ಗೋಣಿಕೊಪ್ಪ ವರದಿ, ಡಿ. ೩೧: ಪ್ರಕೃತಿ ಆಧಾರಿತ ಪಂಚಾAಗ ವ್ಯವಸ್ಥೆಯನ್ನು ಅನುಸರಿಸಬೇಕಿದೆ ಎಂದು ಕನ್ನಡ ಸಂಸ್ಕೃತಿ ಸೇವಾ ಭಾರತಿ ಸಂಸ್ಥಾಪಕ ಓಂಕಾರ ಪ್ರಿಯ ಬಾಗೇಪಲ್ಲಿ ಹೇಳಿದರು.
ಕನ್ನಡ ಸಂಸ್ಕೃತಿ ಸೇವಾ ಭಾರತಿ ಮತ್ತು ಅರಮೇರಿ ಶಾಂತ ಮಲ್ಲಿಕಾರ್ಜುನ ಶಾಲೆ ವತಿಯಿಂದ ಆಯೋಜಿಸಿದ್ದ ಕನ್ನಡ ಪದ ಸಂಪತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಪಂಚಾAಗ ವ್ಯವಸ್ಥೆಯು ಭಾರತೀಯ ಪರಂಪರೆಯಾಗಿದೆ. ಇದನ್ನು ಅನುಸರಿಸಬೇಕಿದೆ. ವರ್ಷಕೊಮ್ಮೆ ನಮ್ಮ ಆಚರಣೆ ಬಗ್ಗೆ ಪರಿಷ್ಕರಣೆ ಅಗತ್ಯವಿದೆ. ವಿದ್ಯಾರ್ಥಿಗಳಿಗೆ ಭಾಷೆಯ ಸೊಗಡು, ಪಾರಂಪಾರಿಕ ಇತಿಹಾಸದ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೋಮೇಂಗಡ ಗಣೇಶ್ ತಿಮ್ಮಯ್ಯ ಮಾತನಾಡಿ, ಕೃಷಿ ಪದ್ಧತಿಯಲ್ಲಿ ವಿದ್ಯಾರ್ಥಿಗಳು ತೊಡಗಿಕೊಳ್ಳಬೇಕಿದೆ ಎಂದರು. ಕನ್ನಡದ ನೆಲಕ್ಕೆ ಕೃಷಿಯೊಂದಿಗೆ ತಮ್ಮನ್ನು ಅರ್ಪಿಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ನೀಡಿದರು.
ಎಸ್‌ಎಂಎಸ್ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಪ್ರಾಂಶುಪಾಲ ಬಲ್ಲಚಂಡ ಕುಸುಮ್ ಟಿಟೋ ಇದ್ದರು.