(ಕಾಯಪಂಡ ಶಶಿ ಸೋಮಯ್ಯ)
ಮಡಿಕೇರಿ, ಡಿ. ೨೭: ಕ್ರೀಡೆಗೆ ಕೊಡಗು ವಿಶೇಷವಾದ ಹೆಸರು. ಇಲ್ಲಿನ ಕ್ರೀಡಾಪ್ರತಿಭೆಗಳು ಜಿಲ್ಲೆಯಲ್ಲಿ ಸೌಲಭ್ಯಗಳ ಕೊರತೆಗಳ ನಡುವೆಯೂ ರಾಜ್ಯ-ರಾಷ್ಟç, ಅಂತರರಾಷ್ಟಿçÃಯ ಮಟ್ಟದಲ್ಲಿ ಹೆಸರು ಮಾಡಿರುವುದು ಇಡೀ ಕರ್ನಾಟಕ ರಾಜ್ಯಕ್ಕೂ ಕೂಡ ಹೆಮ್ಮೆಯ ವಿಚಾರವಾಗಿದೆ. ವಿಶೇಷವಾಗಿ ಹೇಳಬೇಕೆಂದರೆ ಕೊಡಗಿನಲ್ಲಿ ಕೆಲವಾರು ಕ್ರೀಡೆಗಳಿಗೆ ಅವಕಾಶವೇ ಇಲ್ಲವಾದರೂ ಇಂತಹ ಕ್ರೀಡೆಗಳಲ್ಲೂ ಕೊಡಗಿನ ಪ್ರತಿಭೆಗಳು ಸಾಧನೆ ಮಾಡಿರುವುದು ಗಮನಾರ್ಹ.. ರಗ್ಬಿ ಇರಬಹುದು, ಸ್ಕೀಯಿಂಗ್, ಸೇಯ್ಲಿಂಗ್, ಫೆನ್ಸಿಂಗ್ (ಕತ್ತಿವರಸೆ), ಬಾಕ್ಸಿಂಗ್, ಸ್ಕಾ÷್ವಷ್‌ನಂತಹ ಕ್ರೀಡೆಗಳನ್ನು ಈ ಸಾಧನೆಗೆ ಸಂಬAಧಿಸಿದAತೆ ಉಲ್ಲೇಖಿಸಬಹುದು.
ಇಂತಹ ಕ್ರೀಡೆಗಳೊಂದಿಗೆ ರೋಲರ್ ಸ್ಕೇಟಿಂಗ್ ಎಂಬ ರೋಮಾಂಚಕಾರಿ ಕ್ರೀಡೆಯೂ ಒಂದಾಗಿದೆ. ವಿಪರ್ಯಾಸವೆಂದರೆ ಎರಡು ದಶಕಗಳ ಹಿಂದೆ ಕೆಲವು ಕ್ರೀಡಾಸಕ್ತರು ಸೇರಿ ಕೊಡಗು ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಎಂಬ ತಮ್ಮದೇ ಸಂಘವೊAದನ್ನು ಮಾಡಿಕೊಂಡು ಕೊಡಗಿನಲ್ಲಿ ರೋಲರ್ ಸ್ಕೇಟಿಂಗ್ ಕ್ರೀಡೆಯನ್ನು ಪ್ರೋತ್ಸಾಹಿಸುವ ಸಾಹಸಕ್ಕೆ ಮುಂದಾಗಿದ್ದರು. ಇದು ಅಭೂತಪೂರ್ವ ಯಶಸ್ಸನ್ನೂ ಕಂಡಿತ್ತು. ಪರಿಣಾಮವಾಗಿ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಕಚೇರಿಯ ಎದುರೇ ರೋಲರ್ ಸ್ಕೇಟಿಂಗ್ ರಿಂಕ್ ಕೂಡ ಅಸ್ತಿತ್ವಕ್ಕೆ ಬಂದಿತ್ತು. ಒಂದೊಮ್ಮೆ ಈ ರಿಂಕ್‌ನಲ್ಲಿ ದಿನಂಪ್ರತಿ ಸ್ಕೇಟಿಂಗ್ ಚಟುವಟಿಕೆಯ ಕಲರವ ಕಂಡುಬAದಿತ್ತಲ್ಲದೆ ಈ ಕ್ರೀಡೆಯಲ್ಲೂ ಸಾಕಷ್ಟು ಪ್ರತಿಭೆಗಳು ಅತ್ಯುತ್ತಮ ಸಾಧನೆ ತೋರಿದ್ದರು. ಕೆಲವು ವರ್ಷಗಳ ಕಾಲ ಸಂಚಲನ ಮೂಡಿಸಿದ್ದ ಈ ರೋಲರ್ ಸ್ಕೇಟಿಂಗ್ ರಿಂಕ್ ನಂತರದಲ್ಲಿ ಗರಬಡಿದಂತಾಗಿದ್ದು, ತನ್ನೆಲ್ಲಾ ಚಟುವಟಿಕೆಗಳಿಂದ ಸ್ತಬ್ಧಗೊಂಡಿದೆ. ಪ್ರಸ್ತುತ ಈ ರಿಂಕ್ ಕಾಡುಪಾಲಾದಂತಿದ್ದು, ಹಿಂದಿನ ವೈಭವ ಬಹುಶಃ ಕನಸ್ಸೋ ಎಂಬAತಾಗಿದೆ.
(ಮೊದಲ ಪುಟದಿಂದ)
ಆರಂಭ ಹೇಗೆ..?
೨೦೦೧ರಲ್ಲಿ ಜಿಲ್ಲೆಯಲ್ಲಿ ರೋಲರ್ ಸ್ಕೇಟಿಂಗ್ ಕ್ರೀಡೆಯನ್ನು ಆರಂಭಿಸಲಾಗಿತ್ತು. ಆ ಸಂದರ್ಭ ದಿ ಹಿಂದೂ ಪತ್ರಿಕೆಯ ವರದಿಗಾರರಾಗಿದ್ದ ಕೊಟ್ಟಿಯಂಡ ಜೀವನ್ ಚಿಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ಕೆಲ ಕ್ರೀಡಾಸಕ್ತರು ಸೇರಿ ಇದನ್ನು ಪ್ರಾರಂಭಿಸಿದ್ದರು. ಚೀಯಕಪೂವಂಡ ಟಾಟಾ ಮಾದಪ್ಪ ಉಪಾಧ್ಯಕ್ಷರಾಗಿದ್ದರು. ಆರಂಭದಲ್ಲಿ ಜೂನಿಯರ್ ಕಾಲೇಜು ಆವರಣದಲ್ಲಿರುವ ಫೀ.ಮಾ. ಕಾರ್ಯಪ್ಪ ಒಳಾಂಗಣ ಸಭಾಂಗಣದಲ್ಲಿ ಈ ಕ್ರೀಡೆಗೆ ಚಾಲನೆ ನೀಡಲಾಗಿತ್ತು. ಕೆಲವು ಮಕ್ಕಳಿಂದ ಆರಂಭಗೊAಡ ಕ್ರೀಡೆ ನಂತರದಲ್ಲಿ ಜನಪ್ರಿಯಗೊಂಡು ಸುಮಾರು ೧೦೦ಕ್ಕೂ ಅಧಿಕ ಮಕ್ಕಳು ಸೇರ್ಪಡೆಗೊಂಡರು. ಬೆಳಿಗ್ಗೆ-ಸಂಜೆ ತರಬೇತಿ ನೀಡಲಾಗುತ್ತಿತ್ತು. ಪೋಷಕರೂ ಬೆಂಬಲ ನೀಡುತ್ತಿದ್ದರು.
ಇದರ ಪರಿಣಾಮವಾಗಿ ನಡೆದ ಪ್ರಯತ್ನದ ಫಲವಾಗಿ ಇದಕ್ಕೆ ಪ್ರತ್ಯೇಕ ಜಾಗವೊಂದೂ ಲಭ್ಯವಾಗಿತ್ತು. ಆಗ ಜಿಲ್ಲಾಧಿಕಾರಿಯಾಗಿದ್ದ ಶ್ರೀಕಾಂತ್ ವಾಲಗದ್ ಅವರು ಫುಟ್ಬಾಲ್ ಮೈದಾನದ ಬಳಿಯ ಜಾಗವನ್ನು ಒದಗಿಸುವಲ್ಲಿ ನೆರವಾಗಿದ್ದರು. ಇದಕ್ಕೆ ರಾಜಕೀಯ ಪ್ರಮುಖರಾದ ಸುನಿಲ್ ಸುಬ್ರಮಣಿ, ಕೆ.ಜಿ. ಬೋಪಯ್ಯ ಅವರುಗಳೂ ಸಹಕಾರ ನೀಡಿದ್ದರು. ಸಂಸದರಾಗಿದ್ದ ಧನಂಜಯಕುಮಾರ್ ಅವರ ನಿಧಿಯಿಂದ ಸೇರಿದಂತೆ ದೇಣಿಗೆಯೂ ಸಂಗ್ರಹವಾಗಿ ಜಿಲ್ಲೆಯಲ್ಲೇ ಪ್ರಥಮವಾಗಿ ರೋಲರ್ ಸ್ಕೇಟಿಂಗ್ ರಿಂಕ್ ಸ್ಥಾಪನೆಗೊಂಡಿತ್ತು.
ಕೊಡಗು ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಎಂದು ಪ್ರಾರಂಭಿಸಲಾದ ಈ ಸಂಸ್ಥೆಯ ಮೂಲಕ ಇದು ನಿರ್ವಹಣೆಯಾಗುತ್ತಿತ್ತು. ಕೆಲ ಅಡೆ-ತಡೆಗಳು ಎದುರಾದರೂ ನಂತರ ಸಮಸ್ಯೆ ಮುಂದುವರಿಯಲಿಲ್ಲ. ಜಿಲ್ಲೆ, ರಾಜ್ಯ, ರಾಷ್ಟçದ ವಿವಿಧೆಡೆಗೆ ಸ್ಕೇಟಿಂಗ್ ಪಟುಗಳು ತೆರಳಿ ಸಾಧನೆ ತೋರಿದ್ದರು.
ಪ್ರಮುಖ ಕ್ರೀಡಾಕೂಟಗಳು
ಜಿಲ್ಲಾಮಟ್ಟದಲ್ಲಿನ ಸ್ಪರ್ಧೆಗಳೊಂದಿಗೆ ಇದೇ ಸ್ಕೇಟಿಂಗ್ ರಿಂಕ್‌ನಲ್ಲಿ ಅಖಿಲ ಭಾರತ ಆಹ್ವಾನಿತ ಪಂದ್ಯಾಟ, ರಾಜ್ಯಮಟ್ಟದ ಪಂದ್ಯಾವಳಿ ಕೂಡ ಈ ಸಂದರ್ಭದಲ್ಲಿ ಜರುಗಿತ್ತು. ಜಿಲ್ಲಾ ಸಂಸ್ಥೆಯ ಅಂಗ ಸಂಸ್ಥೆಗಳಾಗಿ ಕುಶಾಲನಗರ, ವೀರಾಜಪೇಟೆ, ಗೋಣಿಕೊಪ್ಪದಲ್ಲೂ ಸಂಸ್ಥೆಗಳು ರಚನೆಗೊಂಡಿದ್ದವು. ಇತರೆಡೆ ರಿಂಕ್ ಪ್ರತ್ಯೇಕವಾಗಿಲ್ಲದಿದ್ದರೂ, ಬಾಸ್ಕೆಟ್ ಬಾಲ್ ಕ್ರೀಡಾಂಗಣದಲ್ಲಿ ಮಕ್ಕಳು ತರಬೇತಿ ಪಡೆಯುತ್ತಿದ್ದರು. ಮಕ್ಕಂದೂರಿನವರಾದ ಕುಂಬುಗೌಡನ ಜಗದೀಪ್ ಅವರು ತರಬೇತುದಾರರಾಗಿ ಸಾಕಷ್ಟು ಮಕ್ಕಳಿಗೆ ತರಬೇತಿ ನೀಡುತ್ತಿದ್ದರು. ಬೇಸಿಗೆ ಶಿಬಿರಗಳೂ ನಡೆಯುತ್ತಿದ್ದವು.
ಜೀವನ್ ಚಿಣ್ಣಪ್ಪ ಅವರ ನಂತರ ಕನ್ನಂಡ ಸಾಬು ಕರುಂಬಯ್ಯ ಅವರು ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ನಂತರದಲ್ಲಿ ೨೦೦೯ರ ಬಳಿಕ ಆ ಸಂದರ್ಭದಲ್ಲಿ ಇದ್ದ ಮಕ್ಕಳು ಇತರೆಡೆ ತೆರಳಿದ ನಂತರ ಈ ಕ್ರೀಡೆ ಮಾತ್ರವಲ್ಲ, ಸ್ಕೇಟಿಂಗ್, ರಿಂಕ್ ಕೂಡ ಅಧಃಪತನದತ್ತ ಸಾಗಿತು. ಕೆಲವೇ ಸಮಯದಲ್ಲಿ ಎಲ್ಲಾ ಚಟುವಟಿಕೆಗಳು ನಿಂತೇ ಹೋದವು. ಜಿಲ್ಲಾ ಸಂಸ್ಥೆ, ರಾಜ್ಯ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್‌ನ ಸಹಭಾಗಿತ್ವವನ್ನೂ ಹೊಂದಿತ್ತು.
ಮರು ಹಸ್ತಾಂತರ
ಸ್ಕೇಟಿAಗ್ ಚಟುವಟಿಕೆಗಳು ಮರೆಯಾದ ನಂತರ ೨೦೧೪ರ ಸಂದರ್ಭದಲ್ಲಿ ಜಿಲ್ಲಾ ರೋಲರ್ ಸ್ಕೇಟಿಂಗ್ ಸಂಸ್ಥೆಯವರು ಈ ಜಾಗವನ್ನು (ಸ್ಕೇಟಿಂಗ್ ರಿಂಕ್) ಸಹಿತವಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರ ಮಾಡಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯವರು ಸುಮಾರು ೧೦ ಲಕ್ಷ ವೆಚ್ಚದಲ್ಲಿ ಈ ಸ್ಕೇಟಿಂಗ್ ರಿಂಕ್ ಅನ್ನು ಸಜ್ಜುಗೊಳಿಸಿದ್ದರು.
ನಂತರದಲ್ಲಿ ಚಟುವಟಿಕೆ ರಹಿತ
ರಿಂಕ್ ಹಸ್ತಾಂತರದ ನಂತರ ಇದೀಗ ಹಲವಾರು ವರ್ಷಗಳೇ ಕಳೆದರೂ ಇದರತ್ತ ಯಾರೂ ಗಮನ ಹರಿಸಿಲ್ಲ. ಇದರಿಂದಾಗಿ ಇದು ಕಾಡುಪಾಲಾದಂತಿದೆ. ರಿಂಕ್‌ನ ಸ್ಥಳ ಮಾತ್ರ ಹಾಗೆಯೇ ಉಳಿದಿದ್ದು, ಈಗಲೂ ಇದನ್ನು ಪುನರ್ ನವೀಕರಣ ಮಾಡಬಹುದಾಗಿದೆ. ಪ್ರಸ್ತುತ ಈ ಜಾಗ ರಿಂಕ್ ಸಹಿತವಾಗಿ ಜಿಲ್ಲಾ ಯುವ ಜನಸೇವಾ ಮತ್ತು ಕ್ರೀಡಾ ಇಲಾಖೆಯ ಅಧೀನದಲ್ಲಿದೆ. ಕೆಲ ವರ್ಷದಿಂದ ಅಧಿಕೃತ ಸರ್ವೆ ಕಾರ್ಯವನ್ನೂ ನಡೆಸಿ ಇಲಾಖೆ ಇದನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಈ ಬಗ್ಗೆ ಜಿಲ್ಲಾ ಕ್ರೀಡಾಂಗಣ ಸಮಿತಿ ಸಭೆಯಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದ್ದರೂ, ಯಾವುದೇ ಪ್ರಗತಿ ಕಂಡುಬAದಿಲ್ಲ. ಈಗಿನ ಜಿಲ್ಲಾಧಿಕಾರಿಗಳು ಕ್ರೀಡಾಸಕ್ತರಾಗಿದ್ದು, ಜಿಲ್ಲಾ ಕ್ರೀಡಾಂಗಣ ಸಮಿತಿ ಅಧ್ಯಕ್ಷರೂ ಆಗಿರುವ ಇವರು ಈ ಬಗ್ಗೆ ಮುತುವರ್ಜಿ ವಹಿಸಿ ಸ್ಕೇಟಿಂಗ್ ಕ್ರೀಡೆಗೆ ಮತ್ತೆ ಕಾಯಕಲ್ಪ ನೀಡಲು ಆಸಕ್ತಿ ತೋರಲಿ ಎಂಬುದು ಕ್ರೀಡಾಪ್ರೇಮಿಗಳ ಆಶಯವಾಗಿದೆ.
ಸಂಸ್ಥೆಯೊAದರ ಮೂಲಕ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಾಣಗೊಂಡು ಸರಕಾರದ ಸುಪರ್ದಿಗೆ ನೀಡಲಾದ ಸ್ಕೇಟಿಂಗ್ ರಿಂಕ್ ಮತ್ತೆ ಸದ್ಬಳಕೆಗೆ ಬರಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.