ಸೋಮವಾರಪೇಟೆ, ಜ. ೧: ಇಲ್ಲಿನ ಎಸ್.ಜೆ.ಎಂ. ಪ್ರೌಢಶಾಲೆ ಯಲ್ಲಿ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದವು.

ಕ್ರೀಡಾ ಸ್ಪರ್ಧೆಗೆ ಶಾಲಾ ಮುಖ್ಯೋಪಾಧ್ಯಾಯ ಹೆಚ್. ಮಾರಪ್ಪ ಚಾಲನೆ ನೀಡಿದರು. ನಂತರ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದಂತೆ ಆಟೋಟಗಳಿಗೂ ಆದ್ಯತೆ ನೀಡಬೇಕಿದೆ. ಹಲವರಿಗೆ ಕ್ರೀಡೆ ಜೀವನವನ್ನು ರೂಪಿಸಿಕೊಟ್ಟಿದೆ ಎಂದರು. ಕಬಡ್ಡಿ, ವಾಲಿಬಾಲ್, ೨೦೦ ಮೀಟರ್ ಓಟ, ವಿಷದ ಚೆಂಡು ಹಾಗೂ ಮಡಿಕೆ ಒಡೆಯುವ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಈ ಸಂದರ್ಭ ಶಾಲಾ ಶಿಕ್ಷಕರಾದ ಎಸ್.ಕೆ. ರಾಣಿ ರವೀಂದ್ರ, ಪ್ರಕಾಶ್ ಹೆಚ್., ದಿಮ್ಮಳ್ಳಿ ಬೆನ್ನೂರ, ಲಕ್ಷಿö್ಮÃ ಮತ್ತು ತೇಜಸ್ವಿನಿ ಉಪಸ್ಥಿತರಿದ್ದರು.