ಮಡಿಕೇರಿ, ಡಿ. ೩೦: ಶ್ರೀ ಕಾವೇರಮ್ಮೆ ಕೊಡವ ಮತ್ತು ಅಮ್ಮಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್ನ ವತಿಯಿಂದ ವರ್ಷಂಪ್ರತಿ ನಡೆಸಲಾಗುತ್ತಿರುವ ದೈವಿಕ ಕಾರ್ಯ ಜನವರಿ ೧೫ ರಂದು ನಡೆಯಲಿದೆ.

ಎರಡು ಜನಾಂಗದವರಿಗೆ ಇರುವ ಶಾಪ ವಿಮೋಚನೆಗಾಗಿ ಶ್ರೀ ಕಾವೇರಿಕ್ಷೇತ್ರ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದ ಮುಂಭಾಗದ ಬಯಲು ಪ್ರದೇಶ ದಲ್ಲಿರುವ ಟ್ರಸ್ಟ್ನ ಜಾಗದಲ್ಲಿ ಜನಾಂಗ ಹಾಗೂ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿ ಶ್ರೀ ಗಣಪತಿ ಹೋಮ, ಸತ್ಯನಾರಾಯಣ ಪೂಜೆ, ಶತರುದ್ರಾಭಿಷೇಕ ಪಠಣ ಹಾಗೂ ಚಂಡಿಕಾ ಹೋಮ ಜರುಗಲಿದೆ. ತಾ. ೧೫ ರಂದು ಬೆಳಿಗ್ಗೆ ೭ ರಿಂದ ಈ ಕೈಂಕರ್ಯಗಳು ಪ್ರಾರಂಭವಾಗಲಿದೆ. ಅಂದು ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.