ಚೆಟ್ಟಳ್ಳಿ, ಡಿ. ೨೯: ಚೆಟ್ಟಳ್ಳಿ ಶ್ರೀಮಂಗಲ ಭಗವತಿ ದೇವಾಲಯದಲ್ಲಿ ಕಿರುಷಷ್ಠಿ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯದ ಮುಂದಿರುವ ಅರಳಿಕಟ್ಟೆಯಲ್ಲಿ ಪ್ರತಿಷ್ಠಾಪಿಸಿರುವ ನಾಗÀ ನೆಲೆಯಲ್ಲಿ ವಿಶೇಷ ಅಲಂಕಾರದೊAದಿಗೆ ಪೂಜೆ ಸಲ್ಲಿಸಲಾಯಿತು. ಹಿರಿಯರಾದ ನಿವೃತ್ತ ಕ್ಯಾಪ್ಟನ್ ಮುಳ್ಳಂಡ ಪ್ರಭಾಕರ್ ತಿಮ್ಮಯ್ಯ ಊರಿನ ಪರವಾಗಿ ಪ್ರಾರ್ಥಿಸಿದರು. ಮಹಾಪೂಜೆಯ ನಂತರ ತೀರ್ಥಪ್ರಸಾದ ವಿತರಣೆಯೊಂದಿಗೆ ಅನ್ನ ಸಂತರ್ಪಣೆ ನೆರವೇರಿತು.