ಸೋಮವಾರಪೇಟೆ, ಡಿ. ೩೧: ವೈಕುಂಠ ಏಕಾದಶಿ ಅಂಗವಾಗಿ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್‌ನಿAದ ಇಲ್ಲಿನ ಶ್ರೀರಾಮ ಮಂದಿರದಲ್ಲಿ ಜ. ೨ ರಂದು (ನಾಳೆ) ಸತ್ಸಂಗ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಶಿಕ್ಷಕಿ ರಾಗಿಣಿ ತಿಳಿಸಿದ್ದಾರೆ.

ಆರ್ಟ್ ಆಫ್ ಲಿವಿಂಗ್‌ನ ಸ್ವಾಮಿ ಸೂರ್ಯಪಾದಜೀ (ಛಾಯಣ್ಣ) ಅವರ ನೇತೃತ್ವದಲ್ಲಿ ಸಂಜೆ ೬ ಗಂಟೆಯಿAದ ಗಾನ, ಧ್ಯಾನ, ಜ್ಞಾನದ ಸತ್ಸಂಗ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಏಕಾದಶಿ ಆಚರಣೆ: ಇಲ್ಲಿನ ಕುರುಹಿನಶೆಟ್ಟಿ ಸಮಾಜದ ಶ್ರೀ ರಾಮಮಂದಿರದಲ್ಲಿ ಜ. ೨ರಂದು ೬ನೇ ವರ್ಷದ ವೈಕುಂಠ ಏಕಾದಶಿ ನಡೆಯಲಿದೆ ಎಂದು ಪ್ರಧಾನ ಕಾರ್ಯದರ್ಶಿ ಬಿ.ಎನ್. ಮಂಜುನಾಥ್ ತಿಳಿಸಿದ್ದಾರೆ.

ಅಂದು ಬೆಳಿಗ್ಗೆ ೭ ರಿಂದ ೧೦ರವರೆಗೆ ಮತ್ತು ಸಂಜೆ ೫ ರಿಂದ ೮.೩೦ರ ವರೆಗೆ ಸ್ವರ್ಗದ ಬಾಗಿಲ ಪ್ರವೇಶ ಮತ್ತು ದೇವರ ದರ್ಶನವಿರುತ್ತದೆ. ಸಂಜೆ ೫ಕ್ಕೆ ಸೀತಾ ಬಳಗದಿಂದ ವಿಷ್ಣು ಸಹಸ್ರನಾಮ ಪಠಣ ನಡೆಯಲಿದೆ.