ಭಾಗಮಂಡಲ, ಡಿ. ೨೮: ಇಲ್ಲಿನ ಅಯ್ಯಪ್ಪ ಮಾಲಾಧಾರಿಗಳಿಂದ ಮಂಡಲ ಪೂಜೋತ್ಸವ ಜರಗಿತು. ಭಾಗಮಂಡಲದ ಅಯ್ಯಪ್ಪ ಬನದಲ್ಲಿ ಬೆಳಿಗ್ಗೆ ವಿಶೇಷ ಪೂಜೆ ನಡೆದು ಬಳಿಕ ಅಯ್ಯಪ್ಪ ಬನದಿಂದ ಭಾಗಮಂಡಲ ಪಟ್ಟಣಕ್ಕಾಗಿ ಕರಿಕೆ ಜಂಕ್ಷನ್‌ವರೆಗೆ ಚಂಡೆ ವಾದ್ಯದೊಂದಿಗೆ ಮೆರವಣಿಗೆ ನಡೆಯಿತು.

ಬಳಿಕ ಭಾಗಮಂಡಲದ ಭಗಂಡೇಶ್ವರ ದೇವಾಲಯದ ಮುಂಭಾಗದಲ್ಲಿ ಅಯ್ಯಪ್ಪ ಮಾಲಾಧಾರಿಗಳು ವಿಶೇಷ ಪೂಜಾ ಕಾರ್ಯಕ್ರಮ ನಡೆಸಿದರು. ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

ಗುರುಸ್ವಾಮಿಗಳಾದ ಜಯನ್ ದಾಮೋದರ ಮತ್ತು ವಸಂತ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು.