ನಾಪೋಕ್ಲು, ಡಿ. ೨೮: ಇಲ್ಲಿಗೆ ಸಮೀಪದ ಮರಂದೋಡ ಯವಕಪಾಡಿ ಗೌಡ ಸಮಾಜದ ವತಿಯಿಂದ ೪೩ನೇ ವರ್ಷದ ವಾರ್ಷಿಕ ಸಂತೋಷ ಕೂಟ ಸಮುದಾಯ ಭವನದಲ್ಲಿ ನಡೆಯಿತು. ಜಿಲ್ಲಾ ಸಶಸ್ತç ದಳದ ನಿವೃತ್ತ ಉಪ ನಿರೀಕ್ಷಕರು ಮಞ್ಞಂಡ್ರ ಗಣಪತಿ, ಮೇಜರ್ ಲಿಷ್ಮಿತಾ ಬಾರಿಕೆ ಇವರುಗಳು ದೀಪ ಬೆಳಗಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ತಮ್ಮ ಕ್ರೀಡಾಕೂಟಕ್ಕೆ ಶುಭ ಕೋರಿದರು. ನಂತರ ಸಮಾಜ ಬಾಂಧವರಿಗೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಯಿತು.

ಸಮಾರೋಪ ಸಮಾರಂಭ ಯವಕಪಾಡಿ ಗೌಡ ಸಮಾಜದ ಅಧ್ಯಕ್ಷ ಬಾರಿಕೆರ ಮನು ಮಹೇಶ್ ಅಧ್ಯಕ್ಷತೆಯಲ್ಲಿ ಜರುಗಿತು. ಮುಖ್ಯ ಅತಿಥಿಗಳಾಗಿ ಮುಕ್ಕಾಟಿ ಮಧು ಮಂಜುನಾಥ್, ಅರೆಭಾಷೆೆ ಅಕಾಡೆಮಿಯ ಸಾಹಿತ್ಯ ಪುರಸ್ಕೃತರಾದ ಚಂಡೀರ ಕೆ. ಬಸಪ್ಪ, ಬಾರಿಕೆ ಲಿಷ್ಮಿತಾ, ಕೊಡಗು ಜಿಲ್ಲಾ ಪ್ರಾಥಮಿಕ ಶಿಕ್ಷಕರ ಕ್ಷೇತ್ರದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದÀ ಮಞ್ಞಂಡ್ರ ರೇಖಾ ಉಲ್ಲಾಸ್, ಮಞ್ಞಂಡ್ರ ಗಣಪತಿ, ಸಮಾಜದ ಸ್ಥಳ ದಾನಿಗಳಾದ ಬಾರಿಕೆ ಜಾನಕಿ ಹಾಗೂ ಆಟೋಟಗಳ ಬಹುಮಾನ ಪ್ರಾಯೋಜಕರಾದ ಮಞ್ಞಂಡ್ರ ಗೀತಾ , ಸಮಾಜದ ಹಿರಿಯರಾದ ಚಂಡೀರ ಎ. ಕಾರ್ಯಪ್ಪ ಉಪಸ್ಥಿತರಿದ್ದರು.

ಈ ಸಂದರ್ಭ ದೇಶ ಸೇವೆಯಲ್ಲಿ ಮೇಜರ್ ಲಿಶ್ಮಿತಾ, ಅರೆಭಾಷೆ ಸಾಹಿತ್ಯ ಕ್ಷೇತ್ರದಲ್ಲಿ ಚಂಡೀರ ಬಸಪ್ಪ, ಶಿಕ್ಷಣ ಇಲಾಖೆಯ ಮಞ್ಞಂಡ್ರ ರೇಖಾ ಉಲ್ಲಾಸ್, ಜನಾಂಗದ ಹಿರಿಯರಾದ ಚಂಡೀರ ಎ. ಕಾರ್ಯಪ್ಪ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು ಹಾಗೂ ಆಟೋಟಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹಾಗೆಯೆ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದು ಸಾಧನೆ ಮಾಡಿದ ಮಞ್ಞಂಡ್ರ ಕರುಣ್ ಮಹೇಶ್ ಹಾಗೂ ಬಾರಿಕೆ ಜೀವಿತ ಗಿರೀಶ್ ರವರಿಗೆ ಸಮಾಜದಿಂದ ಪ್ರೋತ್ಸಾಹಧನ ನೀಡಲಾಯಿತು. ಚಂಡೀರ ರ‍್ಯಾಲಿ ಗಣಪತಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಸಮಾಜದ ಕಾರ್ಯದರ್ಶಿ ಮುಕ್ಕಾಟಿ ತಿಲಕ್, ನಿರ್ದೇಶಕರಾದ ಮಞ್ಞಂಡ್ರ ಜೀವನ್, ಮಞ್ಞಂಡ್ರ ಸರು, ಮುಕ್ಕಾಟಿ ನವೀನ್, ಚಂಡೀರ ರೋಷನ್, ಪುದಿಯಮನೆ ದಿವೇಶ್ ಹಾಜರಿದ್ದರು. ರೇಖಾ ಉಲ್ಲಾಸ್ ವಂದಿಸಿದರು.