ಮಡಿಕೇರಿ, ಡಿ. ೨೮: ಕೊಡಗು ಜಿಲ್ಲೆಗೆ ಸಂಬAಧಿಸಿದAತೆ ಭೂಪರಿವರ್ತನೆ ವಿಚಾರದಲ್ಲಿ ಪ್ರತ್ಯೇಕವಾದ ಕಾನೂನು ರೂಪಿಸುವ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ರಾಜ್ಯ ಕಂದಾಯ ಸಚಿವ ಆರ್. ಅಶೋಕ್ ಅವರು ತಿಳಿಸಿದ್ದಾರೆ. ವಿಧಾನ ಪರಿಷತ್‌ನಲ್ಲಿ ಸದಸ್ಯ ಎಂ.ಪಿ. ಸುಜಾಕುಶಾಲಪ್ಪ ಅವರು ಭೂಪರಿವರ್ತನೆ ಕುರಿತಾಗಿ ಮಂಡಿಸಿದ್ದ ಪ್ರಶ್ನೆಗೆ ನೀಡಿರುವ ಉತ್ತರದಲ್ಲಿ ಸಚಿವರು ಈ ಬಗ್ಗೆ ಮಾಹಿತಿಯಿತ್ತಿದ್ದಾರೆ.
ಭೂಪರಿವರ್ತನೆಗೆ ಇರುವ ಕಾನೂನು, ಎಷ್ಟು ಎಕರೆ ತನಕ ಅವಕಾಶವಿದೆ ಕೊಡಗಿನಲ್ಲಿ ಕಳೆದ ೧೫ ವರ್ಷಗಳಲ್ಲಿ ಆಗಿರುವ ಭೂಪರಿವರ್ತನೆ ಎಷ್ಟಿದೆ ಎಂಬ ವಿವರ ಸೇರಿದಂತೆ ಕೊಡಗಿಗೆ ಪ್ರತ್ಯೇಕ ಕಾನೂನು ರೂಪಿಸಲು ಸರಕಾರ ಮುಂದಾಗುವದೇ ಎಂಬಿತ್ಯಾದಿ ವಿಚಾರದ ಬಗ್ಗೆ ಸುಜಾ ಕುಶಾಲಪ್ಪ ಅವರು ಪ್ರಶ್ನೆ ಮುಂದಿರಿಸಿದ್ದರು.
ಸದಸ್ಯರ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವ ಅಶೋಕ್ ಅವರು, ನೀಡಿರುವ ಉತ್ತರದ ವಿವರ ಇಂತಿದೆ.
ಕರ್ನಾಟಕ ಭೂ ಕಂದಾಯ ಕಾಯ್ದೆ ೧೯೬೪ರ ಕಲಂ ೯೫ ಮತ್ತು ೯೬ರಡಿ ಹಾಗೂ ಕರ್ನಾಟಕ ಭೂ ಕಂದಾಯ ನಿಯಮ, ೧೯೬೬ರ ನಿಯಮ ೧೦೭ ಹಾಗೂ ೧೦೭ಎ ಗಳನ್ವಯ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಭೂ ಪರಿವರ್ತನೆ ಮಾಡಲು ಯಾವುದೇ ಗರಿಷ್ಠ ಮಿತಿಯನ್ನು ನಿಗದಿಪಡಿಸಿರುವುದಿಲ್ಲ. ಕೊಡಗು ಜಿಲ್ಲೆಯಲ್ಲಿ ಕಳೆದ ೧೫ ವರ್ಷಗಳಲ್ಲಿ ಅಂದಾಜು ೩೦೦೦.೫೩ ಎಕರೆ ಜಾಗವನ್ನು ಕೃಷಿಯೇತರ ಕಾರಣಗಳಿಗಾಗಿ ಭೂ ಪರಿವರ್ತನೆ ಮಾಡಲಾಗಿದೆ.
ಕರ್ನಾಟಕ ಭೂ ಕಂದಾಯ ಕಾಯ್ದೆ ೧೯೬೪ ರಡಿ ಇರುವ ಅವಕಾಶದಂತೆ ಈ ಹಿಂದಿನಿAದಲೂ ಕೃಷಿ ಜಮೀನುಗಳನ್ನು ಕೃಷಿಯೇತರ ಉದ್ದೇಶಗಳಿಗೆ ಭೂ ಪರಿವರ್ತನೆ ಮಾಡಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ೨೦೧೮ರಲ್ಲಿ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಕೃಷಿ ಜಮೀನುಗಳನ್ನು ಕೃಷಿಯೇತರ ಉದ್ದೇಶಗಳಿಗೆ ಭೂ ಪರಿವರ್ತಿಸುವುದನ್ನು ಸ್ಥಗಿತಗೊಳಿಸಲಾಗಿತ್ತು. ತದನಂತರ ವಾಸದ ಉದ್ದೇಶಕ್ಕಾಗಿ ಮನೆ ನಿರ್ಮಿಸುವವರಿಗೆ ೧೫-೨೦ ಸೆಂಟ್ ವಿಸ್ತೀರ್ಣದ ಜಮೀನನ್ನು ಸ್ಥಳ ಪರಿಶೀಲನೆ ಮಾಡಿ ಕರ್ನಾಟಕ ಭೂ ಕಂದಾಯ ಕಾಯ್ದೆ ೧೯೬೪ರ ಕಲಂ ೯೫ರಡಿ ಆದೇಶ ನೀಡಲು ದಿನಾಂಕ: ೦೮.೦೫.೨೦೧೯ರಲ್ಲಿ ಸರ್ಕಾರದ ಅನುಮತಿ ನೀಡಲಾಗಿತ್ತು.
ವಾಣಿಜ್ಯ ಕಟ್ಟಡಗಳು, ಶಾಲೆಗಳು, ರೆಸಾರ್ಟ್ಗಳು, ಪೆಟ್ರೋಲ್ ಬಂಕ್‌ಗಳು ಅಥವಾ ಖಾಸಗಿ ಉದ್ಯಮ ಪ್ರಾರಂಭಿಸಲು ತೊಡಕು ಉಂಟಾಗಿರುವ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ (ಸರ್ಕಾರದ ಸಂಖ್ಯೆ : ಆರ್‌ಡಿ೨೪ ಎಲ್‌ಜಿಒ ೨೦೧೮, ದಿನಾಂಕ: ೦೪.೦೬.೨೦೨೦ರ ಆದೇಶದಲ್ಲಿ) ಕೊಡಗು ಜಿಲ್ಲೆಯಲ್ಲಿ ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯ ಅಧ್ಯಯನದಲ್ಲಿ ಗುರುತಿಸಿರುವ ೧೦% ತೀವ್ರ ಅಪಾಯಕಾರಿ ಭೂ ಭಾಗಗಳು ಮತ್ತು ೨೦೧೮ ಮತ್ತು ೨೦೧೯ನೇ ಸಾಲಿನಲ್ಲಿ ಭೂ ಕುಸಿತಕ್ಕೆ ಒಳಗಾದ ಪ್ರದೇಶ, ಹಳ್ಳ, ಕೊಳ್ಳ, ನದಿ ಪಾತ್ರದ ಪ್ರದೇಶಗಳನ್ನು ಹೊರತುಪಡಿಸಿ, ಇನ್ನುಳಿದ ಪ್ರದೇಶಗಳಲ್ಲಿ ಕೃಷಿ ಜಮೀನುಗಳನ್ನು ಕೃಷಿಯೇತರ ಉದ್ದೇಶಗಳಿಗಾಗಿ ಅಂದರೆ ವಸತಿ ಕಟ್ಟಡಗಳು, ವಾಣಿಜ್ಯ ಕಟ್ಟಡಗಳು, ಶಾಲೆಗಳು, ರೆಸಾರ್ಟ್ಗಳು, ಪೆಟ್ರೋಲ್ ಬಂಕ್‌ಗಳು ಅಥವಾ ಖಾಸಗಿ ಉದ್ಯಮಗಳಿಗಾಗಿ ಭೂ ಪರಿವರ್ತಿಸಲು ತಾಂತ್ರಿಕ ಸಮಿತಿಯ ನಿರಾಕ್ಷೇಪಣಾ ಪತ್ರದ ಮೇಲೆ ಸಂಬAಧಪಟ್ಟ ಗ್ರಾಮ ಪಂಚಾಯಿತಿ ಹಾಗೂ ಸಂಬAಧಪಟ್ಟ ಸ್ಥಳೀಯ ಸಂಸ್ಥೆಗಳಿAದ ನಿಯಮಾನುಸಾರ ಅನುಮತಿ ಪಡೆದು ಕಟ್ಟಡಗಳನ್ನು ನಿರ್ಮಿಸಲು ಸೂಚಿಸಲಾಗಿದೆ.
(ತಾಂತ್ರಿಕ ಸಮಿತಿಯು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದು, ಈ ಸಮಿತಿಯಲ್ಲಿ ಹಿರಿಯ ಭೂ ವಿಜ್ಞಾನಿ/ ಉಪ ನಿರ್ದೇಶಕರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರು, ಭೂ ದಾಖಲೆಗಳು, ಸಹಾಯಕ ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಅಧಿಕಾರಿಗಳು ಸದಸ್ಯರಾಗಿದ್ದು, ಸಂಬAಧಪಟ್ಟ ತಹಶೀಲ್ದಾರರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.) ಕೊಡಗು ಜಿಲ್ಲೆಗೆ ಸಂಬAಧಿಸಿದAತೆ ಪ್ರತ್ಯೇಕವಾದ ಕಾನೂನು ರೂಪಿಸುವ ಪ್ರಸ್ತಾವನೆಯು ಸರ್ಕಾರದ ಮುಂದೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.