ಮಡಿಕೇರಿ, ಡಿ. ೩೧: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿರುವ ಮಾಂದಲ್ಪಟ್ಟಿಗೆ ಜನವರಿ ೧ರಿಂದ (ಇಂದಿನಿAದ) ಶುಲ್ಕ ಹೆಚ್ಚಳವಾಗಲಿದೆ. ಹಿರಿಯರಿಗೆ ರೂ. ೨೫ ಹಾಗೂ ೫ರಿಂದ ೧೦ ವರ್ಷದೊಳಗಿನವರಿಗೆ ರೂ. ೧೦ ಶುಲ್ಕ ಹೆಚ್ಚಳವಾಗಲಿದೆ. ಈ ಹಿಂದೆ ರೂ. ೨೫ ಹಾಗೂ ರೂ. ೧೦ ಪ್ರವೇಶ ಶುಲ್ಕವಿದ್ದು, ಇದೀಗ ಈ ಪ್ರದೇಶದಲ್ಲಿ ಕೆಲವು ಸೌಲಭ್ಯಗಳನ್ನು ಒದಗಿಸಿರುವುದರಿಂದ ಉಪಯೋಗಿತ ಶುಲ್ಕ (Useಡಿ ಈee) ಎಂದು ಈ ಹಿಂದಿನ ಮೊತ್ತದೊಂದಿಗೆ ಹೆಚ್ಚುವರಿಯಾಗಿ ಹಿರಿಯರಿಂದ ರೂ. ೨೫ ಹಾಗೂ ೫ರಿಂದ ೧೦ ವರ್ಷದ ಮಕ್ಕಳಿಗೆ ರೂ. ೧೦ ಸಂಗ್ರಹ ಮಾಡಲಾಗುವುದು. ಇದು ಜ.೧ರಿಂದ ಅಧಿಕೃತವಾಗಿ ಜಾರಿಯಾಗಲಿದೆ. ಈ ಆದಾಯವನ್ನು ಕೊಡಗು ಮಾನವ- ವನ್ಯಪ್ರಾಣಿ ಸಂಘರ್ಷ ಉಪಶಮನ ಪ್ರತಿಷ್ಠಾನ ನಿಧಿಗೆ ಬಳಸಲಾಗುವುದು ಎಂದು ಇಲಾಖಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.