ಮಡಿಕೇರಿ, ಡಿ. ೨೮ : ಮೇಕೇರಿ ಗ್ರಾಮದಲ್ಲಿ ನೆಲೆನಿಂತಿರುವ ಶ್ರೀ ಗೌರಿಶಂಕರ ದೇವಾಲಯದ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವವು ಇಂದಿನಿAದ ಆರಂಭಗೊAಡಿದೆ.

ತಾ.೨೮ ರಂದು ಬೆಳಿಗ್ಗೆ ೬ ಗಂಟೆಯಿAದ ಮಧ್ಯಾಹ್ನ ೧೨ ಗಂಟೆಯವರೆಗೆ ದೇವರಲ್ಲಿ ಪ್ರಾರ್ಥನೆ, ಶ್ರೀ ಗಣಪತಿ ಹೋಮ, ಬೆಳಿಗ್ಗೆ ೭ ಗಂಟೆಗೆ ತೋರಣ ಸಂಸ್ಕಾರ, ಧ್ವಜಸ್ಥಂಭ ಪೂಜೆ, ಉಗ್ರಾಣ ಪೂಜೆ, ಬೆಳಿಗ್ಗೆ ೭.೩೦ ಕ್ಕೆ ಶ್ರೀ ಪನ್ನಂಗಾಲತಮ್ಮೆ ದೇವಿ ಸನ್ನಿಧಿಗೆ ಮೆರವಣಿಗೆ ತೆರಳಿ ಪೂಜೆ ಹಾಗೂ ಅನುಗ್ರಹ ಬೇಡಿಕೆ ಪೂಜೆ, ಬೆಳಿಗ್ಗೆ ೧೦.೩೦ರಿಂದ ೧೨ ಗಂಟೆಯವರೆಗೆ ಗ್ರಾಮದ ನಾಲ್ಕು ದಿಕ್ಕುಗಳಿಂದ ಕಾಲ್ನಡಿಗೆಯ ಮೂಲಕ ಸಾಗಿ ಬಂದು ದೇವ ಸನ್ನಿಧಿಯಲ್ಲಿ ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ ನಂತರ ಅನ್ನಸಂತರ್ಪಣೆ ನೆರವೇರಿತು. ಸಂಜೆ ೭.೩೦ರಿಂದ ಕಲ್ಲಡ್ಕ ವಿಠ್ಠಲ ನಾಯಕ್ ಹಾಗೂ ತಂಡದವರಿAದ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಿತು.

ತಾ.೨೯ ರಂದು (ಇಂದು) ಬೆಳಿಗ್ಗೆ ೬ ಗಂಟೆಯಿAದ ಮಧ್ಯಾಹ್ನ ೧೨.೩೦ ರವರೆಗೆ ಪುಣ್ಯಾಹವಾಚನ, ದೇವನಾಂದಿ, ಶ್ರೀ ಗಣಪತಿ ಹೋಮ, ಬ್ರಹ್ಮಕೂರ್ಚ ಹೋಮ, ಅಂಕುರ ಪೂಜೆ, ನವಗ್ರಹ ಹೋಮ, ನವಗ್ರಹರಿಗೆ ಅನುಜ್ಞಾಕಲಶ, ಸಂಜೀವಿನಿ ಮಹಾ ಮೃತ್ಯುಂಜಯ ಹೋಮ, ಬಿಂಬ ಶುದ್ಧಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ., ಸಂಜೆ ೬ ರಿಂದ ೯.೩೦ರವೆಗೆ ದುರ್ಗಾ ದೀಪ ನಮಸ್ಕಾರ ಪೂಜೆ, ಅಘೋರ ಹೋಮ, ಪ್ರಾಯಶ್ಚಿತ ಹೋಮ, ದೇವರಿಗೆ ಅದಿವಾಸ ಹೋಮ, ಮಹಾ ಪೂಜೆ, ದೇವರಿಗೆ ಶಯನ, ಅಂಕುರ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೭.೩೦ರಿಂದ ೯.೩೦ರವರೆಗೆ ಮಡಿಕೇರಿಯ ಶ್ರೀ ರಾಮಾಂಜನೇಯ ಭಜನಾ ಮಂಡಳಿ ವತಿಯಿಂದ ಭಕ್ತಿ ಸಂಗೀತ ಸುಧೆ ಕಾರ್ಯಕ್ರಮ ನಡೆಯಲಿದೆ.