ನಾಗರಹೊಳೆ ರಾಷ್ಟಿçÃಯ ಉದ್ಯಾನದಲ್ಲಿ ಆನೆ ದಾಳಿ : ಸಾವು

ಬೆಂಗಳೂರು, ಜ. ೧: ನಾಗರಹೊಳೆ ರಾಷ್ಟಿçÃಯ ಉದ್ಯಾನವನದ ಅರಣ್ಯ ವೀಕ್ಷಕರೊಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಮೃತರನ್ನು ಮಹದೇವಸ್ವಾಮಿ (೩೫) ಎಂದು ಗುರುತಿಸಲಾಗಿದ್ದು, ಇತರ ಮೂವರೊಂದಿಗೆ ಕೆಲವು ಕೃಷಿ ಹೊಲಗಳಿಂದ ಕಾಡಾನೆಗಳ ಹಿಂಡನ್ನು ಓಡಿಸುತ್ತಿದ್ದಾಗ ಆನೆಯೊಂದು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ದಾಳಿ ಮಾಡಿದೆ. ಅರಣ್ಯ ಇಲಾಖೆ ಸಿಬ್ಬಂದಿ ಹಿಂದೆ ಓಡಿ ಬರುವಷ್ಟರಲ್ಲಿ ಆನೆ ಮಹದೇವಸ್ವಾಮಿ ಹಾಗೂ ರಾಜೇಶ್ ಮೇಲೆ ದಾಳಿ ಮಾಡಿದೆ. ಮಹದೇವಸ್ವಾಮಿ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡಿದ್ದ ರಾಜೇಶ್ ನಾಗರಹೊಳೆ ರಾಷ್ಟಿçÃಯ ಉದ್ಯಾನದ ಬಳಿಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ. ಹರ್ಷಕುಮಾರ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಆನೆಗಳು ಅರಣ್ಯದ ಪರಿಧಿಯಲ್ಲಿದ್ದು, ಅರಣ್ಯ ವೀಕ್ಷಕರ ಮೇಲೆ ಅನಿರೀಕ್ಷಿತವಾಗಿ ದಾಳಿ ಮಾಡಿದೆ ಎಂದಿದ್ದಾರೆ. ಶನಿವಾರ ತಡರಾತ್ರಿ ಆನೆ ಹಿಂಡು ಕೃಷಿ ಕ್ಷೇತ್ರಕ್ಕೆ ಬಂದಿದೆ. ಈ ವೇಳೆ ಅರಣ್ಯ ಇಲಾಖೆಯು ಎಚ್ಚೆತ್ತುಕೊಂಡಿದ್ದು, ಅರಣ್ಯ ವೀಕ್ಷಕರ ತಂಡವು ಆನೆಗಳನ್ನು ಹೊಲದಿಂದ ಓಡಿಸಲು ಸ್ಥಳಕ್ಕೆ ಬಂದಿತು. ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಜಮೀನಿನಿಂದ ಓಡಿಸುವ ಕಾರ್ಯದಲ್ಲಿ ತೊಡಗಿದ್ದಾಗ ಘಟನೆ ನಡೆದಿದೆ.

ಕಮರಿಗೆ ಬಿದ್ದ ಪ್ರವಾಸಿ ಬಸ್: ಓರ್ವ ಸಾವು

ಇಡುಕ್ಕಿ, ಜ. ೧: ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯ ಆದಿಮಾಲಿ ಬಳಿ ಭಾನುವಾರ ನಸುಕಿನ ಜಾವ ಪ್ರವಾಸಿ ಬಸ್ ಕಮರಿಗೆ ಬಿದ್ದು ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದು, ಸಿಬ್ಬಂದಿ ಸೇರಿದಂತೆ ೪೪ ಮಂದಿ ಗಾಯಗೊಂಡಿದ್ದಾರೆ. ಬಸ್ ಮಲಪ್ಪುರಂನ ತಿರೂರ್‌ನಲ್ಲಿರುವ ಪ್ರಾದೇಶಿಕ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳನ್ನು ವಿಹಾರಕ್ಕೆ ಕರೆದೊಯ್ದು ಹಿಂತಿರುಗುತ್ತಿತ್ತು. ಕಲ್ಲರಕುಟ್ಟಿ-ಮೈಲಾಡುಂಪಾರ ಮಾರ್ಗದ ತಿಂಗಳಕಡ್ ಸಮೀಪದ ಮುನಿಯಾರ ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಮೂಲಗಳ ಪ್ರಕಾರ, ಕಿರಿದಾದ ರಸ್ತೆಯಲ್ಲಿ ಕೂದಲೆಳೆ ಅಂತರದ ತಿರುವಿನಲ್ಲಿ ಬಸ್ ಕಮರಿಗೆ ಬಿದ್ದಿತು. ಭಾರೀ ಸದ್ದು ಕೇಳಿ ಅಪಘಾತ ನಡೆದ ಸ್ಥಳಕ್ಕೆ ತೆರಳಿದ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಗಾಯಾಳುಗಳನ್ನು ಆದಿಮಾಲಿ ತಾಲೂಕು ಆಸ್ಪತ್ರೆ ಹಾಗೂ ಕೋಳಂಚೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತನನ್ನು ಮಿಲ್ಹಾಜ್ ಎಂದು ಗುರುತಿಸಲಾಗಿದೆ. ವೆಲ್ಲತೂವಲ್ ಪೊಲೀಸರು ಮತ್ತು ಇಡುಕ್ಕಿ ಜಿಲ್ಲಾಧಿಕಾರಿ ಕೂಡ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯ ನಿಗಾ ವಹಿಸಿದ್ದಾರೆ.

ಅಂಕೋಲಾ ಬಳಿ ಭೀಕರ ಅಪಘಾತ; ತಮಿಳುನಾಡಿನ ನಾಲ್ವರ ಸಾವು

ಉತ್ತರಕನ್ನಡ, ಜ. ೧: ಹೊಸ ವರ್ಷದ ಸಂಭ್ರಮಾಚರಣೆಯ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸಾರಿಗೆ ಬಸ್‌ಗೆ ಕಾರು ಡಿಕ್ಕಿಯಾಗಿ ತಮಿಳುನಾಡು ಮೂಲದ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಾಳೆಗುಳಿ ಕ್ರಾಸ್ ಬಳಿ ಭಾನುವಾರ ಕಾರು ಎದುರಿನಿಂದ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್‌ಗೆ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಪ್ರವಾಸಿಗರು ಮೃತಪಟ್ಟಿದ್ದಾರೆ. ಮೃತರನ್ನು ತಮಿಳುನಾಡು ಮೂಲದ ಅರುಣ್ ಪಾಂಡ್ಯನ್, ನಿಫುಲ್, ಮಹ್ಮದ್ ಬಿಲ್ಲಾಲ್ ಮತ್ತು ಶೇಖರನ್ ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಮತ್ತೊಬ್ಬ ಪ್ರವಾಸಿಗ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ‘ಹೊಸ ವರ್ಷಾಚರಣೆ ನಿಮಿತ್ತ ಗೋವಾಕ್ಕೆ ತೆರಳಿದ್ದ ಈ ಪ್ರವಸಿಗರು ಅಲ್ಲಿಂದ ಗೋಕರ್ಣಕ್ಕೆ ತೆರಳುತ್ತಿದ್ದರು. ಹೆದ್ದಾರಿ ಮಧ್ಯದ ವಿಭಜಕಕ್ಕೆ ಬಡಿದು ಬಳಿಕ ಹುಬ್ಬಳ್ಳಿಯತ್ತ ಸಂಚರಿಸುತ್ತಿದ್ದ ಬಸ್‌ಗೆ ಡಿಕ್ಕಿಯಾಗಿದೆ’ ಎಂದು ಅಂಕೋಲಾ ಠಾಣೆ ಪೊಲೀಸರು ತಿಳಿಸಿದ್ದಾರೆ.

ಕ್ರೀಡಾ ಖಾತೆಯನ್ನು ಬಿಟ್ಟುಕೊಟ್ಟ ಸಂದೀಪ್ ಸಿಂಗ್

ಚAಡೀಗಢ, ಜ. ೧: ಲೈಂಗಿಕ ಕಿರುಕುಳ ಆರೋಪದಲ್ಲಿ ತಮ್ಮ ವಿರುದ್ಧ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಹರಿಯಾಣದ ಸಚಿವ ಸಂದೀಪ್ ಸಿಂಗ್ ಅವರು ಭಾನುವಾರ ತಮ್ಮ ಕ್ರೀಡಾ ಖಾತೆಯನ್ನು ಬಿಟ್ಟುಕೊಟ್ಟಿದ್ದು, ನೈತಿಕ ಆಧಾರದ ಮೇಲೆ ಈ ಕ್ರಮ ಕೈಗೊಂಡಿರುವುದಾಗಿ ಹೇಳಿದ್ದಾರೆ. ರಾಜ್ಯದ ಮಹಿಳಾ ಜೂನಿಯರ್ ಅಥ್ಲೆಟಿಕ್ಸ್ ತರಬೇತುದಾರರ ದೂರಿನ ಮೇರೆಗೆ ಚಂಡೀಗಢ ಪೊಲೀಸರು ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಮಾಜಿ ಭಾರತೀಯ ಹಾಕಿ ತಂಡದ ನಾಯಕರೂ ಆಗಿರುವ ೩೬ ವರ್ಷದ ಸಿಂಗ್ ವಿರುದ್ಧ ಅಕ್ರಮ ಬಂಧನ ಮತ್ತು ಕ್ರಿಮಿನಲ್ ಬೆದರಿಕೆಯ ಆರೋಪವನ್ನೂ ಹೊರಿಸಲಾಗಿದೆ. ತಮ್ಮ ವರ್ಚಸ್ಸಿಗೆ ಕಳಂಕ ತಂದಿದ್ದಾರೆ ಎಂದು ಆರೋಪಿಸಿ ಮಹಿಳಾ ಕೋಚ್ ವಿರುದ್ಧ ಸಂದೀಪ್ ಸಿಂಗ್ ಅವರು ದೂರು ದಾಖಲಿಸಿದ ನಂತರ ಹರಿಯಾಣದ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಶನಿವಾರ ಸಮಿತಿಯನ್ನು ರಚಿಸಿದ್ದರು. ಈ ಸಮಿತಿಯು ತನ್ನ ವರದಿಯನ್ನು ನೀಡುವವರೆಗೆ, ನೈತಿಕ ಆಧಾರದ ಮೇಲೆ ಅವರು ತಮ್ಮ ಕ್ರೀಡಾ ಖಾತೆಯನ್ನು ಮುಖ್ಯಮಂತ್ರಿಗೆ ಹಸ್ತಾಂತರಿಸುತ್ತಿದ್ದೇನೆ ಎಂದಿದ್ದರು.

ಅಮೂಲ್ ಜೊತೆ ನಂದಿನಿ ವಿಲೀನ ಇಲ್ಲ: ಸಿಎಂ ಸ್ಪಷ್ಟನೆ

ಬೆಂಗಳೂರು, ಜ. ೧: ಕರ್ನಾಟಕ ಹಾಲು ಮಹಾಮಂಡಳದ ಉತ್ಪನ್ನ ನಂದಿನಿಯನ್ನು ಗುಜರಾತ್‌ನ ಅಮೂಲ್ ಜೊತೆಗೆ ವಿಲೀನ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟ ಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಂದಿನಿ ವಿಲೀನವಾಗಲಿದೆ ಎಂದು ಯಾರೂ ಊಹೆ ಮಾಡಿ ಟೀಕೆ ಮಾಡಬಾರದು. ನಂದಿನಿ ತನ್ನ ಸ್ವಂತ ಅಸ್ತಿತ್ವ ಉಳಿಸಿಕೊಳ್ಳಲಿದೆ. ಅಮುಲ್ ನೊಂದಿಗೆ ವಿಲೀನ ಮಾಡುತ್ತಾರೆ ಎನ್ನುವುದು ತಪ್ಪು ಕಲ್ಪನೆ. ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಮಾತನಾಡಿರುವುದು ಸ್ಪಷ್ಟವಾಗಿದೆ. ನಂದಿನಿ ಮತ್ತು ಅಮುಲ್ ತಾಂತ್ರಿಕವಾಗಿ, ಮಾರುಕಟ್ಟೆಯಲ್ಲಿ ಸಹಕಾರ ಮಾಡಬೇಕು. ಇವೆರಡೂ ದೊಡ್ಡ ಸಂಸ್ಥೆಗಳು. ಪೂರಕವಾಗಿ ಕೆಲಸ ಮಾಡಬೇಕು. ಅದರರ್ಥ ವಿಲೀನಗೊಳಿಸುವುದು ಎಂದಲ್ಲ. ನಂದಿನಿ ಅಸ್ತಿತ್ವ ನೂರಾರು ವರ್ಷ ಶಾಶ್ವತವಾಗಿ ಇರಲಿದೆ ಎಂದರು.

ಕಾಬೂಲ್ ಮಿಲಿಟರಿ ವಿಮಾನ ನಿಲ್ದಾಣ ಬಳಿ ಭಾರಿ ಸ್ಫೋಟ; ೧೦ ಮಂದಿ ಸಾವು

ಕಾಬೂಲ್, ಜ. ೧: ಕಾಬೂಲ್ ಮಿಲಿಟರಿ ವಿಮಾನ ನಿಲ್ದಾಣದಲ್ಲಿ ಭಾನುವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಟ ೧೦ ಜನರು ಸಾವನ್ನಪ್ಪಿದ್ದು, ೮ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಕುರಿತು ತಾಲಿಬಾನ್ ಆಂತರಿಕ ಸಚಿವಾಲಯದ ವಕ್ತಾರ ಅಬ್ದುಲ್ ನಫೀ ಟಕ್ಕೂರ್ ಮಾಹಿತಿ ನೀಡಿದ್ದು, ಕಾಬೂಲ್‌ನ ಮಿಲಿಟರಿ ವಿಮಾನ ನಿಲ್ದಾಣದ ಮುಖ್ಯ ಗೇಟ್‌ಗೆ ಸಮೀಪದಲ್ಲಿ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಉತ್ತರ ತಖಾರ್ ಪ್ರಾಂತ್ಯದ ರಾಜಧಾನಿ ತಾಲೂಕನ್ ನಗರದಲ್ಲಿ ಬುಧವಾರ ಸಂಭವಿಸಿದ ಸ್ಫೋಟದಲ್ಲಿ ನಾಲ್ಕು ಜನರು ಗಾಯಗೊಂಡ ಮೂರು ದಿನಗಳ ನಂತರ ಈ ಸ್ಫೋಟ ಸಂಭವಿಸಿದೆ. ತಾಲಿಬಾನ್ ಭದ್ರತಾ ಕಮಾಂಡರ್ ಅಬ್ದುಲ್ ಮುಬಿನ್ ಸಫಿ ಸ್ಫೋಟವನ್ನು ದೃಢಪಡಿಸಿದ್ದು, ಸ್ಥಳೀಯ ಆಡಳಿತ ಸಿಬ್ಬಂದಿಯ ಮೇಜಿನ ಕೆಳಗೆ ಬಾಂಬ್ ಇರಿಸಿ ಸ್ಫೋಟಿಸಲಾಗಿದೆ. ಈ ಘಟನೆಯಲ್ಲಿ ಕನಿಷ್ಟ ೧೦ ಜನರು ಸಾವನ್ನಪ್ಪಿದ್ದು, ೮ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಳಿಯ ಹೊಣೆಯನ್ನು ಇದುವರೆಗೆ ಯಾರೂ ವಹಿಸಿಕೊಂಡಿಲ್ಲ.