ವೀರಾಜಪೇಟೆ, ಜ. ೨: ವೀರಾಜಪೇಟೆಯ ಕಾವೇರಿ ಪ್ರೌಢಶಾಲೆ ವಿದ್ಯಾರ್ಥಿಗಳು ಪೊನ್ನಂಪೇಟೆಯ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಇಂಜಿನಿಯರಿAಗ್ ಕಾಲೇಜಿಗೆ ಭೇಟಿ ನೀಡಿ ಕಾಲೇಜು ಕಾರ್ಯವೈಖರಿಯನ್ನು ವೀಕ್ಷಿಸಿದರು. ಕಾಲೇಜು ಆಡಳಿತಾಧಿಕಾರಿ ಜಗದೀಶ್ ಕಾಲೇಜಿನ ಪ್ರತಿ ವಿಭಾಗದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಹಾಗೆ ಪ್ರಾಧ್ಯಾಪಕರಾದ ಜ್ಞಾನೇಶ್ ರೆಫ್ರಿಜರೇಟರ್ ಕಾರ್ಯನಿರ್ವಹಿಸುವ ಕುರಿತು ಪ್ರಾಯೋಗಿಕವಾಗಿ ತೋರಿಸಿದರು. ತದನಂತರ ವಿದ್ಯಾರ್ಥಿಗಳು ಗೋಣಿಕೊಪ್ಪಲಿನ ಅತ್ತೂರಿನಲ್ಲಿರುವ ಹಣ್ಣುಗಳ ಉತ್ಪನ್ನಗಳ ಮಾರಾಟ ಹಾಗೂ ಜ್ಯೂಸ್ ಕಾರ್ಖಾನೆಗೆ ಭೇಟಿ ನೀಡಿ ಯಂತ್ರಗಳು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಅಲ್ಲಿನ ಸದಸ್ಯರು ವಿದ್ಯಾರ್ಥಿಗಳಿಗೆ ವಿವರಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿ ಗಳೊಂದಿಗೆ ಮುಖ್ಯ ಶಿಕ್ಷಕಿಯರಾದ ಪ್ರಮೀಳಾ ಎಂ.ಬಿ., ಸಹ ಶಿಕ್ಷಕಿಯವರಾದ ಕಲ್ಪ ಟಿ.ಜಿ, ಶ್ವೇತಾ, ವೀಣಾ, ಲಾವಣ್ಯ ಪಾಲ್ಗೊಂಡಿದ್ದರು.