ವೀರಾಜಪೇಟೆ, ಡಿ. ೩೦: ಕನ್ನಡ ಸಾಹಿತ್ಯ ಪರಿಷತ್ತು ವೀರಾಜಪೇಟೆ ತಾಲೂಕು ವತಿಯಿಂದ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆಯುವ ಒಂಭತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಕವಿಗೋಷ್ಠಿಗೆ ವೀರಾಜಪೇಟೆ ತಾಲೂಕಿನ ಆಸಕ್ತ ಯುವ ಕವಿಗಳಿಂದ ಕವನಗಳನ್ನು ಆಹ್ವಾನಿಸಲಾಗಿದೆ.

ಕವನಗಳು ೧೬ ರಿಂದ ೨೦ ಸಾಲುಗಳ ಮಿತಿಯಲ್ಲಿ ಇರಬೇಕು. ಕವಿಗೋಷ್ಠಿಯಲ್ಲಿ ವಿಧ್ಯಾರ್ಥಿಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ವಿದ್ಯಾರ್ಥಿಗಳ ವಿಭಾಗ ಮತ್ತು ಸಾರ್ವಜನಿಕರ ವಿಭಾಗದಿಂದಲೂ ಕವನಗಳನ್ನು ಆಹ್ವಾನಿಸಲಾಗಿದೆ ಆಯ್ಕೆಯಾದ ಕವನಗಳನ್ನು ಮಾತ್ರ ಕವಿಗೋಷ್ಠಿಯಲ್ಲಿ ವಾಚಿಸಲು ಅವಕಾಶ ನೀಡಲಾಗುವುದು.

ಕವನಗಳನ್ನು ೯೦೦೮೬೧೩೭೨೯ ಮತ್ತು ೯೦೦೮೩೮೩೦೫೧ ವಾಟ್ಸಾಪ್ ನಂಬರ್‌ಗೆ ಕಳಿಸತಕ್ಕದ್ದು ಹಾಗೂ ಕವನಗಳನ್ನು ಕಳುಹಿಸಲು ಜ.೪ ಕೊನೆಯ ದಿನಾಂಕವಾಗಿದೆ. ಪರಿಷತ್ತಿನ ಗೌರವ ಕಾರ್ಯದರ್ಶಿ ಟೋಮಿ ಥೋಮಸ್ (ನಾ ಕನ್ನಡಿಗ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.