ಮಡಿಕೇರಿ, ಡಿ. ೨೮: ಸಂಪಾಜೆ ಗೋ ಶಾಲೆಯಲ್ಲಿ ರಾಷ್ಟಿçÃಯ ಸ್ವಯಂ ಸೇವಕರು, ಜೇಡ್ಲಾ ಗೋ ಶಾಲೆಯ ಕಾರ್ಯಾಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಉಪಸ್ಥಿತಿಯಲ್ಲಿ ಶ್ರಮದಾನ ನಡೆಯಿತು.
ಪುತ್ತೂರಿನ ಬಲ್ನಾಡಿನಲ್ಲಿರುವ ಎನ್. ವೆಂಕಟರಾಮಯ್ಯ ಕುಟುಂಬದವರ ಗದ್ದೆಯಲ್ಲಿ ಅಲ್ಲಿನ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿಯವರು ಬೇಸಾಯ ಮಾಡಿ ಬೆಳೆದ ಬೈ ಹುಲ್ಲನ್ನು ಜೇಡ್ಲಾ ಗೋ ಶಾಲೆಗೆ ಸಾಗಿಸಲಾಯಿತು.
ಶ್ರಮದಾನದಲ್ಲಿ ರಾಷ್ಟಿçÃಯ ಸ್ವಯಂ ಸೇವಕರ ಸಂಘದ ಮಂಗಳೂರು ಸಂಯೋಜಕ ಅರುಣ್ ಕುಮಾರ್ ಎಂ., ವಿದ್ಯಾರ್ಥಿಗಳಾದ ಶಶಾಂಕ್ ರೈ ಕೆ.ಬಿ., ಹೃತ್ಪೂರ್ವಕ್ ಕೆ.ಎಸ್., ಹರಿನಾರಾಯಣ, ಸುರೇಶ್, ಉಮೇಶ್ ಇತರರು ಇದ್ದರು.