ಮಡಿಕೇರಿ, ಡಿ. ೨೮: ಪ್ರಾಣಿ ದಯಾ ಸಂಘದ ವಾರ್ಷಿಕ ಮಹಾಸಭೆಯು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಮತ್ತೊಂದು ಗೋಶಾಲೆ ತೆರೆಯಲು ಭೂಮಿ ಕಾಯ್ದಿರಿಸಲು ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಪಶುಪಾಲನೆ ಇಲಾಖೆ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಈ ಕುರಿತು ಮಾಹಿತಿ ನೀಡಿದ ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಸುರೇಶ್ ಭಟ್ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನಾಗವಾರ ಗ್ರಾಮದ ೧/೧ ಸರ್ವೇ ನಂಬರಿನಲ್ಲಿ ೪೦ ಎಕರೆ ಗೋಮಾಳ ಜಾಗವಿದ್ದು, ಅದನ್ನು ಕಾಯ್ದಿರಿಸಬೇಕಾಗಿ ಕೋರಿದರು.
ಕರ್ನಾಟಕ ಜಾನುವಾರು ಪ್ರತಿಬಂಧಕ ಹಾಗೂ ಸಂರಕ್ಷಣಾ ನಿಯಮ ಅನುಷ್ಠಾನ, ತಾಲೂಕು ಪ್ರಾಣಿ ಮಿತ್ರ ಮಂಡಳಿ ರಚನೆ, ಪ್ರಾಣಿ ಸಹಾಯಕರ ಮತ್ತು ಪ್ರಾಣಿ ರಕ್ಷಕರನ್ನು ನೇಮಿಸುವುದು, ಪ್ರಾಣಿ ಕಲ್ಯಾಣಕ್ಕೆ ಸಂಬAಧಿಸಿದAತೆ ವಿವಿಧ ಕಾಯ್ದೆ ಮತ್ತು ನಿಯಮಗಳ ಬಗ್ಗೆ ಅರಿವು ಮೂಡಿಸುವುದು, ಸರ್ಕಾರಿ ಗೋಶಾಲೆ ನಿರ್ವಹಣೆ ಮಾರ್ಗದರ್ಶಿ ನಿಯಮಗಳು, ನಿರ್ವಹಣಾ ಸಮಿತಿ, ಒಣ ಹುಲ್ಲು ಖರೀದಿ, ಪುಣ್ಯಕೋಟಿ ದತ್ತು ಯೋಜನೆ ಅನುಷ್ಠಾನ ಮತ್ತಿತರ ವಿಷಯಗಳ ಕುರಿತು ಸಭೆಯಲ್ಲಿ ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.
ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ಸಂಯೋಜಕಿ ರಶ್ಮಿ ಡಿಸೋಜ ಮಾತನಾಡಿ, ಕೊಡಗು ಜಿಲ್ಲೆಯು ರಾಜ್ಯದ ಗಡಿ ಪ್ರದೇಶ ಹೊಂದಿರುವುದರಿAದ ಗಡಿಭಾಗದಲ್ಲಿ ಗೋ ರಕ್ಷಣೆ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದು ಮನವಿ ಮಾಡಿದರು.
ಚಿಕ್ಕತೋಳೂರು ಕೃಷ್ಣ ಗೋಶಾಲೆಯ ಹರೀಶ್ ಆಚಾರ್ಯ ಗೋವುಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು. ಗೋಶಾಲೆಯಲ್ಲಿ ೬೨ ಜಾನುವಾರುಗಳು ಇವೆ. ಖಾಸಗಿಯಾಗಿ ಗೋಶಾಲೆ ನಿರ್ವಹಣೆ ಮಾಡುವವರಿಗೂ ಸರ್ಕಾರದ ದರದಂತೆ ಹಣ ಭರಿಸುವಂತಾಗಬೇಕು ಎಂದು ಕೋರಿದರು.
ಜಿ.ಪಂ. ಸಿಇಓ ಡಾ. ಎಸ್. ಆಕಾಶ್ ಜಾನುವಾರು ಸಂರಕ್ಷಣೆ ಮತ್ತು ಗೋಶಾಲೆ ಆರಂಭ ಸಂಬAಧಿಸಿದAತೆ ಹಲವು ಮಾಹಿತಿ ನೀಡಿದರು.
ಪ್ರಾಣಿದಯಾ ಸಂಘದ ಉಪಾಧ್ಯಕ್ಷ ಡಾ. ಕೆ.ಪಿ. ಅಯ್ಯಪ್ಪ, ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಎನ್.ಮಧುರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಂಗಧಾಮಯ್ಯ, ಶಿವಶಂಕರ್, ಪಶುಪಾಲನಾ ಇಲಾಖೆಯ ಪಾಲಿಕ್ಲೀನಿಕ್ ವಿಭಾಗದ ಉಪ ನಿರ್ದೇಶಕರಾದ ಡಾ.ಚಿದಾನಂದ, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಸನ್ನ (ಮಡಿಕೇರಿ), ಬಾದಾಮಿ (ಸೋಮವಾರಪೇಟೆ), ಶ್ರೀದೇವು (ಕುಶಾಲನಗರ), ಡಾ. ಶಾಂತೇಶ್ (ಪೊನ್ನಂಪೇಟೆ), ಡಾ.ನವೀನ್ ಕುಮಾರ್ (ವೀರಾಜಪೇಟೆ), ಪೊಲೀಸ್ ಇನ್ಸ್ಪೆಕ್ಟರ್ ಮೇದಪ್ಪ, ಅನೂಪ್ ಮಾದಪ್ಪ, ನಗರಸಭೆ ಇಂಜಿನಿಯರ್ ಸೌಮ್ಯ, ರಂಜಿತ್ ಕವಲಪಾರ ಇತರರು ಇದ್ದರು.