*ಗೋಣಿಕೊಪ್ಪ, ಡಿ. ೨೮: ಕೇರಳ ರಾಜ್ಯದ ಬೈತೂರಿನಲ್ಲಿ ಜನವರಿ ೨೨ ರಿಂದ ಜ. ೨೫ ರವರೆಗೆ ಹಬ್ಬ ನಡೆಯಲಿದ್ದು, ಈ ಬಾರಿ ದೇವರಿಗೆ ೧೨ ಸಾವಿರ ತೆಂಗಿನಕಾಯಿ ಒಡೆಯುವ ಸಂಪ್ರದಾಯ ಇದೆ ಎಂದು ದೇವಸ್ಥಾನ ತಕ್ಕ ಪುಗ್ಗೇರ ಪೊನ್ನಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಚರಣೆಯಂತೆ ಕೊಡಗಿನ ಭಕ್ತರು ಎಟ್ಟೂಟ್‌ರಿಂದ ಪನ್ನಂದೂಟ್‌ವರೆಗೆ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಜ. ೨೨ ರಂದು ಎಟ್ಟೂಟ್, ೨೩ ರಂದು ಒಯಿಂಬದೂಟ್, ಜ. ೨೪ ರಂದು ಪತ್ತೂಟ್, ಜ. ೨೫ ರಂದು ಪನ್ನಂದೂಟ್ ಆಚರಣೆ ನಡೆಯುತ್ತದೆ. ಕೊನೆಯ ದಿನದ ಪನ್ನಂದೂಟ್ ಆಚರಣೆಗೆ ಕೊಡಗಿನ ದೇವರುಗಳ ಸಂಗಮವಾಗುತ್ತವೆ. ಅಲ್ಲಿನ ಹೊಳೆಯಲ್ಲಿ ಸ್ನಾನ ಮಾಡಿ ಬಂದು ಬೈತೂರಚ್ಚನಿಂದ ಶಕ್ತಿ ಪಡೆಯುವುದು ಇಲ್ಲಿನ ಪ್ರಮುಖ ಆಚರಣೆ. ಜನವರಿ ೨೬ ರಂದು ಆರಾಟ್ ನಮ್ಮೆ ನಡೆಯುತ್ತದೆ. ಜನವರಿ ೧೩ಕ್ಕೆ ಕೇರಳದ ಸಂಪ್ರದಾಯದAತೆ ಹಬ್ಬ ಚಾಲನೆ ಪಡೆದುಕೊಳ್ಳುತ್ತದೆ. ಕೊಡಗಿನ ಆಚರಣೆಯು ಜನವರಿ ೨೨ ರಿಂದ ಜ. ೨೫ ರವರೆಗೆ ನಡೆಯಲಿದೆ ಎಂದರು.
ಹಿAದಿನ ಸಂಪ್ರದಾಯದAತೆ ತಡೆರಹಿತವಾಗಿ ೧೨ ಸಾವಿರ ತೆಂಗಿನಕಾಯಿ ಒಡೆಯಲಾಗುತ್ತದೆ. ಕೊರೊನಾ ಹಿನ್ನೆಲೆ ಮೂರು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಎಲ್ಲರೂ ಸೇರಲು ಮುಕ್ತ ಅವಕಾಶ ಕಲ್ಪಿಸಿದೆ. ಭಕ್ತರಿಂದ ಎಣ್ಣೆ, ತೆಂಗಿನಕಾಯಿ, ಅಕ್ಕಿ ಸಂಗ್ರಹಿಸ ಲಾಗುವುದು. ಜಿಲ್ಲೆಯ ವಿವಿಧೆಡೆ ಸಂಗ್ರಹ ಕೇಂದ್ರಗಳ ಮಾಹಿತಿ ಶೀಘ್ರದಲ್ಲಿಯೇ ನೀಡಲಾಗುವುದು ಎಂದು ತಿಳಿಸಿದರು.
ವರ್ಷಂಪ್ರತಿ ೧ ಸಾವಿರ, ಒಂದುವರೆ ಸಾವಿರ ತೆಂಗಿನಕಾಯಿ ಗಳನ್ನು ಒಡೆಯುವ ಸಂಪ್ರದಾಯ ವಿದ್ದು, ಕೊರೊನಾ ನಂತರ ಒಂದೇ ಬಾರಿಗೆ ೧೨ ಸಾವಿರ ತೆಂಗಿನ ಕಾಯಿಗಳನ್ನು ಒಡೆಯಲಾಗುತ್ತದೆ. ಮೂರುವರೆ ಗಂಟೆ ಅವಧಿಯಲ್ಲಿ ೧೨ ಸಾವಿರ ತೆಂಗಿನಕಾಯಿಗಳನ್ನು ಒಡೆಯುವುದು ಇಲ್ಲಿನ ಸಂಪ್ರದಾಯ ದಲ್ಲಿದೆ. ಬೇಟೆ ಕುರುಮನಿಗೆ ಕೊರೊನಾ ಹಿನ್ನೆಲೆ ಇಂತಹ ಆಚರಣೆ ಗಳು ನಡೆದಿರಲಿಲ್ಲ. ಇದರಿಂದಾಗಿ ಈ ಬಾರಿ ಕೊಡಗಿನ ಭಕ್ತರಿಂದ ೧೨ ಸಾವಿರ ತೆಂಗಿನಕಾಯಿ ಗಳನ್ನು ಸಂಗ್ರಹಿಸಿ ದೇವರ ಎದುರು ಒಡೆಯಲಾಗುತ್ತದೆ. ರಾಶಿ ಹಾಕಿರುವ ತೆಂಗಿನಕಾಯಿಗಳನ್ನು ಒಬ್ಬನೇ ವ್ಯಕ್ತಿ ಕಲ್ಲಿಗೆ ಎಸೆದು ಒಡೆದು ಅರ್ಪಿಸುತ್ತಾರೆ. ಜನವರಿ ೨೩ ರ ರಾತ್ರಿ ೯ ಗಂಟೆಗೆ ಆಚರಿಸಲಾಗುತ್ತದೆ ಎಂದರು.
ಹಬ್ಬ ಆರಂಭದ ಮಾಹಿತಿಯನ್ನು ದೈವಸ್ಥಾನದಿಂದಲೇ ದೈವಶಕ್ತಿ ಹೊಂದಿರುವ ಕೋಮರತಜ್ಜ ಆಗಮಿಸಿ ಪ್ರಚಾರಪಡಿಸುವ ಆಚರಣೆ ಇದೆ. ಇದರಂತೆ ೯ ದಿನ ಜಿಲ್ಲೆಯ ವಿವಿಧ ಭಾಗಗಳಿಗೆ ತೆರಳಿ ಮಾಹಿತಿ ನೀಡಲಾಗುತ್ತದೆ. ಜನವರಿ ೯ ರವರೆಗೆ ಪ್ರಚಾರ ಮಾಡಲಾಗುತ್ತದೆ. ಡಿಸೆಂಬರ್ ೩೧ ರಂದು ಬೈತೂರಿನಿಂದ ಜಿಲ್ಲೆಯ ಪೆಗ್ಗಳ ದೇವಸ್ಥಾನಕ್ಕೆ ಆಗಮಿಸುತ್ತದೆ. ನಂತರ ಅಲ್ಲಿ ಪೂಜೆ ಸಲ್ಲಿಸಿ ಜನವರಿ ೧ ರಂದು ಪುಗ್ಗೇರ ನಂದಾ ಗಣಪತಿ, ಕೊಳುವಂಡ ಐನ್‌ಮನೆ, ಚೆಂಬೆಬೆಳ್ಳೂರು ಈಶ್ವರ ದೇವಸ್ಥಾನಕ್ಕೆ ಭೇಟಿ ನೀಡುತ್ತದೆ. ಹೀಗೆ ದೇವಣಗೇರಿ ಮುಕ್ಕಾಟೀರ ಐನ್‌ಮನೆ, ಈಶ್ವರ ದೇವಸ್ಥಾನ, ಪುಗ್ಗೇರ ಐನ್‌ಮನೆ, ಭಗವತಿ ದೇವಸ್ಥಾನ, ಹಾಲುಗುಂದ ಭಗವತಿ ದೇವಸ್ಥಾನ, ಮೈತಾಡಿ ಚಪ್ಪಂಡ ಐನ್‌ಮನೆ, ಅಯ್ಯಪ್ಪ ದೇವಸ್ಥಾನ, ಐಚೇಟ್ಟೀರ ಐನ್‌ಮನೆ, ಬೇರೆರ ಕೈಮಡ, ಕುಂಜಿಲಗೇರಿ ಮುಕ್ಕಾಟೀರ ಐನ್‌ಮನೆ, ಬೊಳ್ಳುಮಾಡ್ ಮಾತಂಡ ಐನ್‌ಮನೆ, ಬಲ್ಲಚಂಡ ಐನ್‌ಮನೆ, ಅರಮೇರಿ ಭಗವತಿ ದೇವಸ್ಥಾನ, ಕದನೂರು ಪಾಲೇಕಂಡ ಐನ್‌ಮನೆ, ಕೆದಮುಳ್ಳೂರು ಈಶ್ವರ ದೇವಸ್ಥಾನ, ಕದನೂರು ಭಗವತಿ, ಮಗ್ಗುಲ ದೇವಸ್ಥಾನ, ಚೋಕಂಡ ಐನ್‌ಮನೆ, ಅಯ್ಯಪ್ಪ ದೇವಸ್ಥಾನ, ಪುಲಿಯಂಡ ಐನ್‌ಮನೆ, ಮಡಿಕೇರಿ ಓಂಕಾರೇಶ್ವರ ದೇವಸ್ಥಾನ, ವೀರಾಜಪೇಟೆ ಗಣಪತಿ ದೇವಸ್ಥಾನ, ಮಾಚೇಟೀರ ಮನೆ, ಕಾಮೇಯಂಡ ಮನೆ, ಕೊಡಂದೇರ ಮನೆ, ಮೂರೀರ ಮನೆ, ಅಮ್ಮಣಕುಟ್ಟಂಡ ಮನೆ, ಸಾಯಂಕಾಲ ಬೈತೂರಿಗೆ ತೆರಳುತ್ತದೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಟ್ರಸ್ಟಿ ಮಾಳೇಟಿರ ರತ್ನ ಸುಬ್ಬಯ್ಯ, ಭಕ್ತರಾದ ನಂದಾ ಸುಬ್ಬಯ್ಯ, ಪುಗ್ಗೇರ ದೇವಯ್ಯ, ಚೇಂದAಡ ಶಿವಕುಮಾರ್ ಇದ್ದರು.