ಸೋಮವಾರಪೇಟೆ, ಡಿ. ೨೭: ಭಾರತೀಯ ಜನತಾ ಪಾರ್ಟಿ ಇತರ ರಾಜಕೀಯ ಪಕ್ಷಗಳಿಗಿಂತ ಭಿನ್ನವಾಗಿದ್ದು, ಇದರಲ್ಲಿ ಪ್ರತಿಯೋರ್ವ ಕಾರ್ಯಕರ್ತರೂ ಸಹ ಸೇವಾ ಮನೋಭಾವದಿಂದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗಡೆ ಕರೆ ನೀಡಿದರು.
ಜಿಲ್ಲಾ ಯುವ ಮೋರ್ಚಾದ ವತಿಯಿಂದ ಸಮೀಪದ ಕರ್ಕಳ್ಳಿ ಗ್ರಾಮದ ಖಾಸಗಿ ಹೋಂಸ್ಟೇಯೊAದರ ಸಭಾಂಗಣದಲ್ಲಿ ಆಯೋಜಿಸಿರುವ ಜಿಲ್ಲಾ ಪ್ರಶಿಕ್ಷಣ ವರ್ಗವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನಸಂಘದ ತರುವಾಯ ಪ್ರವರ್ಧಮಾನಕ್ಕೆ ಬಂದಿರುವ ಭಾರತೀಯ ಜನತಾ ಪಾರ್ಟಿಯು ದೇಶದ ಪ್ರತಿಯೋರ್ವ ಪ್ರಜೆಗೂ ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಲು ಮುನ್ನುಡಿ ಬರೆದಿದೆ. ಸ್ವಾತಂತ್ರö್ಯ ನಂತರದಲ್ಲಿ ಇತ್ತೀಚಿನ ದಿನಗಳಲ್ಲಿ ದೇಶ ಹೆಚ್ಚಿನ ಪ್ರಗತಿ ಸಾಧಿಸುತ್ತಿದೆ. ಪ್ರತಿಯೋರ್ವ ಕಾರ್ಯಕರ್ತನ ಶ್ರಮದಿಂದ ಇಂದು ದೇಶ ಸೇರಿದಂತೆ ಹಲವಷ್ಟು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆ ಎಂದು ಅಜಿತ್ ಹೆಗಡೆ ಹೇಳಿದರು. ಬಿಜೆಪಿ ಯುವ ಮೋರ್ಚಾವು ಕೇವಲ ರಾಜಕೀಯಕ್ಕೆ ಮಾತ್ರ ಸೀಮಿತವಾಗಿಲ್ಲ. ರಾಜಕಾರಣದೊಂದಿಗೆ ಸಮಾಜದಲ್ಲಿ ಸೇವೆಯನ್ನು ಒದಗಿಸುತ್ತಿದೆ. ನಿಸ್ವಾರ್ಥತೆಯಿಂದ ಪಕ್ಷ ಸಂಘಟನೆಗೆ ಮುಂದಾದರೆ ಮಾತ್ರ ಯುವ ಮೋರ್ಚಾದ ಆಶಯಗಳು ಈಡೇರುತ್ತವೆ ಎಂದ ಅವರು, ಯುವ ಜನಾಂಗ ಈ ದೇಶದ ಆಸ್ತಿಯಾಗಿದ್ದು, ಆದರ್ಶಯುತ ಜೀವನಕ್ಕೆ ಆದ್ಯತೆ ನೀಡಬೇಕು. ಬಿಜೆಪಿ ಸಂಘಟನೆಯಲ್ಲಿ ನಿಸ್ವಾರ್ಥತೆಯಿಂದ ತೊಡಗಿಸಿಕೊಳ್ಳಬೇಕು ಎಂದು ಅಜಿತ್ ಹೆಗಡೆ ಹೇಳಿದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಕಾರ್ಯಕರ್ತರೇ ಪಕ್ಷದ ಆಸ್ತಿಯಾಗಿದ್ದು, ಬಿಜೆಪಿಯ ಸಂಘಟನೆಯಲ್ಲಿ ಯುವ ಮೋರ್ಚಾದ ಪಾತ್ರ ಹೆಚ್ಚಿದೆ. ಯುವಕರಲ್ಲಿ ನಾಯಕತ್ವದ ಗುಣಗಳೊಂದಿಗೆ ಸೇವಾ ಮನೋಭಾವನೆ ಮೂಡಿಸುವ ಕೆಲಸವನ್ನು ಯುವ ಮೋರ್ಚಾ ಮಾಡುತ್ತಿದೆ ಎಂದರು. ವೇದಿಕೆಯಲ್ಲಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ದರ್ಶನ್ ಜೋಯಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಮನುಕುಮಾರ್ ರೈ, ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶ್ ತಿಮ್ಮಯ್ಯ ಉಪಸ್ಥಿತರಿದ್ದರು. ಬಿಜೆಪಿ ಮುಖಂಡರಾದ ರೂಪಾ ಸತೀಶ್, ಮಂಜುಳಾ ಸುಬ್ರಮಣಿ, ಹೆಚ್.ಕೆ. ಮಾದಪ್ಪ ಸೇರಿದಂತೆ ಜಿಲ್ಲಾ ಹಾಗೂ ಮಂಡಲ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರುಗಳು, ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಭಾಗಿಯಾಗಿದ್ದರು.