ಸೋಮವಾರಪೇಟೆ, ಜ. ೧: ಕಾಂಗ್ರೆಸ್ ಜಿಲ್ಲಾ ಪರಿಶಿಷ್ಟ ಜಾತಿ ಘಟಕದ ವತಿಯಿಂದ ಶನಿವಾರ ಸಂತೆಯ ಅಂಬೇಡ್ಕರ್ ಭವನದಲ್ಲಿ ಶನಿವಾರಸಂತೆ ವಲಯದ ಸಭೆ ನಡೆದು, ಕಿತ್ತೂರು ಮತ್ತು ಬಿದರೂರು ಗ್ರಾಮ ಸಮಿತಿಗಳನ್ನು ರಚಿಸಲಾಯಿತು. ಕಿತ್ತೂರು ಗ್ರಾಮದ ಅಧ್ಯಕ್ಷರಾಗಿ ಕೆ.ಡಿ. ಜಗದೀಶ್ ಮತ್ತು ಬಿದರೂರು ಗ್ರಾಮದ ಅಧ್ಯಕ್ಷರಾಗಿ ವೀರಭದ್ರ ನೇಮಕವಾದರು. ಸಭೆಯ ಅಧ್ಯಕ್ಷತೆಯನ್ನು ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ ಬಿ.ಈ. ಜಯೇಂದ್ರ ವಹಿಸಿದ್ದರು.