ನಾಪೋಕ್ಲು, ಡಿ. ೨೮: ವಿದ್ಯಾರ್ಥಿಗಳು ಸುರ್ಯೋದಯಕ್ಕೆ ಮುನ್ನ ಎದ್ದು ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡರೆ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಸಾಧ್ಯ ಎಂದು ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಡಾ. ಚೌರೀರ ಜಗತ್ ತಿಮ್ಮಯ್ಯ ಸಲಹೆ ನೀಡಿದರು.

ಕಕ್ಕಬ್ಬೆ ಕೇಂದ್ರ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ವಿದ್ಯೆ, ಕ್ರೀಡೆಯೊಂದಿಗೆ ಶಿಸ್ತು, ಪ್ರಾಮಾಣಿಕತೆ, ಸ್ವಚ್ಛತೆ, ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮತ್ತೋರ್ವ ಮುಖ್ಯ ಅತಿಥಿ ಲಯನ್ಸ್ ಕ್ಲಬ್ ಜೋ಼ನಲ್ ಅಧ್ಯಕ್ಷ ಮುಕ್ಕಾಟಿರ ವಿನಯ್ ಮಾತನಾಡಿ, ಇತ್ತೀಚಿನ ಶೈಕ್ಷಣಿಕ ಒತ್ತಡದ ನಡುವೆ ಕ್ರೀಡೆಗೆ ಅವಕಾಶ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಚ್ಚಿನ ಶಿಕ್ಷಣ ಸಂಸ್ಥೆಗಳಲ್ಲಿ ಆಟದ ಮೈದಾನಗಳೇ ಇಲ್ಲ. ಆದರೆ, ಕೊಡಗಿನ ಎಲ್ಲಾ ವಿದ್ಯಾಸಂಸ್ಥೆಗಳಲ್ಲಿ ಸುಸಜ್ಜಿತ ಮೈದಾನಗಳಿವೆ. ಇದು ಜಿಲ್ಲೆಯ ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಳಿಗೆ ವರದಾನವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಅಧ್ಯಕ್ಷ ಕೇಟೋಳಿರ ಕುಟ್ಟಪ್ಪ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ಪೈಯಡಿ ಹಂಸ, ಬಾತ್ಮೀದಾರ ಕಲ್ಯಾಟಂಡ ಸುದಾ ಗಣಪತಿ, ನಿರ್ದೇಶಕರಾದ ಪಾಂಡAಡ ಕಿಶನ್, ಪರದಂಡ ಸದಾ ನಾಣಯ್ಯ, ಕೋಟೆರ ನೈಲ್ ಚಂಗಪ್ಪ, ಚೋಯಮಾಡಂಡ ಅರುಣ್ ಇದ್ದರು. ಪ್ರೌಢಶಾಲಾ ವಾರ್ಷಿಕ ವರದಿಯನ್ನು ಮುಖ್ಯ ಶಿಕ್ಷಕ ಅನಿಲ್ ರಾಜ್, ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕ ವರದಿಯನ್ನು ಮುಖ್ಯ ಶಿಕ್ಷಕಿ ಲೀಲಾವತಿ ವಾಚಿಸಿದರು. ಕಾರ್ಯಕ್ರಮದಲ್ಲಿ ಅಂತರ ಗ್ರಾಮ ಕ್ರೀಡಾಕೂಟಗಳಲ್ಲಿ ವಿಜೇತರಾದ ಸಾರ್ವಜನಿಕರಿಗೆ ಹಾಗೂ ಆಟೋಟ ಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವಾರ್ಷಿಕೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಸಾಮೂಹಿಕ ಯೋಗ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನದ ಅನ್ನದಾನವನ್ನು ಕಲ್ಯಾಟಂಡ ಮುತ್ತಪ್ಪ ತಮ್ಮ ಪತ್ನಿ ದಿ. ಜಾಜಿ ಜಾನಕಿ ಅವರ ಸ್ಮರಣಾರ್ಥ ನೀಡಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ನಿಯರು ಪ್ರಾರ್ಥಿಸಿ, ಆಡಳಿತ ಮಂಡಳಿ ನಿರ್ದೇಶಕ ಅಂಜಪರವAಡ ಕುಶಾಲಪ್ಪ ಸ್ವಾಗತಿಸಿ, ಶಿಕ್ಷಕಿ ಅರೆಯಡ ಬಬಿತಾ ಜೀವನ್ ನಿರೂಪಿಸಿ, ನಿರ್ದೇಶಕ ಬೊಳಿಯಾಡಿರ ಸಂತು ಸುಬ್ರಮಣಿ ವಂದಿಸಿದರು.