ಭಾಗಮಂಡಲ, ಡಿ. ೨೮: ಚೇರಂಬಾಣೆ ಗೌಡ ಸಮಾಜ ಮತ್ತು ಕೊಡಗು ಗೌಡ ಯುವ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಚೇರಂಬಾಣೆ ಯಲ್ಲಿ ಕೊಡಗು ಗೌಡ ಜನಾಂಗದ ಗ್ರಾಮಗಳ ನಡುವಿನ ಕ್ರಿಕೆಟ್ ಪಂದ್ಯಾಟದ ಇಂದಿನ ಪಂದ್ಯಗಳಲ್ಲಿ ಚೆಂಬು ಕ್ರಿಕೆಟರ್ಸ್ ತಂಡ ಸೆಮಿಫೈನಲ್ ಪ್ರವೇಶಿಸಿತು.
ದಿನದ ಮೊದಲ ಪಂದ್ಯದಲ್ಲಿ ಚೆಂಬು ಕ್ರಿಕೆಟರ್ಸ್ ಮತ್ತು ಕುಯ್ಯಂಗೇರಿ ಪೋರೆಯನ ತಂಡಗಳ ನಡುವೆ ಸೆಣೆಸಾಟ ನಡೆಯಿತು. ಮೊದಲು ಬ್ಯಾಟ್ ಮಾಡಿದ ಕುಯ್ಯಂಗೇರಿ ಪೋರೆನ ತಂಡವು ೯ ವಿಕೆಟ್ ನಷ್ಟಕ್ಕೆ ೨೩ ರನ್ ಗಳಿಸಿತು. ಉತ್ತರವಾಗಿ ಆಡಿದ ಚೆಂಬು ಕ್ರಿಕೆಟರ್ಸ್ ತಂಡ ೩ ಓವರ್ನಲ್ಲಿ ಗುರಿ ತಲುಪಿತು.
ಪಾಕ ಬಾಯ್ಸ್ ಮತ್ತು ಪೆರಾತ ಫ್ರೆಂಡ್ಸ್ ಅರವತೊಕ್ಲು ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪಾಕ ಬಾಯ್ಸ್ ತಂಡ ೭೪ ರನ್ ಗಳಿಸಿತು. ಉತ್ತರವಾಗಿ ಆಡಿದ ಪೆರೆತ ಫ್ರೆಂಡ್ಸ್ ೯ ವಿಕೆಟ್ ಕಳೆದುಕೊಂಡು ಕೊನೆಯ ಎಸೆತದಲ್ಲಿಗುರಿ ಸಾಧಿಸಿತು.
ಚೆಂಬು ಕ್ರಿಕೆಟರ್ಸ್ ಮತ್ತು ಪೆರಾತ ಫ್ರೆಂಡ್ಸ್ ೬೦ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪೆರಾತ ಫ್ರೆಂಡ್ಸ್ ತಂಡವು ೮ ಓವರ್ನಲ್ಲಿ ೬೦ ರನ್ ಗಳಿಸಿತು. ಉತ್ತರವಾಗಿ ಆಡಿದ ಚೆಂಬು ಕ್ರಿಕೆಟರ್ಸ್ ತಂಡವು ಆರು ಓವರ್ ನಲ್ಲಿ೬೩ ರನ್ ಗಳಿಸಿ ಕೆಲವು ಸಾಧಿಸಿತು.
ಚೆಂಬು ಕ್ರಿಕೆಟರ್ಸ್ ಮತ್ತು ಬಾಡಗ ಫ್ರೆಂಡ್ಸ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೆಂಬು ಕ್ರಿಕೆಟರ್ಸ್ ತಂಡ ಎಂಟು ಓವರ್ ನಲ್ಲಿ ೧೨೫ ರನ್ ಕಲೆ ಹಾಕಿತು. ಕೇವಲ ೨೭ ರನ್ ಗಳಿಸಿ ೯೭ ರನ್ಗಳ ಸೋಲನ್ನು ಅನುಭವಿಸಿತು. ದಿನದ ಅಂತ್ಯದಲ್ಲಿ ಚೆಂಬು ಕ್ರಿಕೆಟರ್ ತಂಡವು ಸೆಮಿಫೈನಲ್ಸ್ ತಲುಪಿತು. -ಸುನಿಲ್