ವೀರಾಜಪೇಟೆ, ಜ. ೨: ಕೊಡಗು ಹಿಂದೂ ಮಲಯಾಳಿ ಮಹಿಳಾ ಅಸೋಸಿಯೇಷನ್ ಹಾಗೂ ಎಸ್.ಆರ್.ಎಲ್. ಡಯಗ್ನೋಸ್ಟಿಕ್ ಸಂಸ್ಥೆ ವತಿಯಿಂದ ವೀರಾಜಪೇಟೆಯ ಪುರಭವನದಲ್ಲಿ ಸಾರ್ವಜನಿಕ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸ ಲಾಯಿತು.

ಅಸೋಸಿಯೇಷನ್‌ನ ಜಿಲ್ಲಾಧ್ಯಕ್ಷೆ ಶೀಭಾ ಪೃಥ್ವಿನಾಥ್ ಮಾತನಾಡಿ ಮಹಿಳೆಯರು ದೈನಂದಿನ ಚಟುವಟಿಕೆ ಗಳಿಂದಾಗಿ ತನ್ನ ಕುಟುಂಬ ಸದಸ್ಯರಿಗೆ ಹೆಚ್ಚು ಒತ್ತು ನೀಡಿ, ಒತ್ತಡಕ್ಕೆ ಒಳಗಾಗುತ್ತಿದ್ದು ಆರೋಗ್ಯದ ಕಡೆ ಗಮನ ಹರಿಸು ವುದು ಕಡಿಮೆ ಯಾಗಿದೆ. ಸರಿಯಾದ ಸಮಯಕ್ಕೆ ತನ್ನ ಆರೋಗ್ಯ ತಪಾಸಣೆಯನ್ನು ನಡೆಸುವುದು ಕಷ್ಟಸಾಧ್ಯ ಆಗಿರುವುದರಿಂದ ಹಿಂದೂ ಮಹಿಳಾ ಅಸೋಸಿಯೇಷನ್ ವತಿಯಿಂದ ಸಾಮಾನ್ಯ ಆರೋಗ್ಯ ತಪಾಸಣೆ ಯನ್ನು ನಡೆಸಲಾಗುತ್ತಿದೆ ಎಂದರು.ಆರೋಗ್ಯ ತಪಾಸಣಾ ಶಿಬಿರದಲ್ಲಿ ಅಂದಾಜು ೫೦ ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿ ದ್ದರು. ಸಂಘಟನೆಯ ಕಾರ್ಯದರ್ಶಿ ಎಂ.ಪಿ. ಪುಷ್ಪಲತಾ ಶಿವಪ್ಪ, ವಿ.ಜಿ. ಪದ್ಮಾವತಿ, ಕೋಶಾಧಿಕಾರಿ ಶ್ರೀಕಲಾ, ಗೌರವಾಧ್ಯಕ್ಷೆ ರೀತಾ ರಾಜನ್, ಉಪಾಧ್ಯಕ್ಷರಾದ ಚೈತ್ರ ಮೋಹನ್, ಸಮಿತಿ ಸದಸ್ಯರಾದ ಶ್ರೀಜಾ ಬಾಬು, ರಜಿತಾ, ಉಮಾವತಿ, ಸರಿತಾ, ಶ್ರೀಜಾ ಶ್ರೀಜು ಮತ್ತಿತರರು ಉಪಸ್ಥಿತರಿದ್ದರು.