ಶನಿವಾರಸಂತೆ, ಡಿ. ೨೭: ಪಟ್ಟಣದ ವಿಘ್ನೇಶ್ವರ ಕಲ್ಯಾಣ ಮಂಟಪದಲ್ಲಿ ಕೊಡ್ಲಿಪೇಟೆ-ಶನಿವಾರಸಂತೆ ನಿವೃತ್ತ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಎ.ಎಸ್. ಪುಟ್ಟಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಿತು.

ಸಮಾರಂಭದಲ್ಲಿ ೭ ಮಂದಿ ನಿವೃತ್ತ ನೌಕರರನ್ನು ಸನ್ಮಾನಿಸಿ ಗೌರವಿಸಲಾಯಿತು. ವನಜಾಕ್ಷಿ ಸುಬ್ಬಯ್ಯ ಅವರ ನಿಧಿಯಲ್ಲಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜೇತ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು. ಸಂಘದ ಉಪಾಧ್ಯಕ್ಷ ಎಸ್.ಬಿ. ನಂಜಪ್ಪ, ಕಾರ್ಯದರ್ಶಿ ಡಿ.ಬಿ. ಸೋಮಪ್ಪ, ನಿರ್ದೇಶಕರಾದ ಸಿ.ಎಲ್. ಸುಬ್ಬಯ್ಯ, ಕೃಷ್ಣರಾಜು, ರುಕ್ಮಿಣಿ, ಎಸ್.ಪಿ. ರಾಜು, ಸದಸ್ಯರಾದ ಸಿ.ಎಂ. ಪುಟ್ಟಸ್ವಾಮಿ, ಬಿ.ಬಿ. ನಾಗರಾಜ್ ಉಪಸ್ಥಿತರಿದ್ದರು.