ಮಡಿಕೇರಿ, ಡಿ. ೩೧: ಜಿಲ್ಲೆಯ ವಸತಿ ರಹಿತರಿಗೆ ನಿವೇಶನ ಕಲ್ಪಿಸಲು ವಿವಿಧೆಡೆ ಒಟ್ಟು ೨ ಲಕ್ಷ ಹೆಕ್ಟೇರ್ ಜಾಗವನ್ನು ಮೀಸಲಿಡಲಾಗಿದೆ. ಈ ಸಂಬAಧ ಸದ್ಯದಲ್ಲಿಯೇ ಕ್ರಮಕೈಗೊಳ್ಳಲಾಗುವುದು ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ರಾಜ್ಯ ಸರಕಾರಿ ಜಮೀನು ಸಂರಕ್ಷಣಾ ಸಮಿತಿಯ ಅಧ್ಯಕ್ಷರೂ ಆಗಿರುವ ಕೆ.ಜಿ. ಬೋಪಯ್ಯ ಘೋಷಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹಳಷ್ಟು ಕುಟುಂಬಗಳಿಗೆ ನಿವೇಶನವಿಲ್ಲದಿರುವು ದರಿಂದ ಅವರಿಗೆ ವಸತಿ ಕಲ್ಪಿಸುವ ಉದ್ದೇಶದಿಂದ ಅರಣ್ಯ ಇಲಾಖೆಗೆ ರಾಜ್ಯದ ಕಂದಾಯ ಇಲಾಖೆಯಿಂದ ಹಸ್ತಾಂತರಿಸಿದ ೯ ಲಕ್ಷ ಹೆಕ್ಟೇರ್ ಜಾಗವನ್ನು ಹಿಂಪಡೆದುಕೊಳ್ಳಲಾಗಿದೆ. ಈ ಪೈಕಿ ಜಿಲ್ಲೆಗೆ ೨ ಲಕ್ಷ ಹೆಕ್ಟೇರ್ ಜಾಗ ಲಭಿಸಿದೆ. ಇದರ ಮೂಲಕ ವಸತಿ ಯೋಜನೆ ಅನುಷ್ಠಾನಗೊಳಿಸ ಲಾಗುವುದು ಎಂದು ಭರವಸೆಯ ಮಾತುಗಳನ್ನಾಡಿದರು.
ಸಾಲ ಮನ್ನಾಕ್ಕೆ ಬೇಡಿಕೆ
ಜಿಲ್ಲೆಯ ಕೃಷಿಕರು ಸಹಕಾರ ಸಂಘಗಳ ಮೂಲಕ ಪಡೆದ ಸಾಲದ ಪೈಕಿ ಕೆಲ ಕಂತುಗಳನ್ನು ಪಾವತಿಸಿ ಬಾಕಿ ಉಳಿಸಿಕೊಂಡ ರೂ. ೪೮ ಕೋಟಿ ಮೊತ್ತವನ್ನು ಮನ್ನಾ ಮಾಡಲು ಸರಕಾರದ ಮುಂದೆ ಬೇಡಿಕೆ ಇಡಲಾಗಿದೆ. ಸರಕಾರ ಈ ಸಂಬAಧ ಸಕರಾತ್ಮಕವಾಗಿ
(ಮೊದಲ ಪುಟದಿಂದ) ಸ್ಪಂದಿಸಿದ್ದು, ಆರ್ಥಿಕ ಇಲಾಖೆಯ ಮೂಲಕ ಮನ್ನಾ ಮಾಡುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ ಎಂದು ಹೇಳಿದ ಅವರು, ಶೂನ್ಯ ಬಡ್ಡಿದರದಲ್ಲಿ ಸಹಕಾರ ಸಂಘಗಳಲ್ಲಿ ಸಾಲ ಪಡೆಯಲು ಕಾಫಿ ಬೆಳೆಗಾರರಿಗೆ ಸಮಸ್ಯೆಯಾಗಿದೆ. ಇದರಿಂದ ಕೆಲ ಗೊಂದಲ ಏರ್ಪಟ್ಟಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅತಿವೃಷ್ಟಿಯಿಂದ ಬೆಳೆ ಹಾನಿಯಾದ ೪೩,೭೭೫ ರೈತರಿಗೆ ಒಟ್ಟು ರೂ. ೧೨೬ ಕೋಟಿಗೂ ಹೆಚ್ಚಿನ ಪರಿಹಾರವನ್ನು ವಿತರಿಸಲಾಗಿದೆ. ಕೆಲವೊಂದು ಅರ್ಜಿಗಳು ತಾಂತ್ರಿಕ ಸಮಸ್ಯೆಯಿಂದ ತಿರಸ್ಕೃತಗೊಂಡಿವೆ. ಅಂತವುಗಳನ್ನು ಸರಿಪಡಿಸಿ ಪರಿಹಾರ ವಿತರಿಸಲಾಗುವುದು ಎಂದರು.
ಭೂಪರಿವರ್ತನೆ ಸರಳೀಕರಣ
ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಭೂಕಂದಾಯ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇದರಿಂದ ಕೃಷಿಭೂಮಿಯನ್ನು ಬೇರೆ ಉದ್ದೇಶಗಳಿಗೆ ಪರಿವರ್ತನೆ ಗೊಳಿಸುವುದನ್ನು ಸರಳೀಕರಣ ಮಾಡಲಾಗಿದೆ ಎಂದು ಬೋಪಯ್ಯ ಮಾಹಿತಿ ನೀಡಿದರು.
ಸೂಕ್ತ ‘ಅಫಿಡೆವಿಟ್’ನೊಂದಿಗೆ ಅರ್ಜಿ ಸಲ್ಲಿಸಿದರೆ ವಾರದೊಳಗೆ ಭೂಪರಿವರ್ತನೆ ಮಾಡಲಾಗುತ್ತದೆ. ನಕಲಿ ದಾಖಲೆ ನೀಡಿ ಪರಿವರ್ತನೆಗೆ ಮುಂದಾದಲ್ಲಿ ಅಂತವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು. ಜೊತೆಗೆ ದಂಡದ ಮೊತ್ತವನ್ನು ಹೆಚ್ಚಿಸಲಾಗಿದೆ. ಇದರೊಂದಿಗೆ ಒತ್ತುವರಿ ಕೃಷಿ ಭೂಮಿ ಜಾಗವನ್ನು ೩೦ ವರ್ಷಕ್ಕೆ ಗುತ್ತಿಗೆ ನೀಡಲು ಸದನದಲ್ಲಿ ಅಂಗೀಕಾರಗೊAಡಿದೆ. ಜಾಗದ ವಿಸ್ತಿçÃರ್ಣ ಆಧಾರದಲ್ಲಿ ಶುಲ್ಕ ವಿಧಿಸಲಾಗುವುದು. ಗರಿಷ್ಟ ೨೫ ಎಕರೆ ಜಾಗವನ್ನು ಗುತ್ತಿಗೆ ನೀಡಲಾಗುತ್ತದೆ ಎಂದರು.
ಉಚಿತ ವಿದ್ಯುತ್‌ಗೆ ಕ್ರಮ
ಕೊಡಗು ಜಿಲ್ಲೆಯ ಕೃಷಿಕರಿಗೆ ೧೦ ಹೆಚ್.ಪಿ. ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಒದಗಿಸುವ ಸಂಬAಧ ಸರಕಾರ ಡಿಬಿಟಿ ಮೂಲಕ ಹಣ ಪಾವತಿ ಕ್ರಮವನ್ನು ಹಿಂಪಡೆದಿದ್ದು, ಎಲ್ಲಾ ವರ್ಗದ ಕೃಷಿಕರಿಗೆ ಉಚಿತ ವಿದ್ಯುತ್ ಪೂರೈಸಲು ಸರಕಾರ ಬದ್ಧವಾಗಿದೆ. ಈ ಸಂಬAಧ ಶೀಘ್ರದಲ್ಲಿಯೇ ಆದೇಶ ಹೊರಬೀಳಲಿದೆ ಎಂದು ಬೋಪಯ್ಯ ಹೇಳಿದರು.
ವನ್ಯ ಜೀವಿ ಹಾವಳಿ ಕುರಿತು ಸದನದಲ್ಲಿ ಈ ಬಾರಿ ಚರ್ಚಿಸಲು ಸಾಧ್ಯವಾಗಲಿಲ್ಲ. ಆದರೆ, ಸರಕಾರದ ಗಮನಸೆಳೆಯಲಾಗಿದೆ. ಶಾಶ್ವತ ಪರಿಹಾರಕ್ಕೆ ಯೋಜನೆ ರೂಪಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ವೀರಾಜಪೇಟೆ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್, ಪ್ರಧಾನ ಕಾರ್ಯದರ್ಶಿ ಅಜ್ಜಿಕುಟ್ಟೀರ ಪ್ರವೀಣ್, ಮಡಿಕೇರಿ ಮಂಡಲ ಅಧ್ಯಕ್ಷ ಕಾಂಗೀರ ಸತೀಶ್, ಪ್ರಧಾನ ಕಾರ್ಯದರ್ಶಿ ಡೀನ್ ಬೋಪಣ್ಣ, ಕೋಡಿರ ಪ್ರಸನ್ನ ಹಾಜರಿದ್ದರು.