ಮಡಿಕೇರಿ, ಡಿ. ೨೬: ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ಆಶ್ರಯದಲ್ಲಿ ಸೋಮವಾರ ಬೆಳಗಾಂನಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಮಡಿಕೇರಿ ನಗರಸಭೆಯ ಹನ್ನೊಂದು ಮಂದಿ ಪೌರಸೇವಾ ನೌಕರರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ಕೆ. ಸತ್ಯನಾರಾಯಣ ರವರ ನೇತೃತ್ವದಲ್ಲಿ, ಸಂಘದ ಪದಾಧಿಕಾರಿಗಳಾದ ವೈ.ಇ. ಸೋಮಶೇಖರ, ಎ.ಪಿ. ಅಕ್ರಮ್, ಎ.ಎಸ್. ನಾಗೇಶ, ಪಿ.ಬಿ. ಮೋಹನ್, ಚಂದ್ರಶೇಖರ್, ಚಂದ್ರು, ತಗಿ ಮಾರುತಿ, ಕೆ. ಯೋಗಾನಂದ, ಗಿರೀಶ್ ಕುಮಾರ್ ಮತ್ತು ಪಿ.ಬಿ. ಸುರೇಶ್ ಇವರುಗಳು ಈ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸುವುದರ ಮೂಲಕ ಜಿಲ್ಲೆಯ ಪೌರಸೇವಾ ನೌಕರರ ವಿವಿಧ ಬೇಡಿಕೆಗಳ ಕುರಿತಾದ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.