ಭಾಗಮಂಡಲ, ಡಿ. ೨೮: ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಮಕ್ಕಳಿಗೆ ತಾವು ಏನನ್ನು ಕಲಿಸಬೇಕು ಎಂಬ ಚಿಂತೆ ಕ್ಷಣ ಕ್ಷಣಕ್ಕೂ ಯೋಚಿಸಬೇಕಾದ ಅನಿವಾರ್ಯತೆ ಇಂದು ಪೋಷಕರಿಗೆ ಬಂದೊದಗಿದೆ ಎಂದು ಆದಿಚುಂಚನಗಿರಿ ಸಂಸ್ಥಾನ ಮಠದ ಕಾರ್ಯದರ್ಶಿ ಶಂಭುನಾಥ ಸ್ವಾಮೀಜಿಯವರು ಹೇಳಿದರು. ಭಾಗಮಂಡಲದ ಕಾವೇರಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮನಸ್ಸು ಇಟ್ಟುಕೊಂಡು ವಿದ್ಯೆ ಕಲಿತಲ್ಲಿ ಬಹುದೂರ ಸಾಗುವಂತೆ ಮಾಡುತ್ತದೆ ಎಂದರು

ಡಿವೈಎಸ್ಪಿ ಗಜೇಂದ್ರ ಪ್ರಸಾದ್ ಮಾತನಾಡಿ ಶೈಕ್ಷಣಿಕ ಕ್ಷೇತ್ರಕ್ಕೆ ಸರ್ಕಾರ ಮಾಡದಂತಹದನ್ನು ಆದಿಚುಂಚನಗಿರಿ ಮಠವು ಮಾಡುತ್ತಿದೆ. ಜ್ಞಾನದ ಹಸಿವು ನೀಗಿಸಬೇಕಾದರೆ ಮಹತ್ವಾಕಾಂಕ್ಷೆ, ಕನಸು ಇರಬೇಕು ಎಂದರು.

ವಾರ್ಷಿಕೋತ್ಸವದ ಅಂಗವಾಗಿ ಮಹಿಳೆಯರಿಗೆ ಮತ್ತು ಪುರುಷರಿಗೆ ಕ್ರೀಡಾಕೂಟ ಕಾರ್ಯಕ್ರಮ ಜರುಗಿತು. ಕ್ರೀಡಾ ಕಾರ್ಯಕ್ರಮವನ್ನು ರಾಷ್ಟಿçÃಯ ಮಾಸ್ರ‍್ಸ್ ಅಥ್ಲೆಟಿಕ್ಸ್ ಓಟಗಾರ ಸೂದನ ಡಾಲಿ ಉದ್ಘಾಟಿಸಿದರು. ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಕುದುಕುಳಿ ಮಿಲನ ಭರತ್ ಉದ್ಘಾಟಿಸಿ ಮಾತನಾಡಿ, ಅನುಮಾನ, ಅವಮಾನ, ಸನ್ಮಾನ ಇದು ಪ್ರತಿಯೊಬ್ಬ ಸಾಧಕನ ಹಾದಿಯಲ್ಲಿರುವ ಅಂಶಗಳು. ಇವುಗಳನ್ನು ಸಹಿಸಿಕೊಂಡು ಹೋದರೆ ಶ್ರೇಷ್ಠ ವ್ಯಕ್ತಿ ಆಗಲು ಸಾಧ್ಯ ಎಂದರು. ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ರೋಮಾಂಚಕಾರಿ ಯಾಗಿತ್ತು. ಭಕ್ತಿ ಪರೋಕ್ಷತೆಯ ಕಾರ್ಯಕ್ರಮಗಳು ಜರಗಿದವು. ಧರಣಿ ಮಂಡಲ ನೃತ್ಯವು ಪ್ರೇಕ್ಷಕರ ಮನಗೆದ್ದು ಹಲವು ಪ್ರೋತ್ಸಾಹಕ ಬಹುಮಾನಗಳನ್ನು ಗಿಟ್ಟಿಸಿಕೊಂಡಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ವಹಿಸಿದ್ದರು. ಬೆಂಗಳೂರು ಗೌಡ ಸಮಾಜದ ಅಧ್ಯಕ್ಷ ಕೇಕಡ ನಾಣಯ್ಯ, ಸಂಸ್ಥೆಯ ಉಪಾಧ್ಯಕ್ಷ ಹ್ಯಾರಿಸ್, ಕಾರ್ಯದರ್ಶಿ ನಿಡ್ಯಮಲೆ ರವೀಂದ್ರ, ನಿರ್ದೇಶಕ ರವಿ ಹೆಬ್ಬಾರ್, ನಂಜುAಡಪ್ಪ, ಮನೋಜ್, ನಿರಂಜನ್, ಬಾರಿಕೆ ಪುಷ್ಪ, ಮೊಟ್ಟನ ಜೋತಿಶಂಕರ್, ಪ್ರಾಂಶುಪಾಲರಾದ ದಿವಾಕರ್, ಮುಖ್ಯ ಶಿಕ್ಷಕ ಶ್ರೀ ಕೃಷ್ಣ ಉಪಸ್ಥಿತರಿದ್ದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಮಿತ, ಸದಸ್ಯರಾದ ದಂಡಿನ ಜಯಂತ್, ಶಿರಕಜ್ಜೆ ನಾಗೇಶ್, ನಿತ್ಯಾನಂದ, ಹೈಕೋರ್ಟ್ ವಕೀಲ ಮೊಟ್ಟನ ರವಿಕುಮಾರ್, ದತ್ತಿನಿಧಿ ಸ್ಥಾಪಕರು, ದಾನಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕ ಶಿವಪ್ಪ ನಿರೂಪಿಸಿದರು. ಹೇಮಂತ್ ವಂದಿಸಿದರು.