ಮಡಿಕೇರಿ, ಜ. ೨: ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ(ರಿ)ಇದರ ಮುಂದಿನ ೩ ವರ್ಷದ ಅವಧಿಗೆ ಕೊಡಗು ಜಿಲ್ಲಾ ಸಮಿತಿ ಪದಾಧಿಕಾರಿಗಳ ಚುನಾವಣೆ ಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ರವೀಶ್ ಮರು ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷ (ಮಹಿಳೆ) ಸ್ಥಾನಕ್ಕೆ ಸ್ಪರ್ಧಿಸಿದ ವೀಣಾ, ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ ರಾಜಶೇಖರ ಆಯ್ಕೆಯಾಗಿದ್ದಾರೆ. ಉಳಿದ ೬ ಪದಾಧಿಕಾರಿಗಳು, ರಾಜ್ಯ ಪರಿಷತ್ ಸ್ಥಾನಕ್ಕೆ ಕಕ್ಕಬ್ಬೆ ಗ್ರಾಮ ಪಂಚಾಯಿತಿ ಪಿಡಿಓ ಅಶೋಕ್ ಕುಮಾರ್ ಬಿ.ವೈ, ಉಪಾಧ್ಯಕ್ಷರಾಗಿ ವಾಲ್ನೂರು ತ್ಯಾಗತ್ತೂರು ಪಿಡಿಓ ಲೋಕೇಶ್, ಸಂಘಟನಾ ಕಾರ್ಯದರ್ಶಿಯಾಗಿ ಪೊನ್ನಂಪೇಟೆ ಪಿಡಿಓ ಪುಟ್ಟರಾಜು, ಸಂಘಟನಾ ಕಾರ್ಯದರ್ಶಿ

(ಮಹಿಳೆ) ಲಿಖಿತಾ, ಕ್ರೀಡಾ ಕಾರ್ಯದರ್ಶಿಯಾಗಿ ಮದೆನಾಡು ಪಿಡಿಓ ನಂಜುAಡಸ್ವಾಮಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಗಾಳಿಬೀಡು ಪಿಡಿಓ ಶಶಿಕಿರಣ್ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಡಿ. ೩೦ ರಂದು ಮಡಿಕೇರಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಹಾಯಕ ಚುನಾವಣಾಧಿಕಾರಿ ಮೋಹನ್ ಕುಮಾರ್, ಚುನಾವಣಾ ಸಿಬ್ಬಂದಿಗಳಾದ ಹುಸೇನ್ ಮುಲ್ಲಾ, ದೀಪ್ತಿ ಅವರು ಚುನಾವಣಾ ಪ್ರಕ್ರಿಯೆ ಹಾಗೂ ಮತ ಎಣಿಕೆ ಪ್ರಕ್ರಿಯೆ ಕೈಗೊಂಡರು. ನೋಂದಣಿಯಾದ ೭೮ ಮತದಾರರಲ್ಲಿ ೭೫ ಮತದಾರರು ತಮ್ಮ ಹಕ್ಕು ಚಲಾಯಿಸಿದರು, ಮತದಾರರಿಗೆ ಇಲಾಖೆ ಆಯುಕ್ತರು ಓಓಡಿ ಸೌಲಭ್ಯ ಕಲ್ಪಿಸಿದ್ದರಿಂದ ಹೆಚ್ಚಿನ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಯಿತು.

ಕಾನೂನು ಸಲಹೆಗಾರ ಹಾಗೂ ಗೌರವಾಧ್ಯಕ್ಷ ಹುದ್ದೆಗೆ ಜಿಲ್ಲಾ ಸಮಿತಿ ಸಭೆಯಲ್ಲಿ ನಿರ್ಣಯಿಸಿ ಆಯ್ಕೆ ಮಾಡಲಾಗುವುದು ಎಂದು ಜಿಲ್ಲಾಧ್ಯಕ್ಷ ರವೀಶ್ ಹೆಚ್.ಪಿ. ತಿಳಿಸಿದ್ದಾರೆ.