ಕುಶಾಲನಗರ, ಜ. ೨: ವೈಕುಂಠ ಏಕಾದಶಿ ಅಂಗವಾಗಿ ಕುಶಾಲನಗರ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.
ಮಹಿಳೆಯರಿಂದ ವಿಷ್ಣು ಸಹಸ್ರನಾಮ, ಭಜನೆ, ಕೀರ್ತನೆಗಳು ನಡೆದವು. ಅರ್ಚಕರಾದ ಯೋಗೇಶ್ ಭಟ್ ಮತ್ತು ಗಿರೀಶ್ ಭಟ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ಜರುಗಿದವು.
ಭಕ್ತಾಧಿಗಳಿಗೆ ಪ್ರಸಾದ ಮತ್ತು ಅನ್ನಸಂತರ್ಪಣೆ ನಡೆಯಿತು. ಆರ್ಯವೈಶ್ಯ ಮಂಡಳಿ ಅಧ್ಯಕ್ಷರಾದ ಬಿ.ಎಲ್ ಉದಯ್ ಕುಮಾರ್, ಉಪಾಧ್ಯಕ್ಷ ಎಸ್.ಎಂ ಸತೀಶ್, ಕಾರ್ಯದರ್ಶಿ ಬಿ.ಎಲ್ ಅಶೋಕ್ ಕುಮಾರ್, ಮಹಿಳಾ ಮಂಡಳಿ ಅಧ್ಯಕ್ಷೆ ಲಕ್ಷಿö್ಮ ಶ್ರೀನಿವಾಸ್, ಯುವತಿಯರ ಸಂಘದ ಪ್ರಾರ್ಥನಾ, ವಾಸವಿ ಯುವಕ ಸಂಘದ ಅಧ್ಯಕ್ಷರಾದ ಪ್ರವೀಣ್ ಮತ್ತಿತರರು ಇದ್ದರು.