ಗೋಣಿಕೊಪ್ಪಲು, ಡಿ. ೩೧: ಪೊನ್ನಂಪೇಟೆ-ಕಾನೂರು-ನಿಟ್ಟೂರು ಸಂಪರ್ಕಿಸುವ ರಸ್ತೆ ಹಾಗೂ ಕಾನೂರು, ಕುಟ್ಟ ಸಂಪರ್ಕ ರಸ್ತೆಯು ತೀರ ಹದಗೆಟ್ಟಿದ್ದು ಈ ಬಗ್ಗೆ ವೀರಾಜಪೇಟೆ ಲೋಕೋಪಯೋಗಿ ಇಲಾಖೆಯು ತಕ್ಷಣ ಕ್ರಮ ಕೈಗೊಂಡು ರಸ್ತೆ ದುರಸ್ತಿ ಕೆಲಸ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕ ಆಗ್ರಹಿಸಿದೆ.
ಈ ಭಾಗದಲ್ಲಿ ನಿರಂತರವಾಗಿ ವಾಹನ ಸಂಚಾರ ವಾಗುತ್ತಿರುವ ಹಿನ್ನೆಲೆಯಲ್ಲಿ ನಾಗರಿಕರು ತಮ್ಮ ನೋವನ್ನು ರೈತ ಸಂಘದ ಮುಖಂಡ ರೊಂದಿಗೆ ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯ ವೀರಾಜಪೇಟೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸಿದ್ದೇಗೌಡ ಅವರನ್ನು ರೈತ ಸಂಘದ ಗೋಣಿಕೊಪ್ಪ ಕಚೇರಿಗೆ ಬರಮಾಡಿಕೊಂಡ ಕೊಡಗು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಹಾಗೂ ಪದಾಧಿಕಾರಿಗಳು ರಸ್ತೆ ದುರಸ್ತಿ ಕಾರ್ಯಕ್ಕೆ ಆಗುತ್ತಿರುವ ಹಿನ್ನಡೆಯ ಬಗ್ಗೆ ಸಮಜಾಯಿಷಿಕೆ ಬಯಸಿದರು.
ಪ್ರಮುಖವಾಗಿ ಕಾನೂರು ಲಕ್ಷö್ಮಣ ತೀರ್ಥ ನದಿಯ ಸೇತುವೆಯ ಸಮೀಪ ದಿಂದ ಕಾನೂರು ಪಟ್ಟಣದವರೆಗೂ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ತೀವ್ರ ತೊಂದರೆ ಆಗುತ್ತಿದೆ. ಈ ಭಾಗದಲ್ಲಿ ಹಲವು ವರ್ಷದಿಂದ ಇಂತಹ ಸ್ಥಿತಿ ಮರುಕಳು ಸುತ್ತಲೆ ಬಂದಿದೆ. ಅಲ್ಲದೆ ನಾಲ್ಕೇರಿ, ಕೇಂಬುಕೊಲ್ಲಿ ಮುಖ್ಯ ರಸ್ತೆಯು ದುಸ್ಥಿತಿಗೆ ಬಿದ್ದಿದ್ದು ನಾಗರಿಕರಿಗೆ ತೀವ್ರ ತೊಂದರೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಭಾಗದ ರಸ್ತೆಯನ್ನು ಹತ್ತು ದಿನದ ಒಳಗೆ ಗುಂಡಿ ಮುಚ್ಚುವ ಕೆಲಸ ಕೈಗೆತ್ತಿಕೊಳ್ಳಬೇಕು. ಅಲ್ಲದೆ ದುರಸ್ತಿ ಕಾರ್ಯವನ್ನು ಗುಣಮಟ್ಟದಿಂದ ಮಾಡುವಂತೆ ಎಇಇ ಸಿದ್ದೇಗೌಡ ಅವರಿಗೆ ಸಲಹೆ ನೀಡಲಾಯಿತು.
ಈ ವೇಳೆ ಲೋಕೋಪಯೋಗಿ ಇಲಾಖೆಯ ವೀರಾಜಪೇಟೆ ಸಹಾಯಕ ಕಾರ್ಯಪಾಲಕ ಇಂಜಿನಿ ಯರ್ ಸಿದ್ದೇಗೌಡ ಸಮಜಾಯಿಷಿಕೆ ನೀಡಿ ಪೊನ್ನಂಪೇಟೆ ಕಾನೂರು ರಸ್ತೆ ಗುಂಡಿ ಮುಚ್ಚುವ ಕೆಲಸವು ಕೈಗೆತ್ತಿಕೊಳ್ಳ ಲಾಗಿದೆ. ಮುಂದಿನ ಭಾಗದಲ್ಲಿ ಇನ್ನಷ್ಟು ಕೆಲಸವನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದರು. ಈ ವೇಳೆ ೧೦ ದಿನದ ಒಳಗೆ ಪ್ರಮುಖ ಕಾಮಗಾರಿಯನ್ನು ಕೈಗೆತ್ತಿಕೊಳ್ಳದಿದ್ದಲ್ಲಿ ವೀರಾಜಪೇಟೆಯ ಲೋಕೋಪಯೋಗಿ ಕಚೇರಿಗೆ ಬೀಗ ಜಡಿಯುವ ಎಚ್ಚರಿಕೆ ನೀಡಿದರು.
ಲೋಕೋಪಯೋಗಿ ಇಲಾ ಖೆಯ ವೀರಾಜಪೇಟೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್À ಭೇಟಿ ವೇಳೆ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ವೀರಾಜಪೇಟೆ ತಾಲೂಕು ಅಧ್ಯಕ್ಷ ಬಾಚಮಾಡ ಭವಿಕುಮಾರ್ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಹಾಜರಿದ್ದರು.
- ಹೆಚ್.ಕೆ. ಜಗದೀಶ್