ಮಡಿಕೇರಿ, ಜ. ೧: ೨೦೨೩ರ ವರ್ಷ ಆರಂಭಗೊAಡಿದ್ದು.. ಕಳೆದ ರಾತ್ರಿ ನೂತನ ವರ್ಷವನ್ನು ಜನತೆ ಸಂಭ್ರಮದಿAದ ಬರಮಾಡಿ ಕೊಂಡರು. ಜಿಲ್ಲೆ ಬಹುತೇಕ ಪ್ರವಾಸಿಗರಿಂದ ತುಂಬಿದ್ದು, ಅಲ್ಲಲ್ಲಿ ‘ಪಾರ್ಟಿ’ಗಳು ಹಾಡು, ಕುಣಿತ, ಕ್ಯಾಂಪ್‌ಫಯರ್... ಸಂಗೀತದ ಅಬ್ಬರದ ನಡುವೆ ರಾತ್ರಿ ೧೨ ಗಂಟೆಗೆ ಪರಸ್ಪರ ಶುಭಾಶಯಗಳ ವಿನಿಮಯ ನಡೆಯಿತು.

ನೂತನ ವರ್ಷಾರಂಭ ಹಾಗೂ ೨೦೨೨ ವರ್ಷಾಂತ್ಯದ ಹಿನ್ನೆಲೆ ಜಿಲ್ಲೆಯ ವಿವಿಧ ಹೋಂಸ್ಟೇ, ರೆಸಾರ್ಟ್ಗಳಲ್ಲಿ ಜಮಾವಣೆಯಾಗಿದ್ದ ಜನರಲ್ಲಿ ಹೆಚ್ಚಿನ ಉತ್ಸಾಹ-ಉನ್ಮಾದ ಕಂಡುಬAತು. ಸರಿಯಾಗಿ ೧೨ ಗಂಟೆಗೆ ಕೇಕ್ ಕತ್ತರಿಸುವುದು... ಸಿಡಿಮದ್ದು, ಪಟಾಕಿಗಳನ್ನು ಸಿಡಿಸುವ ಮೂಲಕ ಅಲ್ಲಲ್ಲಿ ಸಂಭ್ರಮಾಚರಣೆ ನಡೆಯಿತು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರೂ ತೀವ್ರ ನಿಗಾವಹಿಸಿದ್ದರು.

ಕೆಲವಾರು ಕಡೆಗಳಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದವರಿಗೆ ದಂಡ ವಿಧಿಸಿರುವ ಪ್ರಕರಣಗಳು ವರದಿಯಾಗಿದೆ. ಗೋಣಿಕೊಪ್ಪಲು ವಿನಲ್ಲಿ ಸಂಭ್ರಮಾಚರಣೆ ನಡುವೆ ರಸ್ತೆ ಅವಘಡವೊಂದು ನಡೆದಿದ್ದು, ಇದನ್ನು ಹೊರತುಪಡಿಸಿದರೆ ಹೊಸ ವರ್ಷಾಚರಣೆ ಜಿಲ್ಲೆಯಲ್ಲಿ ಶಾಂತಿಯುತವಾಗಿ ನಡೆದಿದೆ. ಕೆಲವು ರೆಸಾರ್ಟ್ಗಳಲ್ಲಿ ಅದ್ಧೂರಿಯ ಸಮಾರಂಭಗಳು ಆಯೋಜಿತ ಗೊಂಡಿದ್ದವು.