ಒದಗಿಸಿದರು.
ಉತ್ಸವದ ಪ್ರಯುಕ್ತ ದೇವಾಲಯ ವನ್ನು ತಳಿರು ತೋರಣಗಳಿಂದ, ವಿವಿಧ ಪುಷ್ಪಗಳಿಂದ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸ ಲಾಗಿತ್ತು. ಪ್ರತಿ ವರ್ಷವೂ ಇಲ್ಲಿ ಜನವರಿ ಒಂದರAದು ಉತ್ಸವ ನಡೆಯುವುದು ಈ ದೇವಾಲಯದ ವಿಶೇಷತೆ. ಮಹಾಪೂಜೆಯ ಸಂದರ್ಭದಲ್ಲಿ ದೇವಾಲಯದ ಮೇಲ್ಭಾಗದಲ್ಲಿ ಆಕಾಶದಲ್ಲಿ ಗರುಡ ಪಕ್ಷಿಯೊಂದು ದೇವಾಲಯಕ್ಕೆ ಪ್ರದಕ್ಷಿಣೆ ಹಾಕುತ್ತದೆ ಎಂಬ ಪ್ರತೀತಿ ಇದೆ. ದೇಗುಲದ ವತಿಯಿಂದ ಕುಡಿಯುವ ನೀರು, ಪ್ರಸಾದ, ಹಾಗೂ ಊಟದ ವ್ಯವಸ್ಥೆ ಮಾಡ ಲಾಗಿತ್ತು. ತಡರಾತ್ರಿವರೆಗೂ ಅದು ಮುಂದುವರೆದಿತ್ತು. (ಈಶಾನ್ವಿ)