ಮಡಿಕೇರಿ, ಡಿ. ೨೮: ಆಸ್ತಿ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವರು ಮತ್ತೋರ್ವನಿಗೆ ಬಂದೂಕಿನಿAದ ಗುಂಡು ಹಾರಿಸಿದ ಘಟನೆ ಮಡಿಕೇರಿ ಸಮೀಪದ ಬಿಳಿಗೇರಿಯಲ್ಲಿ ಸಂಭವಿಸಿದೆ.

ಬಿಳಿಗೇರಿ ಗ್ರಾಮದ ದಂಬೆಕೋಡಿ ನಿಶ್ಚಲ್ (ಟಿಪ್ಪು), ಭುಜಂಗಯ್ಯ (ದಾದ) ಹಾಗೂ ದಂಬೆಕೋಡಿ ತೀರ್ಥ ಅವರುಗಳ ಮಧ್ಯೆ ಆಸ್ತಿ ವೈಷಮ್ಯಕ್ಕೆ ಸಂಬAಧಿಸಿದAತೆ ಗಲಾಟೆಗಳು ಆಗಾಗೇ ನಡೆಯುತ್ತಿತ್ತು, ಇಂದು ಆಸ್ತಿ ವಿಷಯಕ್ಕೆ ಸಂಬAಧಿಸಿದAತೆ ಮಾತುಕತೆ ನಡೆಸುವ ಸಂಬAಧ ಊರಿನಲ್ಲಿ ಸಭೆ ಏರ್ಪಡಿಸಲಾಗಿತ್ತು. ಪಿಕ್‌ಅಪ್ ವಾಹನದಲ್ಲಿ ತೀರ್ಥ ಅವರು ಸಭೆಗೆ ಆಗಮಿಸುತ್ತಿದ್ದ ಸಂದರ್ಭ ಭುಜಂಗಯ್ಯ ಅವರು ದಾರಿ ಮಧ್ಯೆ ಕುಳಿತು ಬಂದೂಕಿನಿAದ ಗುಂಡು ಹಾರಿಸಿದ್ದಾರೆ. ಆಚಾನಕ್ಕಾಗಿ ತೀರ್ಥ ಅವರು ಒಮ್ಮೆಲೆ ಬಗ್ಗಿದ್ದರಿಂದ ಗುಂಡು ಕುಳಿತ ಸೀಟು ಹಾಗೂ ವಾಹನಕ್ಕೆ ತಗುಲಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ನಡುವೆ ತೀರ್ಥ ಅವರು ತಮ್ಮ ತೋಟವನ್ನು ಭೋಗ್ಯಕ್ಕೆ ನೀಡಿದ್ದ ವ್ಯಕ್ತಿಗಳು ಈ ರೀತಿಯ ಘಟನೆಯನ್ನು ಖಂಡಿಸಿ, ಹಲ್ಲೆ ನಡೆಸಿದ ಪರಿಣಾಮ ನಿಶ್ಚಲ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.