ಮಡಿಕೇರಿ, ಡಿ. ೩೧: ಹೊಸದಾಗಿ ರಚನೆಯಾಗಿರುವ ಪೊನ್ನಂಪೇಟೆ ಮತ್ತು ಕುಶಾಲನಗರ ತಾಲೂಕುಗಳಿಗೆ ಸಂಬAಧಿಸಿದAತೆ ತಾಲೂಕು ಪಂಚಾಯಿತಿ ಕಚೇರಿಗಳಿಗೆ ಹುದ್ದೆಗಳನ್ನು ಮಂಜೂರು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಕಾರ್ಯನಿರ್ವಾಹಕ ಅಧಿಕಾರಿ (ಗ್ರೂಪ್-ಎ ಕಿರಿಯ ಶ್ರೇಣಿ) ೦೧, ಸಹಾಯಕ ಲೆಕ್ಕಾಧಿಕಾರಿ (ಗ್ರೂಪ್-ಬಿ) ೦೧, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) (ಗ್ರೂಪ್-ಬಿ) ೦೧, ತಾಲೂಕು ಯೋಜನಾಧಿಕಾರಿ (ಗ್ರೂಪ್ -ಬಿ) ೦೧, ಪ್ರಥಮ ದರ್ಜೆ ಸಹಾಯಕರು (ಗ್ರೂಪ್-ಸಿ) ೦೧, ಪ್ರಥಮ ದರ್ಜೆ ಲೆಕ್ಕ ಸಹಾಯಕರು (ಗ್ರೂಪ್-ಸಿ) ೦೧, ದ್ವಿತೀಯ ದರ್ಜೆ ಸಹಾಯಕ (ಗ್ರೂಪ್-ಸಿ) ೦೨, ಬೆರಳಚ್ಚುಗಾರರು / ಡಿಇಒ (ಗ್ರೂಪ್-ಸಿ) ೦೧, ವಾಹನ ಚಾಲಕರು (ಗ್ರೂಪ್-ಸಿ) ೦೧ ಮತ್ತು ‘ಡಿ’ ದರ್ಜೆ ನೌಕರರು ೦೨ ಒಟ್ಟು ೧೨ ಹುದ್ದೆಗಳನ್ನು ಸೃಜಿಸಿ ಸರ್ಕಾರ ಆದೇಶ ಹೊರಡಿಸಿದೆ.