ಮಡಿಕೇರಿ, ಜ. ೨: ಮಡಿಕೇರಿ-ವೀರಾಜಪೇಟೆ ೬೬ ಕೆವಿ ವಿದ್ಯುತ್ ಮಾರ್ಗದ ಕಾಮಗಾರಿ ಕೈಗೊಳ್ಳಬೇಕಿರುವುದರಿಂದ ಬೃಹತ್ ಕಾಮಗಾರಿ ವಿಭಾಗ ಕೊಡಗು ಜಿಲ್ಲೆ ಕ.ವಿ.ಪ್ರ.ನಿ.ನಿ. ಮೈಸೂರು ಅವರ ಕೋರಿಕೆಯಂತೆ ತಾ. ೩ ರಂದು (ಇಂದು) ಬೆಳಿಗ್ಗೆ ೮ ಗಂಟೆಯಿAದ ಸಂಜೆ ೫ ಗಂಟೆಯವರೆಗೆ ೩೩ ಕೆವಿ ವೀರಾಜಪೇಟೆ-ಮೂರ್ನಾಡು ಮಾರ್ಗದಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.
ಆದ್ದರಿಂದ ಪಾರಾಣೆ, ಮೂರ್ನಾಡು, ನಾಪೋಕ್ಲು, ಹೊದ್ದೂರು, ಮರಗೋಡು, ಬೇತು, ಕಕ್ಕಬೆ, ನೆಲಜಿ, ಹಾಕತ್ತೂರು, ಕಾಂತೂರು, ಸುತ್ತಮುತ್ತಲ÷ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಅನಿತಾ ಬಾಯಿ ತಿಳಿಸಿದ್ದಾರೆ.