ಮಡಿಕೇರಿ, ಜ. ೧: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ನೂತನ ಪ್ರಬಾರ ಪ್ರಾಂಶುಪಾಲರಾಗಿ ಮೇಜರ್ ಡಾ. ರಾಘವ. ಬಿ ಇವರನ್ನು ನೇಮಕ ಮಾಡಿ ಮಂಗಳೂರು ವಿಶ್ವವಿದ್ಯಾನಿಲಯ ಆದೇಶ ಹೊರಡಿಸಿದೆ.

ಹಿಂದಿನ ಪ್ರಬಾರ ಪ್ರಾಂಶುಪಾಲರಾದ ಡಾ. ಸಿ. ಜಗತ್ ತಿಮ್ಮಯ್ಯ ಅವರು ಡಿಸೆಂಬರ್ ೩೧ ಕ್ಕೆ ಸ್ವಯಂ ನಿವೃತ್ತಿಯಾಗಿದ್ದರಿಂದ ತೆರವಾದ ಸ್ಥಾನಕ್ಕೆ ಇವರನ್ನು ನೇಮಕ ಮಾಡಲಾಗಿದೆ.

ಡಾ. ರಾಘವ. ಬಿ ಅವರು ಇಪ್ಪತ್ತೆಂಟು ವರ್ಷ ಸೇವಾನುಭವ ಹೊಂದಿದ್ದು, ಎನ್‌ಸಿಸಿ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಮುಖ್ಯಮಂತ್ರಿ ಪದಕ ಮತ್ತು ಪ್ರಶಸ್ತಿ ಸೇರಿದಂತೆ ರಾಷ್ಟçಮಟ್ಟದ, ರಾಜ್ಯಮಟ್ಟದ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ