ಮಡಿಕೇರಿ, ಡಿ. ೩೦: ಮಡಿಕೇರಿ ಇನ್ನರ್ ವೀಲ್ ಕ್ಲಬ್‌ಗೆ ಮಲೇಶಿಯಾದ ಇನ್ನರ್ ವೀಲ್ ಸಂಸ್ಥೆಯ ಸದಸ್ಯರು ಭೇಟಿ ನೀಡಿದ್ದರು.

ಮಲೇಶಿಯಾ ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ವಾಸುಕಿ, ಡಾ. ತೇವಿಕಾ, ನಿರ್ದೇಶಕಿಯರಾದ ಕೋಮತಿ, ಸ್ವರ್ಣ, ಅರವಿಂದ್, ಸರಳ, ಅನು ನಿಯೋಗದಲ್ಲಿದ್ದರು. ಕರ್ನಾಟಕ ಮತ್ತು ಕೊಡಗಿನ ಸಂಸ್ಕೃತಿ, ಆಚಾರ-ವಿಚಾರಗಳ ಬಗ್ಗೆ ಮಲೇಶಿಯಾ ಇನ್ನರ್ ವೀಲ್ ಸದಸ್ಯೆಯರು ಮಡಿಕೇರಿಯ ಇನ್ನರ್ ವೀಲ್ ಸದಸ್ಯೆಯರಿಂದ ಅನೇಕ ಮಾಹಿತಿ ಪಡೆದರಲ್ಲದೇ ಕೊಡಗಿನ ನಿಸರ್ಗ ಸೌಂದರ್ಯಕ್ಕೆ ಮೆಚ್ಚುಗೆ ಸೂಚಿಸಿದರು. ಭವಿಷ್ಯದಲ್ಲಿ ಉಭಯ ಕ್ಲಬ್‌ಗಳ ಸಹಭಾಗಿತ್ವದಲ್ಲಿ ಸಾಮಾಜಿಕ ಯೋಜನೆ ಕೈಗೊಳ್ಳುವ ನಿರ್ಧಾರವನ್ನೂ ಈ ಸಂದರ್ಭ ಕೈಗೊಳ್ಳಲಾಯಿತು.

ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ಡಾ. ರೇಣುಕಾ ಸುಧಾಕರ್, ಜಿಲ್ಲಾ ಇನ್ನರ್ ವೀಲ್ ಉಪಾಧ್ಯಕ್ಷೆ ಪೂರ್ಣಿಮಾ ರವಿ, ಇನ್ನರ್ ವೀಲ್ ನಿರ್ದೇಶಕಿಯರಾದ ಶಫಾಲಿ ರೈ, ನಮಿತಾ ರೈ, ರಶ್ಮಿ ಪ್ರವೀಣ್ ಹಾಜರಿದ್ದರು.