ಜನವರಿ ತಾ. ೯: ಕಾಂಗ್ರೆಸ್ ಹಮ್ಮಿಕೊಂಡಿದ್ದ ಮೇಕೆದಾಟು ಯಾತ್ರೆಗೆ ಸಂಗಮದಲ್ಲಿ ಚಾಲನೆ ದೊರಕಿತು.
ತಾ. ೧೩. ಕಾಂಗ್ರೆಸ್ ಹಮ್ಮಿಕೊಂಡಿದ್ದ ಮೇಕೆದಾಟು ಪಾದಯಾತ್ರೆ ಕೋವಿಡ್ ಪ್ರಕರಣಗಳ ಹೆಚ್ಚಳದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿತು.
ತಾ. ೨೭. ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ೨೦ ಅಧಿಕಾರಿ ಗಳನ್ನು ರೂ. ೮೬ ಕೋಟಿ ಅವ್ಯವಹಾರ ನಡೆಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಅಮಾನತುಗೊಳಿಸಲಾಯಿತು.
ತಾ. ೩೧. ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಹೇರಲಾಗಿದ್ದ ನೈಟ್ ಕರ್ಫ್ಯೂವನ್ನು, ಕೋವಿಡ್ ಪ್ರಕರಣಗಳಲ್ಲಿ ಇಳಿಕೆ ಕಂಡ ಕಾರಣ ರದ್ದುಗೊಳಿಸಲಾಯಿತು.
ಫೆಬ್ರವರಿ ತಾ. ೮. ರಾಜ್ಯದಲ್ಲಿ ವಿದ್ಯಾಸಂಸ್ಥೆಗಳಲ್ಲಿ ಹಿಜಾಬ್ ಹಾಗೂ ಕೇಸರಿ ವಸ್ತç ವಿಚಾರವಾಗಿ ಆರಂಭಗೊAಡ ವಿವಾದ ಹಿಂಸಾ ರೂಪ ಪಡೆದಿದ್ದು ರಾಜ್ಯದ ವಿವಿಧೆಡೆ ಪ್ರತಿಭಟನೆ, ಕಲ್ಲು ತೂರಾಟ, ಪೊಲೀಸ ರಿಂದ ಲಾಠಿ ಪ್ರಹಾರ ನಡೆಯಿತು.
ತಾ. ೧೦. ಹಿಜಾಬ್ ವಿವಾದಕ್ಕೆ ಸಂಬAಧಿಸಿದAತೆ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ನ್ಯಾಯಾಲಯ ನಿರ್ಧಾರ ಕೈಗೊಳ್ಳುವವರೆಗೆ ಶಿಕ್ಷಣ ಸಂಸ್ಥೆಗಳಲ್ಲಿ ಯಾರೂ ಧಾರ್ಮಿಕ ಆಚರಣೆಯ ಭಾಗವಾದ ಉಡುಪುಗಳನ್ನು ಧರಿಸದಂತೆ ಹೈಕೋರ್ಟಿ ಮಧ್ಯಂತರ ಆದೇಶ ನೀಡಿತು.
ತಾ. ೨೨. ಶಿವಮೊಗ್ಗದ ಭಜರಂಗದಳದ ಕಾರ್ಯಕರ್ತ ಹರ್ಷನನ್ನು ಕಿಡಿಗೇಡಿಗಳು ಹತ್ಯೆ ಮಾಡಿದರು. ರಾಜ್ಯಾದ್ಯಂತ ಕೆಲ ದಿನಗಳ ಕಾಲ ತೀವ್ರ ತರಹದ ಪ್ರತಿಭಟನೆ ನಡೆಯಿತು.
ಮಾರ್ಚ್ ತಾ. ೧. ರಷ್ಯಾ ಯುಕ್ರೇನ್ ಯುದ್ಧದಲ್ಲಿ ರಷ್ಯಾದ ಶೆಲ್ ದಾಳಿಗೆ ಕನ್ನಡಿಗ ರಾಣಿಬೆನ್ನೂರಿನ ವಿದ್ಯಾರ್ಥಿ ನವೀನ ಮೃತಪಟ್ಟನು.
ತಾ. ೫. ರಷ್ಯಾ ದಾಳಿಗೆ ತುತ್ತಾದ ಯೂಕ್ರೇನ್‌ನಲ್ಲಿ ವ್ಯಾಸಂಗ ಮಾಡು ತ್ತಿದ್ದ ೩೬೦ ಕನ್ನಡಿಗರು ವಾಪಸ್ಸು ಮನೆಗೆ ಸುರಕ್ಷಿತವಾಗಿ ಹಿಂತಿರುಗಿದರು.
ತಾ. ೧೨. ರೈತರ ಹಕ್ಕು ಮತ್ತು ಅರ್ಹತೆ ನಿರ್ಧರಿಸುವ ಮೂಲ ಕಂದಾಯ ದಾಖಲೆಗಳನ್ನು ಜನರ ಬಾಗಿಲಿಗೆ ಉಚಿತವಾಗಿ ತಲುಪಿಸುವ ನೂತನ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು.
ತಾ. ೧೪. ವಿಶ್ವದ ಅತಿದೊಡ್ಡ ಬಿಟ್‌ಕಾಯಿನ್ ಹಗರಣದಲ್ಲಿ ರಾಜ್ಯ ದಲ್ಲೂ ಬಿಟ್‌ಕಾಯಿನ್ ಹಗರಣದಲ್ಲಿ ಆರೋಪಿಯಾಗಿ ಶ್ರೀಕಿ ಭಾಗಿ ಯಾಗಿರುವುದಾಗಿ ಆತ ಪೊಲೀಸ್ ವಶದಲ್ಲಿದ್ದಾಗ ಹೇಳಿಕೊಂಡನು.
ತಾ. ೧೫. ರಾಜ್ಯದ ೨೦ ಜಿಲ್ಲೆಗಳಲ್ಲಿ ೭೭ ಕಡೆ ಎ.ಸಿ.ಬಿ ದಾಳಿ ನಡೆಸಿದ್ದು ೧೮ ಭ್ರಷ್ಟ ಅಧಿಕಾರಿಗಳು ಬಲೆಗೆ ಬಿದ್ದರು.ಏಪ್ರಿಲ್ ತಾ. ೧೨. ಕಾಮಗಾರಿ ವರ್ಕ್ ಆರ್ಡರ್ ನೀಡಲು ೪೦ ಶೇಕಡ ಕಮಿಷನ್ ಕೇಳುತ್ತಾರೆ ಎಂಬುದಾಗಿ ಸಚಿವ ಈಶ್ವರಪ್ಪ ವಿರುದ್ಧ ಪ್ರಧಾನಿವರೆಗೂ ದೂರು ನೀಡಿದ್ದ ಬೆಳಗಾವಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆಗೆ ಶರಣಾಗಿದ್ದು, ಈಶ್ವರಪ್ಪ ರಾಜಿನಾಮಿಗೆ ವಿರೋಧ ಪಕ್ಷಗಳ ಒತ್ತಾಯದ ಕೂಗು ಹೆಚ್ಚಿತು.
ತಾ. ೨೯. ರಾಜ್ಯದಲ್ಲಿ ಪಿ.ಎಸ್.ಐ ಪರೀಕ್ಷೆಯಲ್ಲಿ ಅಕ್ರಮ ನಡೆದ ಹಿನ್ನೆಲೆ ಮರು ಪರೀಕ್ಷೆಗೆ ಸರಕಾರ ನಿರ್ಧಾರ ಕೈಗೊಂಡಿತು. ಅಕ್ರಮದಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿ ಬಿ.ಜಿ.ಪಿ ನಾಯಕಿ ದಿವ್ಯಾ ಹಾಗರಗಿಯನ್ನು ಸಿ.ಐ.ಡಿ ಪೊಲೀಸರು ಬಂಧಿಸಿದರು.
ಮೇ. ತಾ. ೧. ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಧಾರ್ಮಿಕ ಕೇಂದ್ರ ಗಳಲ್ಲಿ ಧ್ವನಿವರ್ಧಕ ಬಳಕೆಗೆ ಸರಕಾರ ಹೊಸ ನಿಯಮಗಳನ್ನು ಸೃಷ್ಟಿಸಿ ಆದೇಶ ಹೊರಡಿಸಿತು. ಬೆ.೬ ರಿಂದ ರಾತ್ರಿ ೧೦ ಗಂಟೆಯವರೆಗೆ ಮಾತ್ರ ಲೌಡ್‌ಸ್ಪೀಕರ್ ಗಳನ್ನು ನಿಯಮ ಪಾಲನೆಯೊಂದಿಗೆ ಬಳಸುವಂತೆ ಮಹತ್ವದ ನಿರ್ಧಾರ ಕೈಗೊಂಡಿತು.
ತಾ. ೧. ರಾಜ್ಯದಲ್ಲಿ ದೇಶದ ಬೃಹತ್ ಸೆಮಿಕಂಡಕ್ಟರ್ ಪ್ಲಾಂಟ್ ನಿರ್ಮಾಣಕ್ಕೆ ಸರಕಾರ ಹಾಗೂ ಐ.ಎಸ್.ಎಮ್.ಸಿ ಅನಲಾಗ್ ಲ್ಯಾಬ್ಸ್ ನಡುವೆ ಒಪ್ಪಂದವಾಯಿತು.
ತಾ. ೧೨. ರಾಜ್ಯದಲ್ಲಿ ಮತಾಂತರ ತಡೆ ಸುಗ್ರೀವಾಜ್ಞೆಗೆ ಸಚಿವ ಸಂಪುಟ ಸಭೆ ಅನಮೋದನೆ ನೀಡಿತು.
ತಾ. ೧೮. ರಾಜ್ಯದಲ್ಲಿ ಬಿರುಸಿನ ಮಳೆಯಿಂದಾಗಿ ಹಲವೆಡೆ ಹಾನಿಗಳಾ ಗಿದ್ದು ಬೆಂಗಳೂರು ನಗರದ ಬಹುತೇಕ ಬಡಾವಣೆಗಳು ಜಲಾವೃತಗೊಂಡವು.
ತಾ. ೨೩. ಸ್ವಿಟ್‌ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಶೃಂಗದ ವಾರ್ಷಿಕ ಮಹಾಸಭೆ ಲುಲು ಗ್ರೂಪ್ ನೊಂದಿಗೆ ಕರ್ನಾಟಕ ಮುಖ್ಯಮಂತ್ರಿ ರೂ.೨೦೦೦ ಕೋಟಿ ಒಪ್ಪಂದಕ್ಕೆ ಸಹಿ ಹಾಕಿದರು.
ಜೂನ್ ತಾ. ೫. ಬೆಂಗಳೂರಿನಲ್ಲಿ ಹಮಾಲಿ ಸೋಗಿನಲ್ಲಿ ನೆಲೆಸಿದ್ದ ಹುಜ್ಬುಲ್ ಉಗ್ರ ಸಂಘಟನೆಯ ತಾಲಿಬ್ ಹುಸೇನ್‌ಅನ್ನು ಬಂಧಿಸಲಾಯಿತು.
ತಾ. ೨೧. ವಿಶ್ವ ಯೋಗ ದಿನದ ಪ್ರಯುಕ್ತ ಮೈಸೂರಿನ ಅರಮನೆ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಯೋಗ ದಿನ ಆಚರಿಸ ಲಾಯಿತು.
ತಾ. ೫. ಐಟಿ ನಗರ ಬೆಂಗಳೂರು ಅಕ್ಷರಶಃ ಪ್ರವಾಹಕ್ಕೆ ತುತ್ತಾಗಿದ್ದು, ಮನೆ, ಮಾಲ್‌ಗಳೊಳಗೆಲ್ಲಾ ನೀರು ತುಂಬಿ ವಿಶ್ವದಲ್ಲೇ ಸುದ್ದಿಯಾಯಿತು.
ತಾ. ೧೧. ಭಾರತದಲ್ಲೇ ಅತ್ಯಂತ ಕಷ್ಟಕಾರಿ ಪರೀಕ್ಷೆಯಾಗಿರುವ ಇಂಜಿನಿಯರಿAಗ್ ಸಂಬAಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯಾಗಿರುವ ಜೆ.ಇ.ಇ ಅಡ್ವಾನ್ಸ್÷್ಡ ಪರೀಕ್ಷೆಯಲ್ಲಿ ಬೆಂಗಳೂರಿನ ಆರ್. ಶಿಶಿರ್ ಭಾರತಕ್ಕೆ ಪ್ರಥಮ ಸ್ಥಾನ ಗಳಿಸುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದರು.
ತಾ. ೧೪. ದಸರಾದಲ್ಲಿ ಪಾಲ್ಗೊಳ್ಳಲು ಅರಮನೆ ಆವರಣದಲ್ಲಿ ನೆಲೆಸಿದ್ದ ಆನೆ ಲಕ್ಷಿö್ಮÃ ಮರಿಯಾನೆಗೆ ಜನ್ಮ ನೀಡಿತು.
ತಾ. ೨೦. ಇಬ್ಬರು ಐಸಿಸ್ ಉಗ್ರರಾದ ಯಾಸೀನ್ ಹಾಗೂ ಮುನೀರ್‌ನನ್ನು ಶಿವಮೊಗ್ಗದಲ್ಲಿ ಸೆರೆ ಹಿಡಿಯಲಾಯಿತು.
ತಾ. ೨೧. ಭ್ರಷ್ಟಾಚಾರ ಆರೋಪಕ್ಕೆ ಸಂಬAಧಿಸಿದAತೆ ರಾಜಧಾನಿ ಬೆಂಗಳೂರಿನಲ್ಲಿ ಸಿ.ಎಂ ಬಸವರಾಜ್ ಬೊಮ್ಮಾಯಿ ಅವರ ಭಿತ್ತಿಚಿತ್ರವನ್ನು ಗೋಡೆಗಳಿಗೆ ಅಂಟಿಸಿ ಅವರನ್ನು ಟೀಕಿಸುವ ಪೇ-ಸಿ.ಎಂ ಅಭಿಯಾನವನ್ನು ಕಾಂಗ್ರೆಸ್ ಕೈಗೊಂಡಿತು.
ಅಕ್ಟೋಬರ್ ತಾ. ೫. ಮೈಸೂರು ದಸರಾ ಪ್ರಯುಕ್ತ ನಡೆದ ಜಂಬೂ ಸವಾರಿಯನ್ನು ೫ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದರು.
ತಾ. ೨೮. ಕನ್ನಡ ರಾಜ್ಯೋತ್ಸವ ಪ್ರಯುಕ್ತ ರಾಜ್ಯಾದ್ಯಂತ ನಡೆದ ಕೋಟಿ ಕಂಠ ಗಾಯನದಲ್ಲಿ ೧.೫ ಕೋಟಿ ಮಂದಿ ಪಾಲ್ಗೊಂಡು ಗಿನ್ನಿಸ್ ದಾಖಲೆ ಸೃಷ್ಟಿಸಿತು.
ನವೆಂಬರ್ ತಾ. ೨. ಇನ್ವೆಸ್ಟ್ ಕರ್ನಾಟಕದಲ್ಲಿ ೭.೫ ಲಕ್ಷ ಕೋಟಿ ಹೂಡಿಕೆಯಾಯಿತು.
ತಾ. ೭. ವಂದೇ ಭಾರತ್ ಎಕ್ಸ್ಪ್ರೆಸ್‌ಗೆ ಮೈಸೂರಿನಲ್ಲಿ ಚಾಲನೆ ದೊರಕಿತು.
ತಾ. ೧೧. ನಾಡಪ್ರಭು ಕೆಂಪೇಗೌಡರ ಪ್ರತಿಮೆ ಯನ್ನು ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅನಾವರಣಗೊಳಿಸಿದರು.
ತಾ. ೨೦. ಮಂಗಳೂರು ಕಂಕನಾಡಿ ಸಮೀಪ ಆಟೋರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿದ್ದು ರಾಜ್ಯವನ್ನೇ ತಲ್ಲಣಗೊಳಿಸಿತು. ಆರೋಪಿ ಶಾರಿಖ್ ನನ್ನು ಬಂಧಿಸಲಾಯಿತು.
ಡಿಸೆAಬರ್ ತಾ. ೬. ಬೆಳಗಾವಿಯಲ್ಲಿ ಮಹಾರಾಷ್ಟç-ಕರ್ನಾಟಕ ಗಡಿ ವಿವಾದ ಹೆಚ್ಚಿದ್ದು, ಮಹಾರಾಷ್ಟçದ ಸಚಿವರು ಬೆಳಗಾವಿಗೆ ಬರದಂತೆ ಕರ್ನಾಟಕ ಮುಖ್ಯಮಂತ್ರಿ ಸೂಚನೆಯಂತೆ ಬೆಳಗಾವಿ ಜಿಲ್ಲಾಧಿಕಾರಿ ಮಹಾರಾಷ್ಟçದ ಮೂವರ ಸಚಿವರ ವಿರುದ್ಧ ೧೪೪ ಸೆಕ್ಷನ್ ಜಾರಿ ಮಾಡಿದರು.
ತಾ. ೧೯. ಬೆಳಗಾವಿ ಜಿಲ್ಲೆ ಗಡಿ ಪ್ರವೇಶಿಸಲು ಯತ್ನಿಸಿದ ಮಹಾರಾಷ್ಟçದ ಶಿವಸೇನಾ ಕಾರ್ಯಕರ್ತರನ್ನು ದೂದಗಂಗಾ ನದಿ ಸೇತುವೆ ಬಳಿ ಪೊಲೀಸರು ತಡೆದು ವಾಪಸ್ಸು ಕಳುಹಿಸಿದರು.
ತಾ. ೨೨. ಕೊರೊನಾ ಪ್ರಕರಣಗಳು ಮತ್ತೇ ಹೆಚ್ಚಾಗುವ ಸಾಧ್ಯತೆಗಳಿದ್ದು, ರಾಜ್ಯದಾದ್ಯಂತ ಒಳಾಂಗಣಳಲ್ಲಿ ಮಾಸ್ಕ್ ಧರಿಸುವಂತೆ ರಾಜ್ಯ ಸರಕಾರ ಸೂಚನೆ ನೀಡಿತು.