ಕೂಡಿಗೆ, ಡಿ. ೨೭: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿಯಲ್ಲಿ ನೀರಾವರಿ ಇಲಾಖೆಗೆ ಸೇರಿದ ಅಭಿಯಂತರ ಕಚೇರಿಯು ಪಾಳು ಬಿದ್ದಿದ್ದು ಆ ಕಟ್ಟಡದ ಮೇಲೆ ಬೃಹತ್ ಗಾತ್ರದ ಆಲದ ಮರ ಬೆಳೆದು ನಿಂತಿದೆ.

ಕಳೆದ ೧೫ ವರ್ಷಗಳ ಹಿಂದೆ ಹಾರಂಗಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಭಿಯಂತರರ ಕಚೇರಿ ಮತ್ತು ಸಹಾಯಕ ಅಭಿಯಂತರ ಕಚೇರಿಗಳು ಹಾರಂಗಿಯಿAದ ಕುಶಾಲನಗರದಲ್ಲಿರುವ ಹಾರಂಗಿ ವಸಾಹತು ಕೇಂದ್ರದ ಕಟ್ಟಡಗಳಿಗೆ ಸ್ಥಳಾಂತರ ಗೊಂಡ ಹಿನ್ನೆಲೆಯಲ್ಲಿ ಹಾರಂಗಿಯ ಕಟ್ಟಡಗಳು ನಿರ್ವಹಣೆಯಿಲ್ಲದೆ ಇದೀಗ ಒಂದು ಅಂತಸ್ತಿನ ಕಟ್ಟಡದ ಗೋಡೆಯು ಕುಸಿತದ ಹಂತ ತಲುಪಿದೆ. ಇದರ ಗೋಡೆಯ ಮೇಲೆ ಬೃಹತ್ ಗಾತ್ರದ ಆಲದ ಮರ ಸೇರಿದಂತೆ ಇತರ ಜಾತಿಯ ಮರಗಳು ಬೆಳೆದು ನಿಂತಿವೆ. ಕಟ್ಟಡದ ಮೇಲೆ ಬೆಳೆದಿರುವ

(ಮೊದಲ ಪುಟದಿಂದ) ಮರ ಭೂಮಿಯ ತಳಭಾಗದಲ್ಲಿ ಬೆಳೆದ ರೀತಿಯಲ್ಲಿ ಬೆಳೆದು ದೊಡ್ಡ ಗಾತ್ರದ ಬೇರುಗಳನ್ನು ಕಟ್ಟಡದ ಗೋಡೆಯ ಮೇಲೆ ಬಿಟ್ಟಿದೆ.

ಕಾಣದಂತೆ ಇರುವ ಅಧಿಕಾರಿಗಳು

ಹಾರಂಗಿಯಲ್ಲಿದ್ದ ಅಭಿಯಂತರರ ಕಚೇರಿ, ಸಹಾಯಕ ಅಭಿಯಂತರ ಕಚೇರಿ, ಸೇರಿದಂತೆ ವಿವಿಧ ಕಚೇರಿಗಳು ಕುಶಾಲನಗರದಿಂದ ಹಾರಂಗಿಗೆ ಸ್ಥಳಾಂತರ ಮಾಡುವಂತೆ ಸಂಬAಧಿಸಿದ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಮತ್ತು ನೀರಾವರಿ ಸಚಿವರಿಗೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಭಾಸ್ಕರ್ ನಾಯಕ್, ಸೇರಿದಂತೆ ಅಚ್ಚುಕಟ್ಟು ಪ್ರದೇಶದ ರೈತ ಸಂಘಗಳು ಮತ್ತು ರೈತ ಹಿತರಕ್ಷಣಾ ಸಮಿತಿಯವರು ಮನವಿ ಸಲ್ಲಿಸಿದರೂ ಇದುವರೆಗೂ ಯಾವುದೇ ರೀತಿಯ ಸ್ಪಂದನ ದೊರೆತ್ತಿಲ್ಲ, ಅಚ್ಚುಕಟ್ಟು ವ್ಯಾಪ್ತಿಯ ರೈತರ ಸಮಸ್ಯೆಗಳನ್ನು ತಿಳಿಸಲು ಕುಶಾಲನಗರಕ್ಕೆ ಹೋಗುವಂತಹ ಪ್ರಸಂಗ ಎದುರಾಗಿದೆ. ಉತ್ತಮವಾದ ಕಚೇರಿ ನಡೆಸಲು ಕಟ್ಟಡ ಇದ್ದರೂ ಅಧಿಕಾರಿಗಳ ನಿರ್ಲಕ್ಷದಿಂದ ಹಾರಂಗಿಯ ಅನೇಕ ಕಟ್ಟಡಗಳು ಪಾಳುಬಿದ್ದ ಸ್ಮಾರಕಗಳಾಗುತ್ತಿವೆ, ಸಂಬAಧಿಸಿದ ಅಧಿಕಾರಿ ವರ್ಗದವರು ಕಟ್ಟಡಗಳ ಪರಿಶೀಲನೆ ನಡೆಸಿ ದುರಸ್ತಿಪಡಿಸಿ ಕಾರ್ಯ ನಿರ್ವಹಿಸುವ ಹಂತಕ್ಕೆ ಮುಂದಾಗಬೇಕೆAದು ಅಚ್ಚುಕಟ್ಟು ವ್ಯಾಪ್ತಿಯ ರೈತರ ಒತ್ತಾಯವಾಗಿದೆ.

-ಕೆ.ಕೆ.ನಾಗರಾಜಶೆಟ್ಟಿ.