ಮಡಿಕೇರಿ, ಡಿ. ೨೮: ಹಾಕಿ ಕ್ರೀಡೆಯಲ್ಲಿ ದೇಶವನ್ನು ಪ್ರತಿನಿಧಿಸಿರುವ ಹಾಗೂ ಇತ್ತೀಚೆಗೆ ಕರ್ನಾಟಕ ರಾಜ್ಯ ಸರಕಾರದ ಮೂಲಕ ಏಕಲವ್ಯ ಪ್ರಶಸ್ತಿಗೆ ಭಾಜನರಾಗಿರುವ ಪುದಿಯೊಕ್ಕಡ ಪ್ರಧಾನ್ ಸೋಮಣ್ಣ ಅವರನ್ನು ಪುದಿಯೊಕ್ಕಡ ಕುಟುಂಬಸ್ಥರು ಸನ್ಮಾನಿಸಿ ಗೌರವಿಸಿದರು.
ಮೂರ್ನಾಡು ಕಿಗ್ಗಾಲುವಿನ ಐನ್‌ಮನೆಯಲ್ಲಿ ಆಯೋಜಿಸಲಾಗಿದ್ದ ವಿಶೇಷ ಸಮಾರಂಭದಲ್ಲಿ ಇವರನ್ನು ಕುಟುಂಬದ ಪಟ್ಟೆದಾರರಾದ ವಿಶ್ವನಾಥ್ ಹಾಗೂ ಇನ್ನಿತರ ಹಿರಿಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಪೋಷಕರಾದ ಬೆಲ್ಲು ಸೋಮಯ್ಯ ಹಾಗೂ ಮೀನಾ ದಂಪತಿ ಹಾಜರಿದ್ದರು.