ಸುಂಟಿಕೊಪ್ಪ, ಡಿ. ೩೧: ಶಾಲಾ ಮಟ್ಟದಲ್ಲಿಯೇ ಜ್ಞಾನಕ್ಕೆ, ಸಾಧನೆಗೆ ಬೇಕಾದದನ್ನು ಪಡೆದುಕೊಳ್ಳಲು ಅಡಿಪಾಯವಾಗಿದೆ ಎಂದು ಮಡಿಕೇರಿಯ ಲೆಕ್ಕಪರಿಶೋಧಕ ಎಂ. ಈಶ್ವರ ಭಟ್ ಹೇಳಿದರು. ಸಮೀಪದ ಕೊಡಗರಹಳ್ಳಿ ಶಾಂತಿನಿಕೇತನ ವಿದ್ಯಾಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಮತ್ತು ಜವಾಬ್ದಾರಿಯುತ ನಾಗರಿಕನನ್ನಾಗಿ ರೂಪಿಸಲು ವಿದ್ಯಾಭ್ಯಾಸ ಜೊತೆಯಲ್ಲಿ ಜೀವನದ ಎಲ್ಲ ಕ್ಷೇತ್ರದಲ್ಲಿ ವ್ಯಕ್ತಿತ್ವ ವಿಕಸನವಾಗುವಂತಹ ಅವಕಾಶ ನೀಡಬೇಕು ಎಂದರು.

ಇAದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂದು ಹೇಳಿದ ಅವರು, ನೂತನ ರಾಷ್ಟಿçÃಯ ಶಿಕ್ಷಣ ನೀತಿ ಹಂತಹAತವಾಗಿ ಜಾರಿಗೆ ಬರುತ್ತಿದ್ದು, ಇದರಲ್ಲಿ ಕೇವಲ ಶಿಕ್ಷಣ ಮಾತ್ರವಲ್ಲದೆ ಕೌಶಲ್ಯ ಪೂರ್ಣವಾದ ವಿದ್ಯಾಭ್ಯಾಸವನ್ನು ಮಕ್ಕಳಿಗೆ ನೀಡಿ ಅವರ ಪ್ರೌಢ ಹಂತದಲ್ಲಿ ತಮಗೆ ಬೇಕಾದ ಕ್ಷೇತ್ರದಲ್ಲಿ ಅತ್ಯುತ್ತಮವಾದ ಸಾಧನೆ ಮಾಡಲು ಈ ನೀತಿ ಅವಕಾಶ ನೀಡಿದ್ದು ಇದರ ಸದುಪಯೋಗ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ಎಜುಕೇಶನ್ ಸರ್ವಿಸ್ ಟ್ರಸ್ಟ್ ಅಧ್ಯಕ್ಷ ಸಿ.ಎ. ಉತ್ತಯ್ಯ ವಹಿಸಿ ಮಾತನಾಡಿದರು. ಎಜುಕೇಷನ್ ಸೊಸೈಟಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸಿ.ಎಂ. ರಂಜಿತ್ ಕಾರ್ಯಪ್ಪ, ಖಜಾಂಚಿ ಎಂ.ಎನ್. ಹರೀಶ್, ಶಾಲಾ ಮುಖ್ಯೋಪಾಧ್ಯಾಯಿನಿ ಮೇರಿ ಫಾತಿಮಾ, ಟ್ರಸ್ಟಿಗಳಾದ ಕೆ.ಎ. ಚಂಗಪ್ಪ, ಬಿ.ಡಿ. ಸುಭಾಷ್, ಅನಿಲ್ ಪೊನ್ನಪ್ಪ, ಅಜಿತ್ ಅಪ್ಪಚ್ಚು, ಸಂಜಯ್ ಎಸ್.ಜೆ., ಕೆ.ಎ. ಚಂಗಪ್ಪ ಸೇರಿದಂತೆ ಹಾಜರಿದ್ದರು.

ಶಾಲೆಯ ಹಳೆ ವಿದ್ಯಾರ್ಥಿನಿ ಎ.ಸಿ. ರುಷಾಲಿ ಚಂಗಪ್ಪ, ಮನಶಾಸ್ತçದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪ್ರಥಮ ರ‍್ಯಾಂಕ್‌ನಲ್ಲಿ ತೇರ್ಗಡೆಗೊಂಡಿದ್ದು ಅವರನ್ನು ಸನ್ಮಾನಿಸಲಾಯಿತು.