ಮಡಿಕೇರಿ, ಡಿ. ೨೬: ಇಲ್ಲಿನ ಮಂಗಳಾದೇವಿ ನಗರದ ರಂಜಿನಿ ಎಂಬವರ ಮನೆಯಲ್ಲಿ ಅಡಗಿದ್ದ ಸುಮಾರು ೫ ಅಡಿ ಉದ್ದ, ಅಂದಾಜು ೮ ವರ್ಷ ಪ್ರಾಯದ ನಾಗರ ಹಾವನ್ನು ಉರಗ ರಕ್ಷಕ ಹಾಗೂ ಮಡಿಕೇರಿ ನಗರ ಸಭಾ ಸಿಬ್ಬಂದಿ ಕುಯ್ಯಮುಡಿ ಯದುಕುಮಾರ್ ಹಿಡಿದು ಸುರಕ್ಷಿತವಾಗಿ ಚೈನ್ಗೇಟ್ ಬಳಿಯ ಅರಣ್ಯಕ್ಕೆ ಬಿಟ್ಟರು. ಯಾರಾದರೂ ಹಾವನ್ನು ಕಂಡಲ್ಲಿ ಅದಕ್ಕೆ ತೊಂದರೆ ಕೊಡದೆ ಈ ಸಂಖ್ಯೆಗೆ ೯೪೮೦೭೬೭೨೫೦, ೯೬೩೨೪೮೧೫೦೯ ತಿಳಿಸಿದಲ್ಲಿ ಸಂರಕ್ಷಣೆ ಮಾಡುವುದಾಗಿ ಅವರು ತಿಳಿಸಿದ್ದಾರೆ.